Advertisment

ದೀಪಾವಳಿಗೆ ಊರಿಗೆ ಹೊರಟ್ಟಿದ್ದೀರಾ? KSRTC ಕಡೆಯಿಂದ ಇಲ್ಲಿದೆ ಸಿಹಿ ಸುದ್ದಿ!

author-image
AS Harshith
ದೀಪಾವಳಿಗೆ ಊರಿಗೆ ಹೊರಟ್ಟಿದ್ದೀರಾ? KSRTC ಕಡೆಯಿಂದ ಇಲ್ಲಿದೆ ಸಿಹಿ ಸುದ್ದಿ!
Advertisment
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಡೆಯಿಂದ ಸಿಹಿ ಸುದ್ದಿ
  • ಇಂದು ರಸ್ತೆಗಿಳಿಯಲಿದೆ ಹೊಸ ಐರಾವತ ಕ್ಲಬ್ ಕ್ಲಾಸ್ 2.0
  • ಹೊಸ ಬಸ್​​ಗಳಿಗೆ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ

ದೀಪಾವಳಿ ಹಬ್ಬಕ್ಕೆ ಊರು ಸೇರಲು ಬಯಸುವವರಿಗೆ KSRTC ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಬಸ್​ ಇಲ್ಲ, ಸೀಟು ಸಿಗುತ್ತಿಲ್ಲವೆಂದು ಸಪ್ಪೆ ಮೋರೆ ಹಾಕಿದ್ದ ಪ್ರಯಾಣಿಕರಿಗೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಇಂದಿನಿಂದ KSRTCಗೆ ಹೊಸ ಬಸ್​​ಗಳು ಸೇರ್ಪಡೆಗೊಳ್ಳಲಿವೆ.

Advertisment

ದೀಪಾವಳಿಗೆ ರಜೆ ಇದ್ದು, ಬಹುತೇಕರು ಬೆಂಗಳೂರು ಬಿಟ್ಟು ಊರಿಗೆ ಹೊರಟಿದ್ದಾರೆ. ಹೀಗಾಗಿ ಬಸ್​ ಸಿಗದೆ ಕೆಲವರು ಕಂಗೆಟ್ಟಿದ್ದರು. ಆದರೆ KSRTC ಕಡೆಯಿಂದ ಅಂತವರಿಗಾಗಿ ಬಸ್​ ವ್ಯವಸ್ಥೆ ಮಾಡಲಾಗಿದ್ದು, ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಇಂದು ರಸ್ತೆಗಿಳಿಯಲಿದೆ.

ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಬಸ್​ಗಳಿಗೆ ಚಾಲನೆ ಕೊಡಲಿದ್ದಾರೆ. ಚಾಲನೆ ಬಳಿಕ ಇಂದಿನಿಂದ ನೂತನ 20 ವೋಲ್ವೋ-9600 ಬಸ್​ಗಳ ಕಾರ್ಯಚರಣೆ ನಡೆಸಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment