/newsfirstlive-kannada/media/post_attachments/wp-content/uploads/2025/04/KL-RAHUL.jpg)
ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮೆರದಾಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ ಆಗಿದೆ. ನಂಬರ್ ಒನ್ ಸ್ಥಾನಕ್ಕೆ ಗುಜರಾತ್ ಟೈಟನ್ಸ್ ತಂಡವು ಬಡ್ತಿ ಪಡೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನಕ್ಕೆ ಕುಸಿದಿದೆ.
ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಬರೋಬ್ಬರಿ 58 ರನ್ಗಳಿಂದ ಗೆದ್ದುಕೊಂಡಿದೆ. ಬೆನ್ನಲ್ಲೇ, ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಮೊದಲ ಸ್ಥಾನಕ್ಕೇರಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟನ್ಸ್ ನಾಲ್ಕರಲ್ಲಿ ಗೆದ್ದು, ಈ ಸಾಧನೆ ಮಾಡಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ಮೂರೂ ಪಂದ್ಯಗಳನ್ನೂ ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಬರಬೇಕು ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಇವತ್ತು ಆರ್ಸಿಬಿ ವಿರುದ್ಧ ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಿದೆ. ಇತ್ತ, ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?
ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಭಾರೀ ನೆಟ್ ರನ್ ರೇಟ್ನೊಂದಿಗೆ ಗೆದ್ದರೆ ಮೊದಲ ಸ್ಥಾನಕ್ಕೇರಲಿದೆ. ಅಂಕಪಟ್ಟಿಯಲ್ಲಿ ಭದ್ರಸ್ಥಾನದಲ್ಲಿ ಇರಬೇಕು ಅಂದರೆ ಆರ್ಸಿಬಿಗೆ ಇವತ್ತು ಗೆಲ್ಲಲೇಬೇಕಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಇದ್ದರೆ, ಐದನೇ ಸ್ಥಾನದಲ್ಲಿ ಎಲ್ಎಸ್ಜಿ ಇದೆ.
ಇನ್ನು ಕೊನೆಯ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವಿದ್ದು, ಸಿಎಸ್ಕೆ 9ನೇ ಸ್ಥಾನದಲ್ಲಿದೆ. ಕೆಕೆಆರ್, ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಕ್ರಮವಾಗಿ ಆರು, ಏಳು ಹಾಗೂ 8ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ಆರ್ಸಿಬಿಗೆ ಚಿನ್ನಸ್ವಾಮಿ ಕಂಟಕ.. ತವರಿನಲ್ಲಿ ಗೆಲ್ಲಲು ರೆಡ್ ಆರ್ಮಿಗೆ ಐದು ಬಿಗ್ಗೆಸ್ಟ್ ಚಾಲೆಂಜ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್