/newsfirstlive-kannada/media/post_attachments/wp-content/uploads/2025/02/RAJANATH-SINGH.jpg)
ಜಾಗತಿಕ ಬಂಡವಾಳ ಹೂಡಿಕೆದಾರರ ‘ಇನ್ವೆಸ್ಟ್ ಕರ್ನಾಟಕ -2025’ ಸಮಾವೇಶಕ್ಕೆ ನಿನ್ನೆ ಅದ್ಧೂರಿ ಚಾಲನೆ ಸಿಕ್ಕಿದೆ. ನಿನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹೆಸರಾಂತ ಉದ್ಯಮಿಗಳು ಸಾಕ್ಷಿಯಾಗಿದ್ದರು. ಮೊದಲ ದಿನವೇ ರಾಜ್ಯಕ್ಕೆ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ.
ವಿಷಯ ಏನು..?
ನಿನ್ನೆಯ ಕಾರ್ಯಕ್ರಮಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದು, ವೀಕ್ಷಕರ ಮನಸ್ಸು ಗೆದ್ದಿದೆ. ಅಂದ್ಹಾಗೆ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ವೀಲ್ ಚೇರ್‌ನಲ್ಲಿ ಬಂದಿರೋದು ಗೊತ್ತೇ ಇದೆ. ಕಾರ್ಯಕ್ರಮದಲ್ಲಿ ಮಂಡಿನೋವಿನ ಸಮಸ್ಯೆಯಿಂದ ಮೇಲೇಳಲು ಆಗದೇ ಕುಳಿತಿದ್ದ ಸಿದ್ದರಾಮಯ್ಯರನ್ನು ರಾಜನಾಥ್ ಸಿಂಗ್ ಗೌರವದಿಂದ ಕಂಡಿದ್ದಾರೆ. ರಾಜನಾಥ್ ಸಿಂಗ್​​ ಅವರ ಸರಳತೆಯ ಗುಣ ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ.
ಇದನ್ನೂ ಓದಿ: VIDEO: ವೀಲ್ ಚೇರ್‌ನಲ್ಲೇ ವೇದಿಕೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ವೈರಲ್ ಆಗಿರೋ ವಿಡಿಯೋದಲ್ಲಿ ಏನಿದೆ..?
ರಾಜನಾಥ್ ಸಿಂಗ್ ತಮ್ಮ ಬಳಿ ಆಗಮಿಸುತ್ತಿದ್ದಂತೆಯೇ ಎದ್ದುನಿಂತು ಸ್ವಾಗತಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಾರೆ. ಆಗ ರಾಜನಾಥ್ ಸಿಂಗ್ ಪ್ರೀತಿಯಿಂದ ಕುಳಿತುಕೊಳ್ಳಿ, ಕುಳಿತುಕೊಳ್ಳಿ ಎಂದು ದೂರದಿಂದಲೇ ಕೈಮಾಡುತ್ತಾರೆ. ಖುಷಿಯಿಂದ ಸಿದ್ದರಾಮಯ್ಯರ ಬಳಿಗೆ ಬರುವ ಸಿಂಗ್, ಸಿಎಂ ಭುಜದ ಮೇಲೆ ಒಂದು ಕೈಯಿಟ್ಟು, ಇನ್ನೊಂದು ಕೈಯಲ್ಲಿ ಹ್ಯಾಂಡ್​​ಶೇಕ್ ಮಾಡಿದ್ದಾರೆ. ನಂತರ ಸಿಎಂ ಕೇಂದ್ರ ಸಚಿವರಿಗೆ ಬೊಕ್ಕೆ ನೀಡಿ ಸ್ವಾಗತಿಸುತ್ತಾರೆ. ನಂತರ ಆದಷ್ಟು ಬೇಗ ಗುಣಮುಖರಾಗಿ ಎಂದು ಸಿದ್ದರಾಮಯ್ಯಗೆ ರಾಜನಾಥ್ ಸಿಂಗ್ ಹಾರೈಸಿದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಬೂಮ್ರಾ ಔಟ್; ತಂಡಕ್ಕೆ ಸ್ಟಾರ್​ ಯುವ ವೇಗಿ ಎಂಟ್ರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ