/newsfirstlive-kannada/media/post_attachments/wp-content/uploads/2024/04/deepika4.jpg)
ಇತ್ತೀಚೆಗಷ್ಟೇ ಬಾಲಿವುಡ್​ ಸ್ಟಾರ್ ಜೋಡಿ ದಂಪತಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ನಟಿ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ಬೆಡಗಿ ಸದ್ಯ ‘ಸಿಂಗಂ ಅಗೈನ್’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.
/newsfirstlive-kannada/media/post_attachments/wp-content/uploads/2024/04/deepika1.jpg)
ಗರ್ಭಿಣಿಯಾಗಿರೋ ನಟಿ ದೀಪಿಕಾ ಪಡುಕೋಣೆ ಅವರು ಖಡಕ್​ ಪೊಲೀಸ್​​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಗಂ ಅಗೈನ್ ಎಂಬ ಹೊಸ ಸಿನಿಮಾದಲ್ಲಿ​ ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ. ಪ್ರೆಗ್ನೆಂಟ್ ಆಗಿರುವ ದೀಪಿಕಾ ಅವರು ಇಂತಹ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕಿತ್ತು.
ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನರಾದ ಪ್ರಚಂಡ ಕುಳ್ಳ.. ದ್ವಾರಕೀಶ್ಗೆ ಸ್ಯಾಂಡಲ್ವುಡ್ ನಟರಿಂದ ಕಣ್ಣೀರ ವಿದಾಯ
Yeh h apni police ? ? #DeepikaPadukone as Shakti Shetty pic.twitter.com/wH4X3SVyHc
— ❤️ (@crazen_paltan)
Yeh h apni police 🚔 🔥 #DeepikaPadukone as Shakti Shetty pic.twitter.com/wH4X3SVyHc
— ❤️🇮🇳 (@crazen_paltan) April 17, 2024
">April 17, 2024
/newsfirstlive-kannada/media/post_attachments/wp-content/uploads/2024/04/deepika3.jpg)
ಆದರೆ ಅದೆಲ್ಲವನ್ನು ಬಿಟ್ಟು ಕಾಯಕವೇ ಕೈಲಾಸ ಅಂತ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇದೇ ಫೋಟೋಗಳು ವೈರಲ್​ ಆಗುತ್ತಿದ್ದು, ಇದನ್ನು ನೋಡಿದ ನಟಿಯ ಅಭಿಮಾನಿಗಳು ದೀಪಿಕಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಪಠಾಣ್ ಮತ್ತು ಜವಾನ್ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ನ ಟಾಪ್ ನಟಿಯಾಗಿ ಹೊರ ಹೊಮ್ಮಿದ್ದಾರೆ.
/newsfirstlive-kannada/media/post_attachments/wp-content/uploads/2024/04/deepika2.jpg)
ಇನ್ನು, ಸಿಂಗಂ ಅಗೈನ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ, ನಟ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ನಟಿ ದೀಪಿಕಾ ನೀಡಿರುವ ಮಾಹಿತಿ ಪ್ರಕಾರ, ದೀಪಿಕಾ ಎರಡನೇ ಟ್ರೈಮಿಸ್ಟರ್​ನಲ್ಲಿದ್ದಾರೆ. ಈ ಜೋಡಿ 2018ರಲ್ಲಿ ಮದುವೆಯಾಗಿತ್ತು. 2024 ಸೆಪ್ಟೆಂಬರ್​ನಲ್ಲಿ ಮೊದಲ ಮಗುವಿನ ನಿರೀಕ್ಷೆ ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us