Advertisment

2 ವರ್ಷದ ಹಿಂದೆ ಕಳೆದು ಹೋಗಿದ್ದ ಪುತ್ರ; ಅವನ ಹುಟ್ಟು ಹಬ್ಬದಂದೇ ಕಾದಿತ್ತು ಪೋಷಕರಿಗೆ ಸರ್​ಪ್ರೈಸ್​

author-image
Gopal Kulkarni
Updated On
2 ವರ್ಷದ ಹಿಂದೆ ಕಳೆದು ಹೋಗಿದ್ದ ಪುತ್ರ; ಅವನ ಹುಟ್ಟು ಹಬ್ಬದಂದೇ ಕಾದಿತ್ತು ಪೋಷಕರಿಗೆ ಸರ್​ಪ್ರೈಸ್​
Advertisment
  • ಎರಡು ವರ್ಷದ ಹಿಂದೆ ಕಳೆದು ಹೋಗಿದ್ದ 8 ವರ್ಷದ ಬಾಲಕ
  • ಎನ್​ಐಎ ತಂಡದಿಂದ ನಿರಂತ ಎರಡು ವರ್ಷಗಳ ಹುಡುಕಾಟ
  • ಬಾಲಕ ಹುಟ್ಟು ಹಬ್ಬದಂದು ಪೋಷಕರಿಗೆ ಗಿಫ್ಟ್​ ಕೊಟ್ಟ ಎನ್​ಐಎ

ಫೆಬ್ರವರಿ 15 2023ರಂದು ದೆಹಲಿಯ ಘಾಜಿಯಾಬಾದ್​ನಲ್ಲಿ ಎರಡು ವರ್ಷದ ಬಾಲಕನೊಬ್ಬ ನಾಪತ್ತೆಯಾಗಿರುತ್ತಾನೆ. ಮಾನಸಿಕವಾಗಿ ಕೊಂಚ ಸಮಸ್ಯೆಯಿರುವ ಹುಡುಗ ಕಾಣೆಯಾದ ಬಗ್ಗೆ ಫೆಬ್ರುವರಿ 17 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ದೂರು ದಾಖಲಾಗಿರುತ್ತದೆ. ತನಿಖೆಗೆ ಇಳಿದ ಎನ್​ಐಎ ತಂಡ ಎರಡು ವರ್ಷಗಳ ಕಾಲ ನಿರಂತರ ಹುಡುಕಾಟ ನಡೆಸುತ್ತದೆ. ಇಡೀ ಎನ್​ಐಎ ಪೊಲೀಸರು ಎಡಬಿಡದೆ ಹುಡುಗನನ್ನು ಹುಡುಕು ಕಾರ್ಯದಲ್ಲಿ ನಿರತರಾಗುತ್ತಾರೆ. ಎನ್​ಐಎನ ಉಪ ಆಯುಕ್ತರಾದ ನಿಧಿನ್ ವಲ್ಸನ್ ಹೇಳುವ ಪ್ರಕಾರ ಹುಡುಗನಿಗಾಗಿ ಸಮೀಪದ ಏರಿಯಾಗಳಲ್ಲಿ ತೀವ್ರಶೋಧ ನಡೆಸಲಾಯ್ತಂತೆ, ರೈಲ್ವೆ ಸ್ಟೇಷನ್, ಆಸ್ಪತ್ರೆ, ಗುಡಿಸಲುಗಳು ಹೀಗೆ ಎಲ್ಲಾ ಕಡೆ ಹುಡುಕಿದಾಗಲೂ ಕೂಡ ಹುಡುಗನ ಬಗ್ಗೆ ಒಂದೇ ಒಂದು ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.

Advertisment

ಇದನ್ನೂ ಓದಿ:ತಿಂಗಳಿಗೆ 50 ಗಿಡ ನೆಟ್ಟು 4 ಅಡಿ ಬೆಳೆಸಿ.. ತಪ್ಪು ಮಾಡಿದ್ದಕ್ಕೆ ಹೈಕೋರ್ಟ್‌ ಮಹತ್ವದ ಆದೇಶ; ಕಾರಣವೇನು?

ಆದ್ರೆ ಎನ್​ಐಎ ತಂಡ ಛಲ ಬಿಡಲಿಲ್ಲ, ಹುಡುಕಾಟ ತೀವ್ರಗೊಳಿಸಿದರು. ಸತತ ಎರಡು ವರ್ಷಗಳ ಕಾಲ ಹುಡುಕಾಟ ನಡೆಸಿದ ಎನ್​ಐಎ ಟೀಮ್​ಗೆ ಕಡೆಗೆ ಡಿಸೆಂಬರ್ 3 ರಂದು ಆ ಹುಡುಗ ಕೊನೆಗೂ ಪತ್ತೆಯಾಗಿದ್ದಾನೆ. 8 ವರ್ಷದ ಬಾಲಕನನ್ನು ತಂದು ಪೋಷಕರು ಎದುರು ನಿಲ್ಲಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ತಮ್ಮ ಮಗನನ್ನು ಗುರುತಿಸಿದ್ದಾರೆ. ಇನ್ನೂ ಒಂದು ಅಚ್ಚರಿಯೆಂದರೆ ಡಿಸೆಂಬರ್ 3 ಕಳೆದು ಹೋಗಿದ್ದ ಬಾಲಕನ ಹುಟ್ಟು ಹಬ್ಬವಾಗಿತ್ತು. ಅಂದೇ ತಮ್ಮ ಮಗನನ್ನು ಹುಡುಕಿಕೊಟ್ಟ ಎನ್​ಐಎ ತಂಡಕ್ಕೆ ಬಾಲಕ ಪೋಷಕರು ಕೈಯೆತ್ತಿ ಮುಗಿದಿದ್ದಾರೆ.

Advertisment


">December 4, 2024

ಇದನ್ನೂ ಓದಿ:ಫಾರೀನ್ ಕೆಲಸ; ಲಕ್ಷ ಲಕ್ಷ ಸಂಬಳ; ಆದ್ರೂ ಮದುವೆ ಆಗೋಕೆ ಸಿಗಲ್ಲ ಹುಡುಗಿಯರು; ಕಾರಣವೇನು?

ಸದ್ಯ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಎನ್​ಐಎ ತಂಡ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಅವನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಕ್​ ತಂದು ಕತ್ತರಿಸಿ ಬಾಲಕನ ಪೋಷಕರು ಸೇರಿದಂತೆ ಎನ್​ಐಎ ತಂಡವೂ ಕೂಡ ಸಂಭ್ರಮಿಸಿದೆ. ಎರಡು ವರ್ಷಗಳ ಹಿಂದೆ ತಮ್ಮ ಕುಟುಂಬದಲ್ಲಿ ನಡೆದಿದ್ದ ಒಂದು ಸಮಸ್ಯೆ ಕೊನೆಗೂ ಸುಖಾಂತ್ಯ ಕಂಡಿದ್ದು ಪೋಷಕರಿಗೆ ಎಲ್ಲಿಲ್ಲ ಸಂತಸವನ್ನು ತಂದಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment