/newsfirstlive-kannada/media/post_attachments/wp-content/uploads/2024/10/SANJAY-PASSI.jpg)
ನಮಗೆ ಭಾರತದ ಶ್ರೀಮಂತರು ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರೋದು ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಮಂಗಲಮ್ ಬಿರ್ಲಾ, ಸೈರಸ್ ಪೂನಾವಾಲ ಬಿಟ್ಟರೆ ಕೆಲವು ಕ್ರಿಕೆಟರ್​ಗಳ ಹೆಸರು, ಕೆಲವು ಸಿನಿಮಾ ನಟರ ಹೆಸರು. ಅಲ್ವಾ, ಇವರಾಚೆಯೂ ಕೂಡ ಬದುಕಿನ ನೊಗಕ್ಕೆ ಹೆಗಲು ಕೊಟ್ಟ ಎತ್ತಿನಂತೆ ದುಡಿದು ಕೋಟ್ಯಾಧಿಪತಿಗಳಾದವರು ಅನೇಕರಿದ್ದಾರೆ ಅವರಲ್ಲಿ ಒಬ್ಬರು ಈ ಉದ್ಯಮಿ ಸಂಜಯ್ ಪಸ್ಸಿ. ಸದ್ಯ ಉದ್ಯಮದ ಜಗತ್ತಿನಲ್ಲಿ ತಮ್ಮದೇ ಒಂದು ವಿಶೇಷ ಹೆಸರು ಮಾಡಿರುವ ಸಂಜಯ್​ ಆಟೋಮೊಬೈಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಸ್ಕೊ ಗ್ರೂಪ್​ನ ಒಡೆಯರಾಗಿದ್ದಾರೆ.
ಇದನ್ನೂ ಓದಿ : ಆಗ ಮಾಸ್ಟರ್ ಮೈಂಡ್ ಎಂದು ಕರೆಸಿಕೊಂಡ ವ್ಯಕ್ತಿ ಈಗ ನಿರುದ್ಯೋಗಿ! ಇವರ ಕಥೆ ಎಂತವರಿಗೂ ಕೂಡ ಸ್ಪೂರ್ತಿ
ಸಂಜಯ್ ತಮ್ಮ ಕೆಲಸವನ್ನು ತುಂಬಾ ಸದ್ದಿಲ್ಲದೇ ಮಾಡುತ್ತಿದ್ದರು. ಜಗತ್ತಿನ ಬೆಳಕಿನ ಮುಂದೆ ಅವರು ಬಂದಿದ್ದು ಕಡಿಮೆ. ತಾವು, ತಮ್ಮ ಶ್ರದ್ಧೆಯಿಂದ ಮಾಡುವ ಕೆಲಸ ಇಷ್ಟರಲ್ಲಿಯೇ ಇದ್ದವರು ಸಂಜಯ್​ ಏಕಾಏಕಿ ಜನಪ್ರಿಯರಾಗಿದ್ದು ಅವರ ಪತ್ನಿ ಶಾಲಿನಿ ಪಸ್ಸಿ ಟೆಲಿವಿಜನ್​ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ. ನೆಟ್​ಫ್ಲಿಕ್ಸ್​ನಲ್ಲಿ ನಡೆದ Fabulous Lives Vs. Bollywood Wives ಶೋನಲ್ಲಿ ಮೊದಲ ಬಾರಿ ಶಾಲಿನಿ ಕಾಣಿಸಿಕೊಂಡಾಗ ಜಗತ್ತಿಗೆ ಸಂಜಯ್ ಪಸ್ಸಿ ಯಾರು ಅನ್ನೋದರ ಬಗ್ಗೆ ಗೊತ್ತಾಯಿತು.
ಇದನ್ನೂ ಓದಿ: ಲಿಫ್ಟ್​ಗಳಲ್ಲಿ ಕನ್ನಡಿಯನ್ನೇಕೆ ಫಿಟ್ ಮಾಡಿರುತ್ತಾರೆ.? ಕಾರಣ ತಿಳಿದ್ರೆ ನೀವು ಅಚ್ಚರಿಗೊಳ್ತೀರಿ
ಸಂಜಯ್​ ಮೂಲತಃ ದೆಹಲಿಯವರು. ಚಂಡಿಗಢದಲ್ಲಿದ್ದ ತಮ್ಮ ಕುಟುಂಬದ ಟಾಟಾ ಮೊಟಾರ್ಸ್ ಡೀಲರ್​ಶಿಪ್​ನಲ್ಲಿಯೇ ಹಲವು ವರ್ಷ ಪಳಗಿದ ಸಂಜಯ್​, ಅದೇ ವೇಳೆ ತಮ್ಮದೇ ಒಂದು ಹೊಸ ಉದ್ಯಮ ಹುಟ್ಟು ಹಾಕಬೇಕು ಎಂದು ಕಾಯುತ್ತಿದ್ದವರು. ಕನಸಿನಂತೆಯೇ ಪಾಸ್ಕೋ ಗ್ರೂಪ್​ನ್ನು ಕಟ್ಟಿ ನಿಲ್ಲಿಸಿದ ಸಂಜಯ್​ ಈಗ ಬರೋಬ್ಬರಿ 2690 ಕೋಟಿ ರೂಪಾಯಿಯ ಒಡೆಯ. 2021-22ರ ವರ್ಷದ ಪಾಸ್ಕೊ ಕಂಪನಿಯ ಆದಾಯ 2690 ಕೋಟಿ ಎಂದು ತಿಳಿದು ಬಂದಿದೆ. ಈ ಒಂದು ಸಂಸ್ಥೆ ಶುರುವಾಗಿದ್ದು 1967ರಲ್ಲಿ. ಟಾಟಾ ಮೋಟಾರ್ಸ್​ನ ಡಿಲರ್​ಶೀಪ್​ನಿಂದ ಕೋಟಿಗೆ ಬಾಳುವ ಪಾಸ್ಕೊ ಎಂಬ ತನ್ನದೇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಜಯ್ ಈಗ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us