newsfirstkannada.com

×

DeepikaPadukone: ಫ್ಯಾನ್ಸ್​ಗೆ ಖುಷಿ ಸುದ್ದಿ.. ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ!

Share :

Published September 8, 2024 at 1:35pm

Update September 8, 2024 at 1:39pm

    ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ಫ್ಯಾನ್ಸ್​ಗೆ ಸಂತಸ

    ಮುದ್ದಾದ ಮಗುವಿಗೆ ಜನ್ಮ ನೀಡಿದ ಸ್ಟಾರ್​ ನಟಿ ದೀಪಿಕಾ ಪಡುಕೋಣೆ

    ತಂದೆಯಾದ ಖುಷಿಯಲ್ಲಿದ್ದಾರೆ ಬಾಲಿವುಡ್​ ನಟ ರಣವೀರ್ ಸಿಂಗ್

ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಚೊಚ್ಚಲ ಕಂದನನ್ನು ಬರಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 08ರಂದು ದೀಪಿಕಾ ಪಡುಕೋಣೆಗೆ ಮರಿ ದೀಪಿಕಾ ಹುಟ್ಟಿದ್ದಾಳೆ.

ಇದನ್ನೂ ಓದಿ: Good News: ಏಕಾಏಕಿ ಆಸ್ಪತ್ರೆಗೆ ಆಗಮಿಸಿದ ದೀಪಿಕಾ-ರಣವೀರ್​; ಕಂಗ್ರಾಟ್ಸ್ ಹೇಳುವ ಸಮಯ ಬಂದೇ ಬಿಡ್ತಾ?

ಹೌದು, ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ನಿನ್ನೆ ಏಕಾಏಕಿ ತಮ್ಮ ಲಕ್ಸೂರಿ ಕಾರ್​ನಲ್ಲಿ ಮುಂಬೈನ ಪ್ರತಿಷ್ಠಿತ ಹೆಚ್​ಎನ್ ರಿಲಯನ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ಇದನ್ನು ಗಮನಿಸಿರುವ ಅಭಿಮಾನಿಗಳು ರಣವೀರ್ ಹಾಗೂ ದೀಪಿಕಾಗೆ ಮಗು ಹೆಣ್ಣು ಮಗುವಾಗುತ್ತದೆ ಅಂತ ಗೆಸ್​ ಮಾಡಿದ್ದರು. ಇನ್ನೂ ಕೆಲವರು ಗಂಡು ಮಗುವಾಗುತ್ತದೆ ಅಂತ ಹೇಳುವ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದರು.

ಇದೀಗ ಬಾಲಿವುಡ್​ ಸ್ಟಾರ್​ ಜೋಡಿಗೆ ಹೆಣ್ಣು ಮಗುವಿನ ಜನನವಾಗಿದೆ. ಇದೇ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅದರಲ್ಲೂ ಗಣೇಶ ಹಬ್ಬದಲ್ಲೇ ಮಗು ಜನಿಸಿದ್ದ ಇನ್ನೂ ಖುಷಿಯ ವಿಚಾರವೇ ಸರಿ. ಇತ್ತೀಚೆಗಷ್ಟೇ ಮುಂಬೈನ ಸಿದ್ಧಿ ವಿನಾಯಕನ ಮಂದಿರಕ್ಕೆ ಈ ಜೋಡಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿತ್ತು. ತಮ್ಮ ಬಾಳಿನ ಹೊಸ ಅಧ್ಯಾಯ ಶುರುವಾಗುವುದಕ್ಕೂ ಮುನ್ನವೇ ಸಿದ್ಧಿ ವಿನಾಯಕನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಎಲ್ಲವೂ ನಿರ್ವಿಘ್ನವಾಗಿ ಸಾಗಲಿ ಎಂದು ಬೇಡಿಕೊಂಡಿದ್ದರು. ಇದಾದ ಬಳಿಕವೇ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DeepikaPadukone: ಫ್ಯಾನ್ಸ್​ಗೆ ಖುಷಿ ಸುದ್ದಿ.. ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ!

https://newsfirstlive.com/wp-content/uploads/2024/09/deepika1.jpg

Load More