ಮತ್ತೆ ಬಂದೇ ಬಿಡ್ತು ದೊಡ್ಡ ಹಬ್ಬ ದೀಪಾವಳಿ
ಪ್ರೀತಿ, ಪಾತ್ರರಿಗೆ ನೀವು ಯಾವೆಲ್ಲ ಗಿಫ್ಟ್ ಕೊಡಬಹುದು?
ದೀಪಾವಳಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ ಜೋರು
ದೀಪಾವಳಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ ಜೋರಾಗಿರುತ್ತದೆ. ಮಾರುಕಟ್ಟೆಗಳು ತುಂಬಿ ತುಳುಕುತ್ತಿರುತ್ತವೆ. ಬಹುತೇಕರು ತಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ ಹಾಗೂ ಆತ್ಮೀಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಯೋಚಿಸುತ್ತಾರೆ. ಪರಸ್ಪರ ಉಡುಗೊರೆ ನೀಡುವ ಮೂಲಕ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ.
ಹಬ್ಬದ ಸಂದರ್ಭದಲ್ಲಿ ಆತ್ಮೀಯರು ಪರಸ್ಪರ ಮನೆಗೆ ತೆರಳಿ ಶುಭಾಶಯ ಮತ್ತು ಉಡುಗೊರೆ ನೀಡುತ್ತಾರೆ. ಇದು ಸಾಮಾಜಿಕ ಮತ್ತು ಕೌಟುಂಬಿಕ ಬಂಧವನ್ನು ಬಲಪಡಿಸುತ್ತದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಪರಸ್ಪರ ಶುಭಾಶಯ ಕೋರಿಕೊಳ್ಳುತ್ತಾರೆ. ಅಂತೆಯೇ ನೀವೇನಾದರೂ ದೀಪಾವಳಿಯಲ್ಲಿ ಬಂಧುಗಳು ಮತ್ತು ಸ್ನೇಹಿತರಿಗೆ ಉಡುಗೊರೆ ನೀಡಲು ಬಯಸುತ್ತಿದ್ದೀರಾ?
ಇದನ್ನೂ ಓದಿ:ದೀಪಾವಳಿ ಸಂಭ್ರಮ.. ಮನೆಯ ಮುಂದೆ ಈ ಬಾರಿ ಡಿಫ್ರೆಂಟ್ ರಂಗೋಲಿ ಇರಲಿ..! 10 ಫೋಟೋಗಳು
ಈ ರೀತಿಯ ಗಿಫ್ಟ್ ನೀಡಬಹುದು..
ದೀಪಗಳು ಅಥವಾ ಮೇಣದ ಬತ್ತಿಗಳು. ದೀಪಾವಳಿಯಲ್ಲಿ ಜನರು ತಮ್ಮ ಮನೆಗಳನ್ನು ದೀಪಗಳು, ಮೇಣದಬತ್ತಿಗಳನ್ನು ಹಚ್ಚಿ ಬೆಳಗುತ್ತಾರೆ. ನೀವು ನಿಮ್ಮ ಸಂಬಂಧಿಕರಿಗೆ ವಿಶೇಷ ದೀಪಗಳು, ಮೇಣದಬತ್ತಿಗಳನ್ನು ಉಡುಗೊರೆಯಾಗಿ ನೀಡಬಹುದು. ಮನೆಯ ಅಲಂಕಾರಕ್ಕೂ ಅವು ಸೂಕ್ತವಾಗಿವೆ. ಸುಂದರವಾಗಿ ವಿನ್ಯಾಸಗೊಳಿಸಿದ ದೀಪಗಳು ಅಥವಾ ಪರಿಮಳಯುಕ್ತ ಮೇಣದಬತ್ತಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ದೀಪವು ದೀಪಾವಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಲ್ಯಾಂಪ್‌ಗಳು ಮಾರುಕಟ್ಟೆಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ವಿವಿಧ ಗಾತ್ರಗಳಲ್ಲಿ ಸಿಗುತ್ತವೆ.
ಅದನ್ನು ಬಿಟ್ಟು ಬೇರೆ ಏನನ್ನಾದರೂ ನೀಡಲು ಬಯಸಿದರೆ ಡ್ರೈ ಫ್ರೂಟ್ಸ್ ಮತ್ತು ಸಿಹಿತಿಂಡಿಗಳನ್ನು ನೀಡಬಹುದು. ಡ್ರೈ ಫ್ರೂಟ್ಸ್ ನೀಡೋದ್ರಿಂದ ಆರೋಗ್ಯವು ಆರೋಗ್ಯಕರವಾಗಿರುತ್ತದೆ. ಅವುಗಳನ್ನು ದೀರ್ಘಕಾಲದವರೆಗೆ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ಗೆ ಪ್ಯಾಕೇಜಿಂಗ್‌ಗಳಿವೆ. ಇದು ಅದ್ಭುತವಾಗಿ ಕಾಣುತ್ತದೆ. ವಿಶೇಷ ತಿಂಡಿಗಳು, ಚಾಕೊಲೇಟ್ಸ್ ಅನ್ನೂ ನೀಡಬಹುದು.
ಅದೂ ಬೇಡ ಅಂತಿದ್ದರೆ ಮನೆಯೊಳಗೆ ಇಡಬಹುದಾದ ಸಸ್ಯಗಳಿಗೆ ಹೂವಿನ ಕುಂಡಗಳನ್ನು ನೀಡಬಹುದು. ಆ ಮೂಲಕ ಪರಿಸರ ಸ್ನೇಹಿ ಉಡುಗೊರೆಯಾಗಿ ದೀಪಾವಳಿ ಆಚರಿಸಬಹುದು. ಇದು ಕೂಡ ಅದ್ಭುತವಾಗಿ ಕಾಣುತ್ತದೆ. ಹೂಗುಚ್ಛವನ್ನೂ ಉಡುಗೊರೆಯಾಗಿ ನೀಡಬಹುದು.
ಇದನ್ನೂ ಓದಿ:ಶ್ರೀರಾಮನ ಊರಿನಲ್ಲಿ ದೀಪಾವಳಿ ಗತವೈಭವ! ಅಯೋಧ್ಯೆಯ ಅದ್ಭುತ ಕ್ಷಣಗಳ ಫೋಟೋಗಳು..!
ಎಲೆಕ್ಟ್ರಾನಿಕ್ ವಸ್ತುಗಳನ್ನೂ ಸಹ ಉಡುಗೊರೆಯಾಗಿ ನೀಡಬಹುದು. ಡಿಜಿಟಲ್ ವಾಚ್, ಮಿಕ್ಸರ್, ಟೋಸ್ಟರ್, ಇಯರ್ ಫೋನ್, ಸ್ಪೀಕರ್ ಸೇರಿದಂತೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಅಡುಗೆ ಮನೆಯಲ್ಲಿ ಬಳಸುವ ಅಡುಗೆ ಸಾಮಾನುಗಳನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಕಿಚನ್ ಸೆಟ್ ಮತ್ತು ಮನೆ ಬಳಕೆಗೆ ಉಪಯುಕ್ತವಾಗುವ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇಂಡಕ್ಷನ್ ಕುಕ್ಕರ್, ಪ್ರೆಶರ್ ಕುಕ್ಕರ್, ಕಡಾಯಿ, ಪ್ಯಾನ್, ಗ್ಲಾಸ್ ಅಥವಾ ಕಪ್‌ಗಳನ್ನೂ ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ