Video: ದೆಹಲಿಗೆ ಬರ್ತಿದ್ದ ವಿಮಾನ ಏಕಾಏಕಿ ರೋಮ್​ಗೆ ಡೈವರ್ಟ್; ಆಕಾಶದಲ್ಲಿ ರಕ್ಷಣೆ ಕೊಟ್ಟ 2 ಫೈಟರ್​ ಜೆಟ್..!

author-image
Ganesh
Updated On
Video: ದೆಹಲಿಗೆ ಬರ್ತಿದ್ದ ವಿಮಾನ ಏಕಾಏಕಿ ರೋಮ್​ಗೆ ಡೈವರ್ಟ್; ಆಕಾಶದಲ್ಲಿ ರಕ್ಷಣೆ ಕೊಟ್ಟ 2 ಫೈಟರ್​ ಜೆಟ್..!
Advertisment
  • ನ್ಯೂಯಾರ್ಕ್​ನಿಂದ ದೆಹಲಿಗೆ ಬರುತ್ತಿದ್ದ ವಿಮಾನ
  • ವಿಮಾನದಲ್ಲಿ 199 ಮಂದಿ ಪ್ರಯಾಣಿಕರು ಇದ್ದರು
  • ಅಮೆರಿಕ ವಿಮಾನಕ್ಕೆ ಭದ್ರತೆ ನೀಡಿದ ಇಟಲಿಯ ಯುದ್ಧ ವಿಮಾನ

ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನಕ್ಕೆ (American Airlines) ಬೆದರಿಕೆ ಹಿನ್ನೆಲೆಯಲ್ಲಿ ರೋಮ್‌ಗೆ ತಿರುಗಿಸಲಾಗಿದೆ. ಬೆದರಿಕೆ ಇರುವ ವಿಷಯ ಸಿಬ್ಬಂದಿಗೆ ತಿಳಿಸಿದಾಗ ವಿಮಾನವು ಕ್ಯಾಸ್ಪಿಯನ್ ಸಮುದ್ರದ ಮೇಲಿತ್ತು.

ಬೆನ್ನಲ್ಲೇ ಇಟಾಲಿಯನ್ ವಾಯುಪಡೆಯ ಯುದ್ಧ ವಿಮಾನಗಳು ಬೆಂಗಾವಲು ನೀಡಿದವು. ರೋಮ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಫೈಟರ್​ ಜೆಟ್​ಗಳು ನೋಡಿಕೊಂಡಿವೆ. ಯುದ್ಧ ವಿಮಾನಗಳು, ಪ್ರಯಾಣಿಕರಿದ್ದ ವಿಮಾನಕ್ಕೆ ರಕ್ಷಣೆ ನೀಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಗಿದ್ದೇನು..?

ನಿನ್ನೆ ರಾತ್ರಿ ಅಮೆರಿಕನ್ ಏರ್​​ಲೈನ್ಸ್ ಫ್ಲೈಟ್-292, 199 ಪ್ರಯಾಣಿಕರನ್ನು ಹೊತ್ತು ದೆಹಲಿಯತ್ತ ಬರುತ್ತಿತ್ತು. ಈ ವೇಳೆ ವಿಮಾನಯಾನ ಸಂಸ್ಥೆಗೆ ಮೇಲ್​-ಮೂಲಕ ಬೆದರಿಕೆ ಬಂದಿದೆ. ಕೂಡಲೇ ಮುಂಜಾಗೃತ ಕ್ರಮವಾಗಿ ಇಟಾಲಿಯನ್ ಫೈಟರ್​ ಜೆಟ್​ಗಳು ಎಸ್ಕಾರ್ಟ್​ ನೀಡಲು ಮುಂದೆ ಬಂದಿವೆ. ಫೈಟರ್​ ಜೆಟ್​ಗಳ ರಕ್ಷಣೆಯಲ್ಲಿ ರೋಮ್​ನ ಲಿಯೊನಾರ್ಡೊ ಡಾ ವಿನ್ಸಿಯಲ್ಲಿ ಪ್ರಯಾಣಿಕರಿದ್ದ ವಿಮಾನ ಸುರಕ್ಷಿತವಾಗಿ ಇಳಿದಿದೆ. ನಂತರ ಭದ್ರತಾ ಸಂಸ್ಥೆಗಳು ವಿಮಾನವನ್ನು ಪರಿಶೀಲನೆ ನಡೆಸಿವೆ. ಆದರೆ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತು ಸಿಗಲಿಲ್ಲ. ಭದ್ರತಾ ದೃಷ್ಟಿಯಿಂದ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲಿಲ್ಲ. ನವದೆಹಲಿಯಲ್ಲಿ ಇಳಿಯುವ ಮೊದಲು ಶಿಷ್ಟಾಚಾರದ ಪ್ರಕಾರ ತಪಾಸಣೆ ಅಗತ್ಯ ಎಂದಿದೆ.

ರೋಮ್‌ನಲ್ಲಿ ಲ್ಯಾಂಡ್ ಆದ ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಿಂದ ಇಳಿದರು. ವಿಮಾನ ಇಳಿಯುವ ಫೋಟೋಗಳು ಮತ್ತು ಫೈಟರ್ ಜೆಟ್‌ಗಳು ಬೆಂಗಾವಲು ಪಡೆಯುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಭಾರತದಲ್ಲಿಯೇ ಇರುವ ಈ ಜಾಗಗಳಲ್ಲಿ ಭಾರತೀಯರಿಗೆ ಇಲ್ಲ ಪ್ರವೇಶವಿಲ್ಲ.. ವಿದೇಶಿಯರಿಗೆ ಮಾತ್ರ ಇಲ್ಲಿ ಮಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment