/newsfirstlive-kannada/media/post_attachments/wp-content/uploads/2025/05/Operation-Sindoor9.jpg)
ನವದೆಹಲಿ: ಆಪರೇಷನ್ ಸಿಂಧೂರ ಭಾರತೀಯ ಸೇನೆಯ ಶೌರ್ಯದ ಸಂಕೇತ. ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡ ಹೆಮ್ಮೆಯ ಕಾರ್ಯಾಚರಣೆ. ಪಾಕಿಸ್ತಾನ ಉಗ್ರರಿಗೆ ಸಿಂಹಸ್ವಪ್ನವಾಗಿರುವ ಆಪರೇಷನ್ ಸಿಂಧೂರದ ಬಗ್ಗೆ ಈಗ ಇಡೀ ವಿಶ್ವವೇ ಚರ್ಚೆ ಮಾಡುತ್ತಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ರಕ್ಷಣಾ ಇಲಾಖೆ ಭಾರತೀಯ ನಾಗರಿಕರಿಗೆ ಅದ್ಭುತ ಅವಕಾಶವೊಂದನ್ನ ನೀಡುತ್ತಿದೆ. ಅದುವೇ ಆಪರೇಷನ್ ಸಿಂಧೂರ್ ಕುರಿತ ಪ್ರಬಂಧ ಸ್ಪರ್ಧೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಭರ್ಜರಿ, ಆಕರ್ಷಕ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/06/CDS-Gen-Anil-Chauhan.jpg)
ರಕ್ಷಣಾ ಇಲಾಖೆ ಈ ಪ್ರಬಂಧ ಸ್ಪರ್ಧೆಯನ್ನ ಏರ್ಪಡಿಸಿದ್ದು, ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ತಲಾ 10 ಸಾವಿರ ರೂಪಾಯಿ ಬಹುಮಾನ ನೀಡುತ್ತಿದೆ. ಅಷ್ಟೇ ಅಲ್ಲ ನಗದು ಬಹುಮಾನದ ಜೊತೆ ವಿಜೇತರಿಗೆ ಮತ್ತೊಂದು ಸುವರ್ಣಾವಕಾಶ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ: ಭಾರತದ ಫೈಟರ್ ಜೆಟ್‌ಗಳಿಗೆ ಹಾನಿ! ಏನಿದು ಟ್ಯಾಕ್ಟಿಕಲ್ ಮಿಸ್ಟೇಕ್? VIDEO
ಆಪರೇಷನ್ ಸಿಂಧೂರದ ಬಗ್ಗೆ ಅತ್ಯುತ್ತಮ ಪ್ರಬಂಧ ಬರೆದವರಿಗೆ ಆಗಸ್ಟ್ 15ರ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋವದಲ್ಲಿ ಭಾಗಿಯಾಗುವ ಆಹ್ವಾನ ನೀಡಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/Operation-Sindoor2.jpg)
ದೇಶದ ನಾಗರಿಕರು ಇದೇ ಜೂನ್ 1 ರಿಂದ ಜೂನ್ 30ರ ಒಳಗಾಗಿ ಆಪರೇಷನ್ ಸಿಂಧೂರದ ಬಗ್ಗೆ ಪ್ರಬಂಧ ಬರೆದು ಭಾರತೀಯ ರಕ್ಷಣಾ ಇಲಾಖೆಗೆ ತಲುಪಿಸಬೇಕು. ಜುಲೈ ತಿಂಗಳಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us