/newsfirstlive-kannada/media/post_attachments/wp-content/uploads/2025/03/axar_patel-1.jpg)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಫ್ರಾಂಚೈಸಿಗಳು ಎಲ್ಲಾ ತಯಾರಿ ನಡೆಸಿದ್ದು ತಂಡದ ಆಟಗಾರರನ್ನ ಬರಮಾಡಿಕೊಳ್ಳುತ್ತಿವೆ. ಕೆಲ ಆಟಗಾರರು ಈಗಾಗಲೇ ಫ್ರಾಂಚೈಸಿಯನ್ನು ಸೇರಿಕೊಂಡಿದ್ದಾರೆ. ಇದರ ಜೊತೆಗೆ ಆರ್ಸಿಬಿ ನಾಯಕನ ಹೆಸರು ರಿವೀಲ್ ಮಾಡಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ ಕೂಡ ತಂಡದ ಕ್ಯಾಪ್ಟನ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಟೀಮ್ ಇಂಡಿಯಾದ ಯುವ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಈ ಕುರಿತು ಡೆಲ್ಲಿ ಫ್ರಾಂಚೈಸಿಯು ಅಧಿಕೃತವಾಗಿ ಘೋಷಣೆ ಮಾಡಿದೆ. ಆರ್ಸಿಬಿಯ ಮಾಜಿ ಪ್ಲೇಯರ್ ಹಾಗೂ ಮಾಜಿ ನಾಯಕ ಫಾಪ್ ಡುಪ್ಲೆಸ್ಸಿ ಅವರು ಡೆಲ್ಲಿ ಕ್ಯಾಪ್ಟನ್ ಆಗುತ್ತಾರೆ ಎನ್ನಲಾಗಿತ್ತು. ಇದಾದ ಮೇಲೆ ಕೆಎಲ್ ರಾಹುಲ್ ಅವರು ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಡೆಲ್ಲಿ ಫ್ರಾಂಚೈಸಿಯೂ ಅಕ್ಷರ್ ಪಟೇಲ್ ಅವರನ್ನು ನಾಯಕನಾಗಿ ಅನೌನ್ಸ್ ಮಾಡಿದೆ.
ಇದನ್ನೂ ಓದಿ:RCBಗೆ ಎಂಟ್ರಿ ಕೊಡುವ ಮೊದಲೇ ನ್ಯೂ ಹೇರ್ಸ್ಟೈಲ್.. ವಿರಾಟ್ ಕೊಹ್ಲಿ ಹೊಸ ಲುಕ್ ಹೇಗಿದೆ?
ಅಕ್ಷರ್ ಪಟೇಲ್ ಅವರು ಮೊದಲಿನಿಂದಲೂ ಡೆಲ್ಲಿ ತಂಡದಲ್ಲೇ ಇರುವಂತ ಆಟಗಾರ. 2019ರಲ್ಲಿ ಡೆಲ್ಲಿ ಸೇರಿಕೊಂಡಿದ್ದ ಅಕ್ಷರ್ ಇದುವರೆಗೆ 82 ಪಂದ್ಯಗಳನ್ನು ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ ಫ್ರಾಂಚೈಸಿ 2025ರ ಐಪಿಎಲ್ಗಾಗಿ 16.5 ಕೋಟಿ ರೂಪಾಯಿಗಳನ್ನು ನೀಡಿ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ರಿಟೈನ ಮಾಡಿಕೊಂಡಿತ್ತು. ಒಟ್ಟು 274 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಅಕ್ಷರ್ಗಿದೆ. ಜೊತೆಗೆ 3,088 ರನ್ಗಳ ಸರದಾನಾಗಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 239 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ 2025ರ ಐಪಿಎಲ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೆಂಟ್ಸ್ ಜೊತೆ ಆಡಲಿದೆ. ಈ ಪಂದ್ಯವು ಮಾರ್ಚ್ 24 ರಂದು ಆಂಧ್ರದ ವಿಶಾಖಪಟ್ಟಣಂ ನಗರದಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಿಷಬ್ ಪಂತ್ ಲಕ್ನೋ ಟೀಮ್ನಲ್ಲಿದ್ದು ಮೊದಲ ಪಂದ್ಯವನ್ನೇ ತನ್ನ ನೆಚ್ಚಿನ ಡೆಲ್ಲಿ ತಂಡದ ವಿರುದ್ಧ ಆಡಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ