/newsfirstlive-kannada/media/post_attachments/wp-content/uploads/2025/04/JOB_STUDENTS.jpg)
ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಪಡೆಯೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸೈನ್ಸ್​​, ಕಾಮರ್ಸ್​​, ಆರ್ಟ್ಸ್ ಯಾವುದೇ ವಿಷಯ ಓದಿರಲಿ. ಎಲ್ಲರಿಗೂ ಸರ್ಕಾರಿ ಕೆಲಸ ಬೇಕೇ ಬೇಕು. ಅಷ್ಟರಮಟ್ಟಿಗೆ ಜನ ಸರ್ಕಾರಿ ಕೆಲಸದ ಹಿಂದೆ ಬಿದ್ದಿದ್ದಾರೆ. ಹಗಲು ರಾತ್ರಿ ನಿದ್ದೆಗೆಟ್ಟು ಓದುತ್ತಾರೆ. ಆರೋಗ್ಯ ಕೆಟ್ರೂ ಪರ್ವಾಗಿಲ್ಲ ಸರ್ಕಾರಿ ಕೆಲಸ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಉದ್ಯೋಗದಲ್ಲಿ ಸಿಗೋ ಭದ್ರತೆ.
ಮಾಸ್ಟರ್​ ಡಿಗ್ರಿ ಮುಗಿದ ಬೆನ್ನಲ್ಲೇ ಎಷ್ಟೋ ವಿದ್ಯಾರ್ಥಿಗಳು KSET, NET ಎರಡು ಎಕ್ಸಾಂ ಕ್ಲಿಯರ್​ ಮಾಡಿಕೊಂಡಿದ್ದಾರೆ. ವರ್ಷಗಟ್ಟಲೇ ಕಷ್ಟಪಟ್ಟು ಓದಿ ಎಕ್ಸಾಂ ಕ್ಲಿಯರ್​ ಮಾಡಿದ್ದಾರೆ. ಬ್ಯಾಚುಲರ್​ ಡಿಗ್ರಿ ಮಾಡಿದವರು ಬೋಧಕೇತರ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದಾರೆ. BA, BE, BSc, MA, MBA, BS, MS, MSW, MBBS ಸೇರಿದಂತೆ PhD ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ನೇಮಕಾತಿ ಮಾಡಲಿದೆ? ಎಂದು ಎದುರು ನೋಡುತ್ತಿದ್ದಾರೆ.
ಭಾರತೀಯರಲ್ಲಿ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹಕ್ಕೆ ಕಾರಣ ಒಂದಿದೆ. ಜಾಬ್ ಸೆಕ್ಯೂರಿಟಿ ಒಂದು ದೊಡ್ಡ ಅಂಶವಾದರೆ, ಉದ್ಯೋಗದಿಂದ ಸಿಗುವ ಇತರೆ ಸೌಲಭ್ಯಗಳು ಜನರನ್ನು ಆಕರ್ಷಿಸುತ್ತವೆ. ಅದರಲ್ಲೂ ಸರ್ಕಾರಿ ಕೆಲಸ ಆದ್ರೆ ಲೈಫ್​ ಸೆಟಲ್​ ಅನ್ನೋದು ಎಲ್ಲರ ನಂಬಿಕೆ. ಇಂಥವರಿಗೆ ಗುಡ್​ನ್ಯೂಸ್​ ಒಂದಿದೆ.
ನೀವು ಕೇಂದ್ರ ಸರ್ಕಾರಿ ನೌಕರಿ ಹುಡುಕುತ್ತಿದ್ದರೆ ನಿಮಗೊಂದು ಸುವರ್ಣಾವಕಾಶ. ಏಮ್ಸ್​​ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಒಟ್ಟೂ 2300 ಹುದ್ದೆಗಳ ಭರ್ತಿ ನಡೆಯಲಿದೆ. ನವದೆಹಲಿಯ ಏಮ್ಸ್​ನಲ್ಲಿ ಖಾಲಿ ಇರೋ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 2025ರ ಸಾಮಾನ್ಯ ನೇಮಕಾತಿ ಪರೀಕ್ಷೆ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದ್ದು, ಈ ನೇಮಕಾತಿಯ ಉದ್ದೇಶ ವಿವಿಧ ಏಮ್ಸ್​​ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿಯಿರೋ 2,300 ಹುದ್ದೆಗಳ ಭರ್ತಿ ಮಾಡೋದಾಗಿದೆ. ಗ್ರೂಪ್ A ಮತ್ತು B ಅಧ್ಯಾಪಕರಲ್ಲದ ಹುದ್ದೆಗಳಿಗೆ ಭರ್ತಿ ಆಗಲಿದೆ.
/newsfirstlive-kannada/media/post_attachments/wp-content/uploads/2024/12/JOBS_SBI.jpg)
ಇನ್ನೂ ಅರ್ಜಿ ಸಲ್ಲಿಸೋದು ಹೇಗೆ?
ಈಗಾಗಲೇ ಅರ್ಜಿಯನ್ನು ವೆಬ್​ಸೈಟ್​ನಲ್ಲಿ ಬಿಡಲಾಗಿದೆ. ಅರ್ಹ ಅಭ್ಯರ್ಥಿಗಳು ಜುಲೈ 31, 2025ರ ಒಳಗೆ ಅರ್ಜಿ ಸಲ್ಲಿಸಬಹುದು. ಏಮ್ಸ್​ ಅಧಿಕೃತ ವೆಬ್​ಸೈಟ್​ www.aiimsexams.ac.in ಮೂಲಕ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.
ಮೊದಲು ನೀವು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಅಲ್ಲಿ ನೇಮಕಾತಿ ಮೇಲೆ ಕ್ಲಿಕ್ ಮಾಡಬೇಕು. Common Recruitment Examination ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸಿಗೋ ಮಾಹಿತಿ ಪಡೆದ ನಂತರ ಹೊಸ ಖಾತೆಯನ್ನು ರಚಿಸಿ. ಕೇಳಲಾದ ಕ್ಷೇತ್ರಗಳಲ್ಲಿ ಅಗತ್ಯವಿರುವ ವಿವರ ನಮೂದಿಸಿ. ರಿಜಿಸ್ಟರ್​​ ಬಳಿಕ ಆನ್​​ಲೈನ್​ನಲ್ಲಿ ರಚಿಸಲಾದ ಸಹಿ ಜೊತೆ ಲಾಗಿನ್ ಮಾಡಿ. ನಿಮ್ಮ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್​ ಮಾಡಬೇಕು. ಬಳಿಕ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ನಂತರ ಅರ್ಜಿ ಪ್ರಿಂಟ್ ತೆಗೆದು ನಿಮ್ಮ ಬಳಿ ಇಟ್ಕೋಬೇಕು.
ವಿದ್ಯಾರ್ಹತೆ ಏನು? ವಯೋಮಿತಿ ಏನು?
ಅರ್ಜಿ ಸಲ್ಲಿಸೋ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷಗಳ ನಡುವೆ ಇರಬೇಕು.
ಪರೀಕ್ಷೆ ವಿಧಾನ ಹೇಗೆ?
ಪರೀಕ್ಷೆಯನ್ನು ಆಗಸ್ಟ್ 25 ಮತ್ತು 26 ರಂದು ನಿಗದಿಪಡಿಸಲಾಗಿದೆ. ಅಡ್ಮಿಟ್ ಕಾರ್ಡ್ ಆಯಾ ಹುದ್ದೆ / ಗುಂಪಿನ ಪರೀಕ್ಷಾ ದಿನಾಂಕಕ್ಕಿಂತ 3 ದಿನಗಳ ಮೊದಲು ಅಪ್ಲೋಡ್ ಮಾಡಲಾಗುತ್ತದೆ. ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡುವ 7 ದಿನಗಳ ಮೊದಲು ನೀವು ಎಲ್ಲಿ ಪರೀಕ್ಷೆ ಬರೆಯಬಹುದು ಎಂಬ ಮಾಹಿತಿ ನೀಡಲಾಗುತ್ತೆ.
/newsfirstlive-kannada/media/post_attachments/wp-content/uploads/2024/11/JOBS_TTD.jpg)
ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ನಡೆಯುತ್ತದೆ. ದಾಖಲೆ ಪರಿಶೀಲನೆ ಮತ್ತು ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 100 ಪ್ರಶ್ನೆಗಳು ಇರ್ತವೆ. ಒಟ್ಟು 400 ಅಂಕಗಳಿದ್ದು, ತಪ್ಪು ಉತ್ತರಗಳಿಗೆ 0.25 ಅಂಕ ಕಟ್​ ಮಾಡಲಾಗುತ್ತದೆ.
ಪರೀಕ್ಷೆ ಕೊಠಡಿಗೆ ಹಾಜರಾಗುವ ಮುನ್ನ ಆಧಾರ್ ಲಿಂಕ್ ಮಾಡಲಾದ ಬಯೋಮೆಟ್ರಿಕ್ ಪರಿಶೀಲನೆ ನಡೆಸಲಾಗುವುದು. ನಂತರ ಅಭ್ಯರ್ಥಿಗಳನ್ನು ಪರೀಕ್ಷೆ ಕೊಠಡಿಗೆ ಕಳುಹಿಸಲಾಗುವುದು. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ತಮ್ಮ ಇ-ಅಡ್ಮಿಟ್ ಕಾರ್ಡ್ ಜತೆಗೆ ಅಧಿಕೃತ ಸರ್ಕಾರಿ ಗುರುತಿನ ಚೀಟಿ ತೆಗೆದುಕೊಂಡು ಹಾಜರಾಗುವುದು ಕಡ್ಡಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us