/newsfirstlive-kannada/media/post_attachments/wp-content/uploads/2025/02/Indian-Army-power-4.jpg)
ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತದ ರಕ್ಷಣಾ ಬಜೆಟ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪೂರಕ ಬಜೆಟ್​ ಮೂಲಕ ಹೆಚ್ಚುವರಿಯಾಗಿ 50,000 ಕೋಟಿ ರೂಪಾಯಿಗಳನ್ನು ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಇದಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗಬಹುದು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್​ನಲ್ಲಿ ಸೇನೆಗೆ ಒಟ್ಟು 6.81 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದರು. ಇದು 2024-25ರಲ್ಲಿನ 6.22 ಲಕ್ಷ ಕೋಟಿ ರೂಪಾಯಿಗಳಿಗಿಂತ ಶೇ.9.2 ರಷ್ಟು ಹೆಚ್ಚು ಮಾಡಲಾಗಿತ್ತು. ಈಗ ಸುಮಾರು ಹೆಚ್ಚುವರಿಯಾಗಿ 50,000 ಕೋಟಿ ರೂಪಾಯಿಗಳಷ್ಟು ಪ್ರಸ್ತಾವನೆ ಸಲ್ಲಿಸಲಾಗಿದ್ದರಿಂದ ಮುಂದೆ ಇದು 7 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗುವ ನಿರೀಕ್ಷೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ; ಆ ಮಹಿಳೆಯರಿಗೆ ಸಿಕ್ಕ ಪರಿಹಾರ ಇದೇನಾ?.. ಕಾಂಗ್ರೆಸ್​ MLA ಕೊತ್ತೂರು ಮಂಜುನಾಥ್
/newsfirstlive-kannada/media/post_attachments/wp-content/uploads/2024/12/Army.jpg)
ಆಪರೇಷನ್ ಸಿಂಧೂರದ ಬಳಿಕ ಸೇನೆಗೆ ಹೆಚ್ಚುವರಿ ಹಣ ಮೀಸಲು ಇಡಲು ರಕ್ಷಣಾ ಬಜೆಟ್​ನಲ್ಲಿ ₹50 ಸಾವಿರ ಕೋಟಿ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಈ ಅನುದಾನದಿಂದ ಹೊಸ ಶಸ್ತ್ರಾಸ್ತ್ರಗಳು, ರಕ್ಷಣಾ ಸಾಮಗ್ರಿ ಹಾಗೂ ತಂತ್ರಜ್ಞಾನ ಖರೀದಿ ಮಾಡುವ ಸಾಧ್ಯತೆ ಇದೆ. ಕಳೆದ ಬಾರಿಗಿಂತ ಈ ಬಾರಿ ಶೇಕಡಾ 9.53ರಷ್ಟು ಭದ್ರತೆಗೆ ಹೆಚ್ಚು ಮೀಸಲು ಇಡಲು ಯೋಜನೆ ಇದೆ.
ಎನ್​ಡಿಎ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ರಕ್ಷಣಾ ಬಜೆಟ್ ಮೂರು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ ರಕ್ಷಣಾ ಬಜೆಟ್​ 2.29 ಲಕ್ಷ ಕೋಟಿಗಳಾಗಿತ್ತು. ಇದು ಈಗ 6.81 ಲಕ್ಷ ಕೋಟಿ ರೂಪಾಯಿಗಳು ಆಗಿದೆ. ಇದು ಕೇಂದ್ರ ಸರ್ಕಾರದ ಒಟ್ಟು ಬಜೆಟ್​ನ ಶೇ.13.45 ರಷ್ಟು ಆಗಿದ್ದು ಎಲ್ಲ ಸಚಿವಾಲಯಗಳಿಗಿಂತ ರಕ್ಷಣಾ ಇಲಾಖೆ ಅತಿ ಹೆಚ್ಚು ಅನುದಾನ ಪಡೆಯುತ್ತಿದೆ ಎಂದು ಹೇಳಲಾಗ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us