/newsfirstlive-kannada/media/post_attachments/wp-content/uploads/2025/04/RCB-VS-PBKS.jpg)
ಜೈಪುರದಲ್ಲಿ ಪಂಜಾಬ್ ಕಿಂಗ್ಸ್ಗೆ ಡೆಲ್ಲಿಯ ಪವರ್ ಫುಲ್ ಡಿಚ್ಚಿ ನೀಡ್ತು. ಪಂಜಾಬ್ ನೀಡಿದ್ದ ಬೃಹತ್ ಟಾರ್ಗೆಟ್ನ ಕೂಲ್ ಆ್ಯಂಡ್ ಕಾಮ್ ಆಗಿ ಚೇಸ್ ಡಿದ ಡೆಲ್ಲಿ, ಟೂರ್ನಿಗೆ ಗೆಲುವಿನ ವಿದಾಯ ಹೇಳ್ತು. ಈ ಗೆಲುವಿನ ಕ್ರೆಡಿಟ್ ಸಮೀರ್ ರಿಜ್ವೆಗೆ ಸಲ್ಲಬೇಕು.
ಜೈಪುರದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಳ್ತು. ಇದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ಗೆ ಆರಂಭದಲ್ಲೇ ಮುಸ್ತಾಫಿಜುರ್ ರಹಮಾನ್ ಶಾಕ್ ನೀಡಿದರು. 6 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ವಿಕೆಟ್ ಉರುಳಿಸಿ ಡೆಲ್ಲಿಗೆ ಆರಂಭಿಕ ಮೈಲುಗೈ ತಂದಿಟ್ಟರು. ಈ ವೇಳೆ ಪ್ರಬ್ ಸಿಮ್ರಾನ್ ಜೊತೆಯಾದ ಜೋಶ್ ಇಂಗ್ಲಿಸ್, 2ನೇ ವಿಕೆಟ್ಗೆ 47 ರನ್ಗಳ ಜೊತೆಯಾಟವಾಡಿ ಪಂಜಾಬ್ ತಂಡಕ್ಕೆ ಆಸರೆಯಾದರು.
ಇದನ್ನೂ ಓದಿ: ಆರ್ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!
12 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಒಳಗೊಂಡ 32 ರನ್ ಸಿಡಿಸಿದ್ದ ಇಂಗ್ಲಿಸ್, ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ್ರೆ, ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಪ್ರಭ್ ಸಿಮ್ರಾನ್, 28 ರನ್ಗಳಿಗೆ ಆಟ ಮುಗಿಸಿದ್ರು.
ಈ ವೇಳೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಲು ಮುಂದಾದ ನೇಹಲ್ ವದೇರಾ, 16 ರನ್ಗೆ ಪೆವಿಲಿಯನ್ ಸೇರಿದ್ರು. ಶಶಾಂಕ್ ಸಿಂಗ್ 11 ರನ್ ಗಳಿಸಿದ್ದಾಗ ಮುಸ್ತಾಫಿಜುರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಸ್ಟಬ್ಸ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್, 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಗುಜರಾತ್ ತಂಡದಿಂದ 5 ಸ್ಟಾರ್ಗಳು ಆಯ್ಕೆ.. RCBಯಿಂದ ಎಷ್ಟು ಮಂದಿ ಸೆಲೆಕ್ಟ್..?
ಅರ್ಧಶತಕದ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ ಶ್ರೇಯಸ್, 53 ರನ್ಗೆ ಆಟ ಮುಗಿಸಿ ಪೆವಿಲಿಯನ್ ಸೇರಿದರು. ಈ ಬಳಿಕ ತಂಡದ ಮೊತ್ತ ಹೆಚ್ಚಿಸುವ ವಹಿಸಿಕೊಂಡ ಮಾರ್ಕಸ್ ಸ್ನೋಯಿಸ್, 16 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಒಳಗೊಂಡ ಅಜೇಯ 44 ರನ್ ಸಿಡಿಸಿದ್ರು. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ ಪಂಜಾಬ್, 206 ರನ್ ಗಳಿಸಿತ್ತು.
207 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿಗೆ ಕೆ.ಎಲ್.ರಾಹುಲ್, ಫಾಫ್ ಉತ್ತಮ ಆರಂಭ ನೀಡಿದರು. ಆದ್ರೆ, ಕೆ.ಎಲ್.ರಾಹುಲ್ ಆಟ, 4 ಬೌಂಡರಿ, 1 ಸಿಕ್ಸರ್ ಒಳಗೊಂಡ 35 ರನ್ ಗಳಿಗೆ ಅಂತ್ಯವಾದ್ರೆ. ಫಾಫ್ ಡುಪ್ಲೆಸಿ 23 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಬಳಿಕ ಬಂದ ಸೇದಿಕುಲ್ಲಾ ಅಟಲ್, 22 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ರು.
ಟೆಸ್ಟ್ ತಂಡದ ಕಮ್ಬ್ಯಾಕ್ ಖುಷಿಯಲ್ಲಿದ್ದ ಕರುಣ್, ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಅದರಂತೆಯೇ ಬ್ಯಾಟ್ ಬೀಸಿದ ಕರುಣ್, 44 ರನ್ ಗಳಿಸಿದ್ದಾಗ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಸಮೀರ್ ರಿಜ್ವಿ, ಪಂಜಾಬ್ ಬೌಲರ್ಗಳನ್ನು ಬೆಂಡೆತ್ತಿದರು. 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಮೀರ್ ರಿಜ್ವಿ, ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು.
ಇದನ್ನೂ ಓದಿ: ಪ್ಲೇ-ಆಫ್ಗೆ ಬಂತು ಆನೆಬಲ.. ಬಲಿಷ್ಠ ಸ್ಟಾರ್ ವೇಗಿಗೆ ಮತ್ತೆ ವೆಲ್ಕಮ್ ಹೇಳಿದ ಆರ್ಸಿಬಿ..!\
ಅತ್ತ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಟ್ರಿಸ್ಟನ್ ಸ್ಟಬ್ಸ್, ಅಜೇಯ 18 ರನ್ ಗಳಿಸಿದ್ರೆ. ರಿಜ್ವಿ ಸಿಕ್ಸರ್ನೊಂದಿಗೆ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ಟೂರ್ನಿಗೆ ಡೆಲ್ಲಿ ಗೆಲುವಿನ ವಿದಾಯ ಹೇಳ್ತು. ಇನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಬೇಕು ಎಂಬ ಪಂಜಾಬ್ ಕಿಂಗ್ಸ್ ಪ್ಲಾನ್ಗೆ ಕೊಂಚ ಹಿನ್ನಡೆ ಆಗಿದೆ. ಆ ಮೂಲಕ ಗುಜರಾತ್ ಟೈಟನ್ಸ್ 18 ಅಂಕದೊಂದಿಗೆ ಮೊದಲ ಸ್ಥಾನ ಹಾಗೂ 17 ಪಾಯಿಂಟ್ಸ್ನೊಂದಿಗೆ ಪಿಬಿಕೆಎಸ್ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಇನ್ನು, 17 ಪಾಯಿಂಟ್ಸ್ನೊಂದಿಗೆ ಆರ್ಸಿಬಿ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಆರ್ಸಿಬಿಗೆ ಪಾಯಿಂಟ್ಸ್ ಟೇಬಲ್ನ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯಲು ಅವಕಾಶ ಇದೆ. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಒಳ್ಳೆಯ ರನ್ ರೇಟ್ನಿಂದ ಗೆದ್ದರೆ ಫೈನಲ್ ಪ್ರವೇಶಕ್ಕೆ ಎರಡು ಅವಕಾಶಗಳನ್ನು ಪಡೆಯಲಿದೆ.
ಇದನ್ನೂ ಓದಿ: ಪ್ಲೇ-ಆಫ್ಗೆ ಬಂತು ಆನೆಬಲ.. ಬಲಿಷ್ಠ ಸ್ಟಾರ್ ವೇಗಿಗೆ ಮತ್ತೆ ವೆಲ್ಕಮ್ ಹೇಳಿದ ಆರ್ಸಿಬಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್