Aero Show; 100 ದೇಶಗಳು ಭಾಗಿ.. ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ..!

author-image
Bheemappa
Updated On
Aero India Show; ಬೆಂಗಳೂರಲ್ಲಿ ಭಾರೀ ಟ್ರಾಫಿಕ್​.. ಕೆಲ ರಸ್ತೆಗಳಿಗೆ ಎಂಟ್ರಿಯೇ ಇಲ್ಲ, ಎಲ್ಲೆಲ್ಲಿ?
Advertisment
  • ಏರ್​ ಇಂಡಿಯಾ ಶೋನಲ್ಲಿ ಏನೇನು ಇರಲಿವೆ? ಇಲ್ಲಿದೆ ಮಾಹಿತಿ
  • ರಷ್ಯನ್​, ಅಮೆರಿಕನ್‌, ಫ್ರಾನ್ಸ್​ ಫೈಟ್ ಏರ್‌ಕ್ರಾಪ್ಟ್​ಗಳು ಘರ್ಜನೆ
  • ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ಜನರು ಕಾತರ

2025ನೇ ಸಾಲಿನ ಏರೋ ಇಂಡಿಯಾ ಶೋಗೆ ಕ್ಷಣಗಣನೆ ಶುರುವಾಗಿದೆ. ಬಾನಂಗಳದಲ್ಲಿ‌ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ಜನ ಕಾತರಾಗಿದ್ದಾರೆ. ಈ ಬಾರಿಯ ಏರ್ ಶೋ ಕುರಿತ ಪ್ರಮುಖ ವಿಚಾರಗಳನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುದ್ದಿಗೋಷ್ಠಿ ಮೂಲಕ‌ ಬಿಚ್ಚಿಟ್ಟಿದ್ದಾರೆ. ಬೆಳಗ್ಗೆ 9.30ಕ್ಕೆ ಏರ್​ಶೋಗೆ ಚಾಲನೆ ಸಿಗಲಿದೆ.

ಏರೋ ಇಂಡಿಯಾ ಶೋ ಭಾರತದ ಶಕ್ತಿ, ದೇಶದ ಆತ್ಮವಿಶ್ವಾಸದ ಪ್ರತೀಕ. ಸಿಲಿಕಾನ್ ಸಿಟಿಯ ನೀಲಿ ಆಗಸದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಅಬ್ಬರಿಸಲಿವೆ. ವಿಶ್ವವೇ ತಿರುಗಿ ನೋಡುವಂಥ ಫೈಟರ್ ಜೆಟ್‌ಗಳ ಅದ್ಭುತ ಸ್ಟಂಟ್‌ಗಳಿಗೆ ಹೈಟೆಕ್ ಸಿಟಿ ಸಾಕ್ಷಿಯಾಗಲಿದೆ.

publive-image

ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ!

ಇದು ಏಷ್ಯಾದ ಅತಿದೊಡ್ಡ ಏರ್‌ ಶೋ. ಇವತ್ತಿನಿಂದ ನಭದಲ್ಲಿ ಲೋಹದ ಹಕ್ಕಿಗಳು ವರ್ಣ ರಂಜಿತ ಚಿತ್ತಾರ ಕಾಣಲಿದ್ದು, ನೋಡುಗರ ಮೈ ರೋಮಾಂಚನಗೊಳಿಸಲಿದೆ. ಯಲಹಂಕದ ಏರ್​​ಬೇಸ್​​ನಲ್ಲಿ ಇಂದಿನಿಂದ ಫೆಬ್ರವರಿ 14ರ ತನಕ 2025ನೇ ಏರ್ ಶೋಗೆ ಚಾಲನೆ ನೀಡಲಾಗುತ್ತದೆ.

ಏರ್ ಶೋ ಹಿನ್ನೆಲೆ ರಾಜಧಾನಿಗೆ ಬಂದಿಳಿದಿರೋ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನಿನ್ನೆ, ಕರ್ಟನ್ ರೈಸರ್ಸ್ ಸುದ್ದಿಗೋಷ್ಠಿ ನಡೆಸಿದರು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬರೀ ಏರ್ ಶೋ ಅಷ್ಟೇ ಅಲ್ಲ ಎಂದ ರಾಜನಾಥ್, ಏರೋ ಇಂಡಿಯಾ ದೇಶದ ಆರ್ಥಿಕತೆ, ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತಮ ವೇದಿಕೆ ಅಂತ ಬಣ್ಣಿಸಿದರು.

ಹೇಗಿರಲಿದೆ ಏರ್​ಶೋ-2025

  • ರನ್ ವೇ ಟು ಬಿಲಿಯನ್ ಆಪರ್ಚುನಿಟಿಸಿ ಟ್ಯಾಗ್​ಲೈನ್​
  • 100 ದೇಶಗಳು & 30 ದೇಶಗಳ ಜನಪ್ರತಿನಿಧಿಗಳು ಭಾಗಿ
  • ರಷ್ಯನ್​, ಅಮೆರಿಕನ್‌ ಫೈಟ್ ಏರ್‌ಕ್ರಾಪ್ಟ್​ಗಳು ಘರ್ಜನೆ
  • ಈ ಏರ್​​​ ಶೋದಲ್ಲಿ 900ಕ್ಕೂ ಹೆಚ್ಚು ಉತ್ಪಾದಕರು ಭಾಗಿ
  • ಎಐ, ಡ್ರೋನ್ಸ್, ಸೈಬರ್ ಸೆಕ್ಯುರಿಟಿ, ಗ್ಲೋಬರ್ ಏರೋಸ್ಪೇಸ್
  • ನೂತನ ತಂತ್ರಜ್ಞಾನದ ವಿವಿಧ ಎಕ್ಸಿಬಿಷನ್​ಗಳು ಇರಲಿವೆ
  • ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ

ಇದನ್ನೂ ಓದಿ: Apple; ಕಿಂಗ್ ಕೊಹ್ಲಿ, ರೋಹಿತ್ ಫ್ಯಾನ್ಸ್​ಗೆ ಆಪಲ್ ಎಸೆದ ಯಂಗ್ ಬೌಲರ್​.. ಫುಲ್ ಖುಷ್

publive-image

ಭಾರತೀಯ ರಕ್ಷಣಾ ವಲಯದ ಅಭಿವೃದ್ಧಿ ಆತ್ಮ ನಿರ್ಭರ್ ಭಾರತದ ಮಾದರಿಗಳು ಏರ್​ಶೋನಲ್ಲಿ ಗಮನ ಸೆಳೆಯಲಿವೆ. ತಂತ್ರಜ್ಞಾನದ ಪ್ರದರ್ಶನಕ್ಕೆ ಅತಿದೊಡ್ಡ ವೇದಿಕೆ ಬೆಂಗಳೂರು ಸಜ್ಜಾಗಿದ್ದು, ವಿವಿಧ ಯುದ್ಧ ವಿಮಾನಗಳು, ರಫೆಲ್, ಚಾಪರ್​ಗಳು ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಲಿವೆ. ಒಟ್ಟು 5 ದಿನಗಳ ಕಾಲ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಅಬ್ಬರವೇ ಕೇಳಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment