ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ದಿಢೀರ್​​ ಅನ್​ಫಾಲೋ ಮಾಡಿದ ರಿಷಬ್​ ಪಂತ್; ಕಾರಣವೇನು?

author-image
Ganesh Nachikethu
Updated On
ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ದಿಢೀರ್​​ ಅನ್​ಫಾಲೋ ಮಾಡಿದ ರಿಷಬ್​ ಪಂತ್; ಕಾರಣವೇನು?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​
  • 2025ರ ಐಪಿಎಲ್​ ಮೆಗಾ ಹರಾಜಿಗೆ ಭರ್ಜರಿ ತಯಾರಿ..!
  • ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್ಸಿಯಿಂದ ರಿಷಬ್​ ಪಂತ್​ಗೆ ಕೊಕ್​​​

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜು ಕುರಿತು ಈಗಾಗಲೇ ಬಿಸಿಸಿಐ ಐಪಿಎಲ್​ ತಂಡಗಳ ಜತೆಗೆ ಸಭೆ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಯಾವಾಗ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ.

ಐಪಿಎಲ್ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಭಾರೀ ತಲೆಕೆಡಿಸಿಕೊಂಡಿವೆ. ಅದರಲ್ಲೂ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಎಲ್ಲಾ ತಂಡಗಳು ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಗ್​ ಅಪ್ಡೇಟ್​ ಒಂದು ಹೊರಬಿದ್ದಿದೆ.

ಕ್ಯಾಪ್ಟನ್ಸಿಯಿಂದ ಪಂತ್​​ಗೆ ಕೊಕ್

ಮುಂದಿನ ಸೀಸನ್​ಗಾಗಿ ​ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನಿಗಾಗಿ ಹುಡುಕಾಟ ಶುರು ಮಾಡಿದೆ. ಇದರ ಮಧ್ಯೆ ಕ್ಯಾಪ್ಟನ್​ ರಿಷಬ್ ಪಂತ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್​​ನ 2ನೇ ಇನ್ನಿಂಗ್ಸ್‌ನಲ್ಲಿ 99 ರನ್‌ ಚಚ್ಚಿದ ಪಂತ್​​ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಹೊತ್ತಲ್ಲೇ ಪಂತ್​​​ ಅವರನ್ನು ನಾಯಕತ್ವದ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿರುವುದು ಅಚ್ಚರಿ ಸಂಗತಿ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೇಗಾದ್ರೂ ಮಾಡಿ ಮುಂದಿನ ಸೀಸನ್​​ನಲ್ಲಿ ಐಪಿಎಲ್ ಕಪ್​​​​ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಲು ಕೆಲವು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಿದೆ. ನಾಯಕ ರಿಷಬ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಫ್ರೇಸರ್ ಮೆಕ್‌ಗುರ್ಕ್, ಡೇವಿಡ್ ವಾರ್ನರ್​ ಪ್ರಮುಖರು ಎನ್ನಲಾಗಿತ್ತು. ಇದರ ಮಧ್ಯೆ ಪಂತ್ ಬದಲಿಗೆ ಅಕ್ಸರ್ ಪಟೇಲ್ ನಾಯಕರಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

publive-image

ಇನ್​ಸ್ಟಾ ಪೋಸ್ಟ್​​ ಮೂಲಕ ಪಂತ್​ ಆಕ್ರೋಶ

ಇನ್ನು, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದಂತೆಯೇ ರಿಷಬ್ ಪಂತ್ ಇನ್‌ಸ್ಟಾ ಸ್ಟೋರಿ ಭಾರೀ ವೈರಲ್ ಆಗಿದೆ. ಕೆಲವೊಮ್ಮೆ ಮೌನವಾಗಿರುವುದು ಉತ್ತಮ. ದೇವರು ಜನರಿಗೆ ತೋರಿಸುತ್ತಾನೆ ಎಂದು ತಮ್ಮ ಇನ್‌ಸ್ಟಾದಲ್ಲಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇನ್‌ಸ್ಟಾಗ್ರಾಮ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಕೌಂಟ್ ಪೇಜ್ ಅನ್ನು ಪಂತ್​ ಅನ್‌ಫಾಲೋ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment