newsfirstkannada.com

ದುಬೈ ಉದ್ಯಮಿ ಮೇಲೆ ನಾಗಿಣಿಗೆ ಲವ್​ ಆಗಿದ್ಹೇಗೆ; ದೀಪಿಕಾ ದಾಸ್ ಪ್ರೀತಿಗೆ ಕಾರಣ ಇದೇನಾ!

Share :

Published March 10, 2024 at 5:48pm

    ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ನಟಿ ದೀಪಿಕಾ ದಾಸ್, ದೀಪಕ್

    ನಾನು ಹೇಗೆ ಅಂದುಕೊಂಡಿದ್ದೆ ಅದೇ ರೀತಿ ಲೈಫ್​ ಪಾರ್ಟ್ನರ್​ ಸಿಕ್ಕಿದ್ದಾರೆ

    ಕಳೆದ ಒಂದು ವರ್ಷದಿಂದ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು- ದೀಪಕ್​

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7 ಹಾಗೂ 9ರ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕುಟುಂಬಸ್ಥರನ್ನು ಹೊರತು ಪಡಿಸಿ ಯಾರಿಗೂ ಹೇಳದೇ ನಟಿ ದೀಪಿಕಾ ದಾಸ್​ ಮದುವೆಯಾಗಿದ್ದಾರೆ. ಏಕೆಂದರೆ ನಟಿ ದೀಪಿಕಾ ದಾಸ್​ಗೆ ಗೋವಾದಲ್ಲೇ ಮದುವೆಯಾಗುವ ಆಗೋ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್​ ಎಂಬುವವರ ಜೊತೆ ಮಾರ್ಚ್‌ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನು ಓದಿ: ಅಯ್ಯೋ.. ನಮ್ಮಿಬ್ಬರದ್ದು ದಿಢೀರ್‌ ಮದುವೆ ಅಲ್ಲ; ಕರಿಮಣಿ ಮಾಲೀಕನ ಗುಟ್ಟು ಬಿಚ್ಚಿಟ್ಟ ದೀಪಿಕಾ ದಾಸ್!

ದೀಪಕ್​ ಅವರ ಮೇಲೆ ನಿಮಗೆ ಲವ್​ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್​ ಉತ್ತರಿಸಿದ್ದಾರೆ. ದೀಪಕ್ ನಾನು ನಾಲ್ಕು ವರ್ಷದ ಸ್ನೇಹಿತರು. ಕಳೆದ ಒಂದು ವರ್ಷದಿಂದ ರಿಲೇಷನ್ ಶಿಪ್​ನಲ್ಲಿ ಇದ್ದೇವು. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಅಂದರು. ದೀಪಕ್​ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡೋ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಇವರ ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನನ್ನ ಕನಸ್ಸಿನ ಹುಡಗು ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು, ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು, ನನಗೆ ಟೈಮ್​ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಲೈಫ್​ ಪಾರ್ಟ್ನರ್ ಸಿಕ್ಕಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ದೀಪಿಕಾ ದಾಸ್​ ಪತಿ ದೀಪಕ್,​​ ನಾನು ದುಬೈ ಮೂಲದವನೇನೂ ಅಲ್ಲ. ಇಲ್ಲೇ ಆರ್ ​ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು IT ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ದೀಪಿಕಾಗೆ ಸಪೋರ್ಟ್ ಮಾಡಿದಂತೆ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬೈ ಉದ್ಯಮಿ ಮೇಲೆ ನಾಗಿಣಿಗೆ ಲವ್​ ಆಗಿದ್ಹೇಗೆ; ದೀಪಿಕಾ ದಾಸ್ ಪ್ರೀತಿಗೆ ಕಾರಣ ಇದೇನಾ!

https://newsfirstlive.com/wp-content/uploads/2024/03/deepika-das-8.jpg

Load More