ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

author-image
Bheemappa
Updated On
ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
Advertisment
  • ಬ್ಯೂಟಿಫುಲ್ ಪ್ಲೇಸ್‌ನಲ್ಲಿ ದೀಪಿಕಾ ದಾಸ್ ಬಿದ್ದಿರುವುದು ಹೇಗೆ?
  • ವಿಡಿಯೋ ಕುರಿತು ದೀಪಿಕಾ ದಾಸ್ ಹೇಳಿರುವ ಸತ್ಯ ಇಲ್ಲಿದೆ
  • ಫಾಲ್ಸ್​​ನಲ್ಲಿ ಬೀದ್ದಾಗ ದೀಪಿಕಾ ಮುಖಕ್ಕೆ ಗಾಯವಾಗಿದ್ದು ನಿಜನಾ?

ಇತ್ತಿಚೆಗಷ್ಟೇ ಮದುವೆ ಆಗಿರುವ ಬಿಗ್‌ಬಾಸ್ ಬ್ಯೂಟಿ ದೀಪಿಕಾ ದಾಸ್‌ ಅವರು ಸುಂದರ ವಾಟರ್ ಫಾಲ್ಸ್‌ನಲ್ಲಿ ಓಡಾಡುವಾಗ ಕಾಲು ಜಾರಿ ಮುಗ್ಗರಿಸಿ ಬಿದ್ದು ಮುಖಕ್ಕೆ ಗಾಯ ಮಾಡಿಕೊಂಡಿದ್ದರು. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿತ್ತು. ಇದು ಅಲ್ಲದೇ ಫ್ಯಾನ್ಸ್​ ಕೂಡ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಸಂಬಂಧ ದೀಪಿಕಾ ದಾಸ್​ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ

publive-image

ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ಆಗಾಗ ಫಾರಿನ್ ಟ್ರಿಪ್​ಗೆ ಹೋಗುತ್ತಿರುತ್ತಾರೆ. ಒಳ್ಳೆ ಒಳ್ಳೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಖತ್ ಎಂಜಾಯ್ ಮಾಡುವುದು ದೀಪಿಕಾ ಅವರ ಹವ್ಯಾಸ. ತಾವು ಎಲ್ಲಿಗೆ ಹೋಗಲಿ ಆ ಬಗ್ಗೆ ತಮ್ಮ ಇನ್​ಸ್ಟಾದಲ್ಲಿ ಫೋಟೋ, ವಿಡಿಯೋಗಳನ್ನು ಪೋಸ್ಟ್​ ಮಾಡುವ ಮೂಲಕ ತಮ್ಮ ಟ್ರಿಪ್ ಕುರಿತು ಅಪ್​ಡೇಟ್​ ಕೊಡುತ್ತಿರುತ್ತಾರೆ. ಸದ್ಯ ಇದೇ ರೀತಿ ಟ್ರಿಪ್ ಹೋಗಿರುವಾಗ ಒಮ್ಮೆ ಬಿದ್ದಿದ್ದೇ ಎಂದು ದೀಪಿಕಾ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷ್‌ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

ಈ ಬಗ್ಗೆ ತಮ್ಮ ಇನ್​ಸ್ಟಾ ಸ್ಟೇಟಸ್​ನಲ್ಲಿ ಸ್ಪಷ್ಟನೆ ಕೊಟ್ಟಿರುವ ದೀಪಿಕಾ ದಾಸ್ ಅವರು, ಫಾಲ್ಸ್​​ನಲ್ಲಿ ನಾನು ಆಕಸ್ಮಿಕವಾಗಿ ಬಿದ್ದಿರುವುದು ನಿಜ. ಆದರೆ ವಿಡಿಯೋ 3 ತಿಂಗಳು ಹಿಂದಿನದ್ದು ಆಗಿದೆ. ಈಗಿನ ಟ್ರೆಂಡ್ ಚೆಕ್​ ಮಾಡಲು ಹಳೆಯ ವಿಡಿಯೋವನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದೆ. ಫಾಲ್ಸ್​​ನಲ್ಲಿ ಕಾಲು ಜಾರಿ ಬಿದ್ದಾಗ ಮುಖಕ್ಕೆ ಪೆಟ್ಟು ಆಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೆ. ಆದರೆ ಈಗ ಎಲ್ಲ ಚೆನ್ನಾಗಿದ್ದೇನೆ. ಮುಖದ ಮೇಲೆ ಗಾಯವಿಲ್ಲ. ಆತಂಕ ಬೇಡ. ಇಷ್ಟೊಂದು ಕನಿಕರ, ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ದಾಸ್​ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment