/newsfirstlive-kannada/media/post_attachments/wp-content/uploads/2024/11/DELHI_POLLUTION_1-2.jpg)
ರಾಷ್ಟ್ರ ರಾಜಧಾನಿಯಲ್ಲಿ ಪ್ರಾಣವಾಯು ಪ್ರಾಣ ತೆಗೆಯುವಂತೆ ಆಗಿದೆ. ಉಸಿರಾಡುವ ಗಾಳಿಯೇ ಮಲಿನವಾಗಿ ರಾಷ್ಟ್ರ ರಾಜಧಾನಿ ಅಪಾಯ ಮಟ್ಟ ಮೀರಿ ಕಲುಷಿತಗೊಂಡಿದ್ದು, ಡೆಲ್ಲಿಯಲ್ಲಿ ಮುನ್ನೆಚ್ಚರಿಕೆಯಾಗಿ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಇವತ್ತು ಮಹತ್ವದ ಸಭೆ ನಡೆಸಲಿದ್ದಾರೆ. ಸುಪ್ರೀಂಕೋರ್ಟ್ನಲ್ಲೂ ವಿಚಾರಣೆ ನಡೆಯಲಿದೆ.
ಗಾಳಿ ಜೀವ ತಗೆಯುವ ಸುಳಿಗಾಳಿ ಆಗಿದೆ. ಪ್ರಾಣ ಕೊಡುವ ಪ್ರಾಣವಾಯು, ಪ್ರಾಣ ಹಿಂಡುತ್ತಿದೆ. ದೆಹಲಿಯಲ್ಲಿ ಪ್ರಾಣವಾಯು ಜನರ ಜೀವಕ್ಕೆ ವಿಷವಾಗುವ ಹಂತಕ್ಕೆ ತಲುಪಿದೆ. ಜೀವ ಸಂಕುಲಕ್ಕೆ ಪ್ರಕೃತಿ ಮಾತೆ ಕರುಣಿಸಿರೋ ಈ ವರವೇ ಸದ್ಯ ಶಾಪವಾಗಿ ಬಿಟ್ಟಿದೆ. ದೆಹಲಿಯ ವಾಯು ಗುಣಮಟ್ಟ ಒಂದೇ ವಾರದಲ್ಲಿ ನಿನ್ನೆ ಮತ್ತೆ ತೀವ್ರ ಕುಸಿತ ಕಂಡಿದೆ. ಇವತ್ತು ಸಹ ಅದೇ ವಾತಾವರಣ ಕಾಣಿಸುತ್ತಿದೆ.
ದಟ್ಟ ಹೊಗೆ, ಮಂಜು.. ದೆಹಲಿಯ ಮಾನ ಕಳೆದ ಮಾಲಿನ್ಯ!
ರಾಷ್ಟ್ರ ರಾಜಧಾನಿ ದೆಹಲಿಗೆ ವರ್ಷದ ಸಾಂಕ್ರಾಮಿಕ ರೋಗದಂತೆ ಕಾಡುತ್ತಿರುವ ವಾಯುಮಾಲಿನ್ಯ, ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹಾಗೂ ಕಪ್ಪುಹೊಗೆ ಆವರಿಸಿದ್ದು ಜನರನ್ನ ಆತಂಕಕ್ಕೆ ತಳ್ಳಿದೆ. ಸರಾಸರಿ 24 ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕ ಸಂಜೆ 7 ಗಂಟೆ ವೇಳೆಗೆ 457ಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಇನ್ನಷ್ಟು ಕುಸಿದಿದ್ದು ಮತ್ತು ಗಣಮಟ್ಟದ ಸೂಚ್ಯಂಕವನ್ನೇ ಉಲ್ಲಂಘಿಸಿದೆ.
10, 12 ಹೊರತು ಉಳಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್
ದೆಹಲಿ ವಾಯುಗುಣಮಟ್ಟ ಗಂಭೀರ ಪರಿಸ್ಥಿತಿಗೆ ತಲುಪಿದ್ದು ಜನರು ಪರಿತಪಿಸುತ್ತಿದ್ದಾರೆ. ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಹಲವು ಕ್ರಮಕ್ಕೆ ಮುಂದಾಗಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್-4ರ ಅಡಿಯಲ್ಲಿ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಡೆಲ್ಲಿಯಲ್ಲಿ ಏನೆಲ್ಲಾ ನಿರ್ಬಂಧ?
- 10, 12 ಬಿಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕ್ಲಾಸ್
- ಬೃಹತ್ ಕಟ್ಟಡ, ಹೆದ್ದಾರಿ, ರಸ್ತೆಗಳು, ವಿದ್ಯುತ್ ಮಾರ್ಗಗಳು
- ಮೇಲ್ಸೇತುವೆಯಂತ ಕಾಮಗಾರಿಗಳು ತಾತ್ಕಾಲಿಕ ಸ್ಥಗಿತ
- ಅಗತ್ಯವಸ್ತು ಸಾಗಣೆ ಹೊರತು ಮಿಕ್ಕೆಲ್ಲ ಟ್ರಕ್‌ಗಳಿಗೆ ನಿಷೇಧ
- ಎಲೆಕ್ಟ್ರಿಕ್, ಸಿಎನ್‌ಜಿ, ಬಿಎಸ್-VI ಡೀಸೆಲ್ ವಾಹನಕ್ಕೆ ಅವಕಾಶ
- ಬೇರೆ ರಾಜ್ಯದ ನೋಂದಣಿ ವಾಣಿಜ್ಯ ವಾಹನಗಳಿಗೆ ನಿರ್ಬಂಧ
- ಎನ್‌ಸಿಆರ್ ಪ್ರದೇಶದ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಕೆಲಸ
ಇದನ್ನೂ ಓದಿ:ಶ್ರೀ ಗವಿಸಿದ್ದೇಶ್ವರ ಅಜ್ಜನ ಜಾತ್ರೆ.. ಬರ್ತಿದ್ದಾರೆ ದೇಶದ ಬಿಗ್ ಸ್ಟಾರ್ ನಟ.. ಯಾರವರು?
ಇನ್ನು, ದೆಹಲಿಯಲ್ಲಿನ ವಾಯುಮಾಲಿನ್ಯ ತಗ್ಗಿಸಲು ಕ್ರಮಗಳನ್ನ ಕೈಗೊಳ್ಳುವಂತೆ ಕೋರಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಇವತ್ತು ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಅಭಯ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಇತ್ತ ಕೇಂದ್ರ ವಾಯು ಗುಣಮಟ್ಟ ಸಮಿತಿಯ ಸಭೆ ನಡೆಯಲಿದೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇನ್ನಷ್ಟು ನಿಯಮಗಳು ಜಾರಿ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ