ಜಿಂಕೆ ಸಸ್ಯಹಾರಿಯೇ? ಮಾಂಸಹಾರಿಯೇ? ಈ ವಿಡಿಯೋ ನೋಡಿದ್ರೆ ನಿಮಗೂ ಡೌಟ್​ ಬರುತ್ತೆ!

author-image
Harshith AS
Updated On
ಜಿಂಕೆ ಸಸ್ಯಹಾರಿಯೇ? ಮಾಂಸಹಾರಿಯೇ? ಈ ವಿಡಿಯೋ ನೋಡಿದ್ರೆ ನಿಮಗೂ ಡೌಟ್​ ಬರುತ್ತೆ!
Advertisment
  • ಇದು ಮಾಂಸಹಾರಿ ಜಿಂಕೆಯೇ?
  • ಕ್ಯಾಮೆರಾ ಕಣ್ಣಿಗೆ ಸೆರೆಯಾಯ್ತ ಈ ದೃಶ್ಯ
  • ಈ ದೃಶ್ಯ ನೋಡಿದ್ರೆ ಅನುಮಾನ ಬರುತ್ತೆ

ಜಿಂಕೆ ಸಸ್ಯಹಾರಿ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕಾಡು ಮೇಡು ಅಲೆಯುತ್ತಾ ಸಸ್ಯಗಳನ್ನು ತಿನ್ನುತ್ತಾ ಜಿಂಕೆಗಳು ಬದುಕುತ್ತವೆ. ಆದರೆ ಇಲ್ಲೊಂದು ಜಿಂಕೆ ಹಾವನ್ನು ತಿನ್ನುತ್ತಿರುವ ದೃಶ್ಯ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ಈ ದೃಶ್ಯ ವೈರಲ್​ ಆಗಿದೆ.

ಅನೇಕರು ಜಿಂಕೆ ಹಾವನ್ನು ತಿನ್ನುತ್ತಿರುವ ದೃಶ್ಯವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವನ್ಯಜೀವಿ ತಜ್ಞರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸೈನ್ಸ್ ಗರ್ಲ್​ ಎಂಬ ಟ್ವಿಟ್ಟರ್​ ಖಾತೆಯು ಈ ವಿಡಿಯೋದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ವಿಡಿಯೋದ ಕೆಳಗೆ ‘ಜಿಂಕೆಗಳು ಸಸ್ಯಹಾರಿಗಳು ಆದರೆ ಅವುಗಳು ಆಹಾರದ ಕಾರಣದಿಂದ ಮೆಲುಕು ಹಾಕುವ ಪ್ರಾಣಿಗಳಾಗಿ ವರ್ಗೀಕರಿಸಲ್ಪಡುತ್ತವೆ. ಇದು ಸೆಲ್ಯುಲೋಸ್​ನಂತಹ ಕಠಿಣ ಸಸ್ಯ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ವೇಳೆ ಆಹಾರ ಕೊರತೆ, ಕ್ಯಾಲ್ಸಿಯಂ ಮತ್ತು ರಂಜಕದ ಕೊರತೆಯಿದ್ದರೆ ಮಾಂಸವನ್ನು ತಿನ್ನಬಹುದು. ನೋಡಿ ಜಿಂಕೆ ಹಾವನ್ನು ತಿನ್ನುತ್ತಿರುವ ದೃಶ್ಯ’ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಅಂದಹಾಗೆಯೇ ರಸ್ತೆ ಬದಿ ವಾಹನ ಸವಾರರ ಕಣ್ಣಿಗೆ ಜಿಂಕೆ ಹಾವನ್ನು ಸೇವಿಸುವ ದೃಶ್ಯ ಕಾಣಿಸಿದೆ. ಕೆಲವರು ಮೊಬೈಲ್​ ಮೂಲಕ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment