/newsfirstlive-kannada/media/post_attachments/wp-content/uploads/2024/12/DEEPIKA-PADUKONE.jpg)
ಕನ್ನಡದ ಕುವರಿ ದೀಪಿಕಾ ಪಡುಕೋಣೆ ಬಾಲಿವುಡ್ನಲ್ಲಿ ತಮ್ಮದೇ ಒಂದು ಛಾಪು ಮೂಡಿಸಿದ್ದಾರೆ. ಸದ್ಯ ಒಂದು ಮಗುವಿನ ತಾಯಿಯಾಗಿರುವ ದೀಪಿಕಾ ಕಲ್ಕಿ ಸಿನಿಮಾದ ನಂತರ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ದುವಾ ಪಡುಕೋಣೆ ಹುಟ್ಟಿದ ಬಳಿಕ ಮೊದಲ ಬಾರಿಗೆ ಸ್ಟೇಜ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ. ಅದು ಬೆಂಗಳೂರಿನಲ್ಲಿ ದಿಲ್ಜಿತ್ ದೋಸಂಜ್ ಸಂಗೀತ ಕಚೇರಿಯಲ್ಲಿ.
ಇದನ್ನೂ ಓದಿ:ಸರ್ಕಾರದಿಂದ ಭರ್ಜರಿ ಗುಡ್ನ್ಯೂಸ್.. ದೊಡ್ಡದಾಗ್ತಿದೆ ನಮ್ಮ ಮೆಟ್ರೋ ಜಾಲ..!
ದೀಪಿಕಾ ವೇದಿಕೆಗೆ ಬರುತ್ತಿದ್ದಂತೆಯೇ ಸಂಗೀತ ಕಾರ್ಯಕ್ರಮ ನೋಡಲು ಬಂದಿದ್ದ ಪ್ರೇಕ್ಷಕ ಸಾಗರದಿಂದ ಶಿಳ್ಳೆ ಚಪ್ಪಾಳೆಗಳು ಜೋರಾದವು. ವೇದಿಕೆ ಬಂದ ಕೂಡಲೇ ಇಡೀ ಪ್ರೇಕ್ಷಕಸ್ತೋಮವನ್ನು ಕಂಡ ದೀಪಿಕಾ ನಮಸ್ಕಾರ ಬೆಂಗಳೂರು ಎಂದು ಕೂಗಿಕೊಂಡರು. ಪ್ರೇಕ್ಷಕರ ಹರ್ಷೋದ್ಗಾರವಂತೂ ಆಗ ಮುಗಿಲುಮುಟ್ಟಿತ್ತು.
View this post on Instagram
ದಿಲ್ಜಿತ್‌ಗೆ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ನಮಸ್ಕಾರ ಬೆಂಗಳೂರು ಎಂದಾಗ ದಿಲ್ಜಿತ್ ನಾನು ಈಗಾಗಲೇ ಇದನ್ನು ಹೇಳಿದ್ದೇನೆ. ನಮಸ್ಕಾರ ಬೆಂಗಳೂರು ಹೇಗಿದ್ದೀರಿ ಎಂದು ಕೇಳಿದ್ದೇನೆ ಎಂದಾಗ. ನಟಿ ದೀಪಿಕಾ ನಾನು ಚಿಕ್ಕವಳಿದ್ದಾಗ ಶಾಲೆಯಲ್ಲಿ ಕನ್ನಡವನ್ನು ಕಲಿತಿದ್ದೇನೆ ಎಂದು ಹೇಳಿದ್ರು, ಅದರ ಜೊತೆಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೂಡ ಹೇಳಿಕೊಟ್ಟರು. ಇದನ್ನು ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತಷ್ಟು ಹೆಚ್ಚಿತು.
ಇನ್ನು ಮತ್ತೊಂದು ಕಡೆ ದೀಪಿಕಾರನ್ನು ದಿಲ್ಜಿತ್ ಹಾಡಿ ಹೋಗಳಿದ್ದಾರೆ. ನೀವು ಈಗಾಗಲೇ ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ಇದು ನಮಗೆಲ್ಲಾ ಹೆಮ್ಮೆ ತರುವ ವಿಚಾರ, ನನ್ನ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ದಿಲ್ಜಿತ್ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ