newsfirstkannada.com

PHOTOS: ಪ್ರೆಗ್ನೆನ್ಸಿ ನಡುವೆ ಶೂಟಿಂಗ್​ನಲ್ಲಿ ಬ್ಯುಸಿಯಾದ ದೀಪಿಕಾ ಪಡುಕೋಣೆ.. ಫ್ಯಾನ್ಸ್​ ಕಳವಳ!

Share :

Published April 17, 2024 at 6:32pm

    ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದ ಸ್ಟಾರ್​ ದಂಪತಿ

    ಖಡಕ್​ ಪೊಲೀಸ್​​ ಗೆಟಪ್​ನಲ್ಲಿ ಕಾಣಿಸಿಕೊಂಡ ನಟಿ ದೀಪಿಕಾ ಪಡುಕೋಣೆ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬಾಲಿವುಡ್​ ಬೆಡಗಿ ಫೋಟೋಸ್

ಇತ್ತೀಚೆಗಷ್ಟೇ ಬಾಲಿವುಡ್​ ಸ್ಟಾರ್ ಜೋಡಿ ದಂಪತಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ನಟಿ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ಬೆಡಗಿ ಸದ್ಯ ‘ಸಿಂಗಂ ಅಗೈನ್’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಗರ್ಭಿಣಿಯಾಗಿರೋ ನಟಿ ದೀಪಿಕಾ ಪಡುಕೋಣೆ ಅವರು ಖಡಕ್​ ಪೊಲೀಸ್​​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಗಂ ಅಗೈನ್ ಎಂಬ ಹೊಸ ಸಿನಿಮಾದಲ್ಲಿ​ ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ.  ಪ್ರೆಗ್ನೆಂಟ್ ಆಗಿರುವ ದೀಪಿಕಾ ಅವರು ಇಂತಹ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕಿತ್ತು.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಪ್ರಚಂಡ ಕುಳ್ಳ.. ದ್ವಾರಕೀಶ್‌ಗೆ ಸ್ಯಾಂಡಲ್‌ವುಡ್‌ ನಟರಿಂದ ಕಣ್ಣೀರ ವಿದಾಯ

ಆದರೆ ಅದೆಲ್ಲವನ್ನು ಬಿಟ್ಟು ಕಾಯಕವೇ ಕೈಲಾಸ ಅಂತ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇದೇ ಫೋಟೋಗಳು ವೈರಲ್​ ಆಗುತ್ತಿದ್ದು, ಇದನ್ನು ನೋಡಿದ ನಟಿಯ ಅಭಿಮಾನಿಗಳು ದೀಪಿಕಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಪಠಾಣ್ ಮತ್ತು ಜವಾನ್ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನ ಟಾಪ್ ನಟಿಯಾಗಿ ಹೊರ ಹೊಮ್ಮಿದ್ದಾರೆ.

ಇನ್ನು, ಸಿಂಗಂ ಅಗೈನ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ, ನಟ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ನಟಿ ದೀಪಿಕಾ ನೀಡಿರುವ ಮಾಹಿತಿ ಪ್ರಕಾರ, ದೀಪಿಕಾ ಎರಡನೇ ಟ್ರೈಮಿಸ್ಟರ್​ನಲ್ಲಿದ್ದಾರೆ. ಈ ಜೋಡಿ 2018ರಲ್ಲಿ ಮದುವೆಯಾಗಿತ್ತು. 2024 ಸೆಪ್ಟೆಂಬರ್​ನಲ್ಲಿ ಮೊದಲ ಮಗುವಿನ ನಿರೀಕ್ಷೆ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಪ್ರೆಗ್ನೆನ್ಸಿ ನಡುವೆ ಶೂಟಿಂಗ್​ನಲ್ಲಿ ಬ್ಯುಸಿಯಾದ ದೀಪಿಕಾ ಪಡುಕೋಣೆ.. ಫ್ಯಾನ್ಸ್​ ಕಳವಳ!

https://newsfirstlive.com/wp-content/uploads/2024/04/deepika4.jpg

Load More