/newsfirstlive-kannada/media/post_attachments/wp-content/uploads/2024/12/RAJANATH-SINGH.jpg)
ಬೆಂಗಳೂರಿನ ಹೆಚ್ಎಎಲ್ನಿಂದ (Hindustan Aeronautics Limited) ಸುಖೋಯ್ ಫೈಟರ್ ಜೆಟ್ (Sukhoi-30 ) ಖರೀದಿಗೆ ಕೇಂದ್ರ ರಕ್ಷಣಾ ಇಲಾಖೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಬರೋಬ್ಬರಿ 13,500 ಕೋಟಿ ರೂಪಾಯಿಗೆ ಒಪ್ಪಂದ ಆಗಿದೆ.
ಭಾರತೀಯ ವಾಯುಪಡೆಗಾಗಿ 13,500 ಕೋಟಿ ರೂಪಾಯಿ ವೆಚ್ಚದಲ್ಲಿ 12 ಸುಖೋಯ್ ಫೈಟರ್ ಜೆಟ್ಗಳನ್ನು ರಕ್ಷಣಾ ಇಲಾಖೆ ಖರೀದಿ ಮಾಡಲಾಗಿದೆ. ರಕ್ಷಣಾ ಇಲಾಖೆಯು ಹೆಚ್ಚುವರಿಯಾಗಿ ಫೈಟರ್ಗಳನ್ನು ಖರೀದಿ ಮಾಡುತ್ತಿದೆ. ವಿವಿಧ ಅಪಘಾತಗಳಲ್ಲಿ ಹಾನಿಯಾದ ಫೈಟರ್ ಜೆಟ್ಗಳ ಬದಲಿಯಾಗಿ ಒಪ್ಪಂದ ಮಾಡಿಕೊಂಡಿದೆ. ಯುದ್ಧ ವಿಮಾನ ತಯಾರಿಕೆಯಲ್ಲಿ ಶೇಕಡಾ 62.5 ರಷ್ಟು ಸ್ವದೇಶಿ ಕಚ್ಚಾ ಸಾಮಗ್ರಿಗಳನ್ನೇ ಬಳಕೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಡ್ರೋನ್ ಪ್ರತಾಪ್ ಅರೆಸ್ಟ್; ಇರಲಾರದೇ ಇರುವೆ ಬಿಟ್ಕೊಂಡ ಪರಿಸ್ಥಿತಿ..!
ಅಂದ್ಹಾಗೆ ಭಾರತೀಯ ರಕ್ಷಣಾ ಇಲಾಖೆಯು ಒಟ್ಟು 260 ಸುಖೋಯ್ ಯುದ್ಧ ವಿಮಾನವನ್ನು ಹೊಂದಿದೆ. ಅಪಘಾತದಲ್ಲಿ ನಾಶವಾದ ಫೈಟರ್ಗಳಿಗೆ ಪರಿಹಾರ ನೀಡಲು ಹೆಚ್ಚುವರಿಯಾಗಿ ಇವುಗಳನ್ನು ಖರೀದಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಸುಖೋಯ್ 30 ಎಂಕೆಐ ವಿಮಾನಗಳಿಗೆ ಸುಧಾರಿತ ಎಂಜಿನ್ಗಳಿಗಾಗಿ ಹೆಚ್ಎಎಲ್ 26 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಸಿಹಿ ಹಾಕಿದೆ. ಏ ಏರೋ ಎಂಜಿನ್ಗಳನ್ನು ಹೆಚ್ಎಎಲ್ನ ಕೊರಾಪುಟ್ ವಿಭಾಗ ತಯಾರಿಸಲಿದೆ.
ಇದನ್ನೂ ಓದಿ:ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ.. ಚಾಂಪಿಯನ್ D ಗುಕೇಶ್ ಬಗ್ಗೆ ನಿಮಗೆ ಎಷ್ಟು ಗೊತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ