ದೀಪಿಕಾ ದಾಸ್ ಹನಿಮೂನ್ ಟ್ರಿಪ್​; ಈ ಬಾರಿ ಬಿಗ್​ಬಾಸ್​​ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ?

author-image
Veena Gangani
Updated On
ದೀಪಿಕಾ ದಾಸ್ ಹನಿಮೂನ್ ಟ್ರಿಪ್​; ಈ ಬಾರಿ ಬಿಗ್​ಬಾಸ್​​ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ?
Advertisment
  • ಟ್ರಾವಲಿಂಗ್ ಅಂದರೆ ಕಿರುತೆರೆ ನಟಿ ದೀಪಿಕ್​​ ದಾಸ್​ಗೆ ಪಂಚ ಪ್ರಾಣ
  • ಮೊನ್ನೆಯಷ್ಟೇ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡ ದೀಪಿಕಾ ದಾಸ್​
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ದಂಪತಿ ಫೋಟೋ

ಬಿಗ್​ಬಾಸ್​ ಬೆಡಗಿ ದೀಪಿಕಾ ದಾಸ್​​​ ಸದ್ಯ ಸೋಷಿಯಲ್ ಮೀಡಿಯಾದ ಹಾಟ್​ ಟಾಪಿಕ್ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ಇದೀಗ ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

publive-image

ಹೌದು, ನಟಿ ದೀಪಿಕಾ ದಾಸ್​ ಅವರು ಪತಿ ದೀಪಕ್​​ ಜೊತೆ ಐಲ್ಯಾಂಡ್​​ ಫುಕೆಟ್​ಗೆ ಹಾರಿದ್ದಾರೆ. ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ನಟಿ ದೀಪಿಕಾ ದಾಸ್ ಅವರು ಆಗಾಗ ದೇಶ ಸುತ್ತುತ್ತಿರುತ್ತಾರೆ. ಆದರೆ ಈ ಭಾರೀ ಹೊಸ ದಂಪತಿ ಐಲ್ಯಾಂಡ್​​ ಫುಕೆಟ್​ಗೆ ಹಾರಿದ್ದಾರೆ.

ಇದನ್ನೂ ಓದಿ: ಅಯ್ಯೋ.. 1 ಲೀಟರ್​ ಹಾಲಿನ ಬೆಲೆ 210, ಒಂದು ಕೆಜಿ ಕೋಳಿ ಬೆಲೆ 780.. ಬದುಕೋದೆ ಕಷ್ಟ ಕಣ್ರಿ

ಇನ್ನು, ಈ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ದೀಪಿಕಾ ಹಾಗೂ ಪತಿ ದೀಪಕ್​ ಬೋಟ್​ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋ ನೋಡಿದ ಅಭಿಮಾನಿಗಳು ತಾಳಿನೇ ಕಾಣಿಸುತ್ತಿಲ್ಲ. ಯಾವ ದೇಶಕ್ಕೆ ಹೋದರು ನಮ್ಮ ದೇಶದ ಸಂಸ್ಕೃತಿ ಮರೀಬೇಡಿ, ಸೂಪರ್​​ ಜೋಡಿ ಅಂತಾ ಕಾಮೆಂಟ್​ ಮಾಡಿದ್ದಾರೆ.

ನಟಿ ದೀಪಿಕಾ ದಾಸ್​​ ಕೃಷ್ಣ ರುಕ್ಮಿಣಿ, ನಾಗಿಣಿ, ಇತ್ತೀಚಿಗೆ ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ನಟಿ ದೀಪಿಕಾ ದಾಸ್​​ ಸೋಶಿಯಲ್​ ಮಿಡಿಯಾದಲ್ಲಿ​ ಸಖತ್‌ ಆ್ಯಕ್ಟೀವ್ ಆಗಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment