/newsfirstlive-kannada/media/post_attachments/wp-content/uploads/2025/07/SMG_SHRINIDHI_HEART_ATTACK.jpg)
ಶಿವಮೊಗ್ಗ: ಕಾಲೇಜ್ನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ಶಿವಮೊಗ್ಗ ನಗರದ ಹೊರ ವಲಯದ ಬಸವನಗಂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಸವನಗಂಗೂರು ಗ್ರಾಮದ ಶ್ರೀನಿಧಿ (20) ಕೊನೆಯುಸಿರೆಳೆದ ವಿದ್ಯಾರ್ಥಿ. ನಗರದ ಡಿವಿಎಸ್ ಕಾಲೇಜ್ನಲ್ಲಿ ಶ್ರೀನಿಧಿಯು ಅಂತಿಮ ವರ್ಷದ ಪದವಿಯನ್ನು ಅಭ್ಯಾಸ ಮಾಡುತ್ತಿದ್ದನು. ಜೂನ್ 29 ಅಂದರೆ ಭಾನುವಾರ ಬೆಳಗ್ಗೆ ವಿದ್ಯಾರ್ಥಿಯ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದೆ.
ಇದನ್ನೂ ಓದಿ:JP ನಡ್ಡಾ ಸ್ಥಾನಕ್ಕೆ ಜೋಶಿ ಸೇರಿ ಹಲವರು ರೇಸ್.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?
ಇದರಿಂದ ಗಾಬರಿಗೊಂಡ ಪೋಷಕರು, ಸಂಬಂಧಿಕರು ಮಗನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿಧಿ ಪ್ರಾಣ ಬಿಟ್ಟಿದ್ದಾನೆ. ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಉಸಿರು ಚೆಲ್ಲಿದ್ದಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ