ಬೆಂಗಳೂರಲ್ಲಿ ಅಬ್ಬರಿಸಿದ್ದ ಡೆಲ್ಲಿ, ತವರಲ್ಲಿ ಫುಲ್ ಸೈಲೆಂಟ್.. RCB ಮುಂದೆ ಸಾಧಾರಣ ಟಾರ್ಗೆಟ್​​

author-image
Bheemappa
Updated On
ಪ್ಲೇ ಆಫ್​ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್​ಗೆ ಬಿಗ್ ಟೆನ್ಷನ್ ಶುರು..!
Advertisment
  • ಚಿನ್ನಸ್ವಾಮಿಯಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದ್ದ ಡೆಲ್ಲಿ, ತವರಲ್ಲಿ ಸೈಲೆಂಟ್
  • RCB ಬೌಲರ್​ಗಳ ಮುಂದೆ ರನ್​ ಗಳಿಸಲು ಡೆಲ್ಲಿ ಪ್ಲೇಯರ್ಸ್​ ಪರದಾಟ
  • ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ

ಅಕ್ಷರ್​ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸಾಧಾರಣ ಮೊತ್ತದ ಟಾರ್ಗೆಟ್​ ಅನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ನೀಡಿದೆ. 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ 163 ರನ್​ಗಳ ಗುರಿಯನ್ನು ನೀಡಿದೆ.

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡಬಲ್​ ಹೆಡ್ಡರ್​ನ 2ನೇ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿದರು. ಇದರಿಂದ ತವರಿನಲ್ಲಿ ಡೆಲ್ಲಿ ಕ್ಯಾ​ಪಿಟಲ್ಸ್​ ಮೊದಲ ಬ್ಯಾಟಿಂಗ್ ಮಾಡಿತು. ಆದರೆ ತಾವು ಅಂದುಕೊಂಡ ಯೋಜನೆಯಂತೆ ಅಕ್ಷರ್​ ನೇತೃತ್ವದ ಡೆಲ್ಲಿ ಆಟಗಾರರು ರನ್​ ಗಳಿಸಲು ಆಗಲಿಲ್ಲ. ಆರ್​ಸಿಬಿ ಬೌಲರ್​ಗಳ ಎದುರು ರನ್​ ಕೊಳ್ಳೆ ಹೊಡೆಯಲು ವಿಫಲವಾದರು.

ಇದನ್ನೂ ಓದಿ:ಕನ್ನಡಿಗ KL ರಾಹುಲ್​ ನೋಡಿ ಆರ್​ಸಿಬಿ ಸ್ಟಾರ್​ ಕಿಂಗ್​​​ ಕೊಹ್ಲಿ ಡ್ಯಾನ್ಸ್​.. ಪಂದ್ಯಕ್ಕೂ ಮೊದಲೇ ಹೀಗೆ ಮಾಡಿದ್ದೇಕೆ? -Video

publive-image

ಡೆಲ್ಲಿ ಪರವಾಗಿ ಓಪನರ್ ಆಗಿ ಕಣಕ್ಕೆ ಇಳಿದ ಫಾಫ್​ ಡುಪ್ಲೆಸ್ಸಿಸ್​​ ಹಾಗೂ ಅಭಿಷೇಕ್ ಪೊರೆಲ್​ ಸ್ವಲ್ಪ ಸಮಯ ಅಷ್ಟೇ ಕ್ರೀಸ್​ನಲ್ಲಿದ್ದರು. ತಂಡದ ಮೊತ್ತ 33 ಆಗಿದ್ದಾಗ ಪೊರೆಲ್​ 28 ರನ್​ಗೆ ಕೀಪರ್ ಕ್ಯಾಚ್ ಆಗಿ ಔಟ್ ಆದರು. ಇವರ ನಂತದ ಬಂದ ಕನ್ನಡಿಗ ಕರುಣ್ ನಾಯರ್ ಕೇವಲ 4 ರನ್​ಗೆ ಬ್ಯಾಟಿಂಗ್​ ಮುಗಿಸಿದರು. ಫಾಫ್​ ಕೂಡ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದರೂ ಕೊನೆಗೆ 22 ರನ್​ ಗಳಿಸಿದ್ದಾಗ ವಿರಾಟ್​ ಕೊಹ್ಲಿಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ ದಾರಿ ಹಿಡಿದರು.

ಸ್ಟಾರ್ ಬ್ಯಾಟರ್​ ಕೆ.ಎಲ್ ರಾಹುಲ್​ ಆರ್​ಸಿಬಿ ವಿರುದ್ಧ ಕೆಲ ಹೊತ್ತು ಬ್ಯಾಟ್​ ಬೀಸಿ ತಮ್ಮ ತಂಡಕ್ಕೆ ಉತ್ತಮ ರನ್​ಗಳ ಕೊಡುಗೆ ನೀಡಿದರು. 39 ಬಾಲ್​ಗಳನ್ನು ಎದುರಿಸಿದ್ದ ಕೆ.ಎಲ್ ರಾಹುಲ್​ 3 ಬೌಂಡರಿ ಸಮೇತ 41 ರನ್​ ಗಳಿಸಿ ಆಡುತ್ತಿದ್ದರು. ಈ ವೇಳೆ ಭುವನೇಶ್ವರ್​ ಬೌಲಿಂಗ್​ನಲ್ಲಿ ಕ್ಯಾಚ್​ಗೆ ಬಲಿಯಾದರು. ಇನ್ನು ನಾಯಕ ಅಕ್ಷರ್ ಪಟೇಲ್​ 15, ಅಶುತೋಷ್ ಶರ್ಮಾ 2, ವಿಪ್ರಜ್ ನಿಗಮ್ 12 ರನ್​ಗೆ ರನೌಟ್ ಆದರು. ಇದರಿಂದಾಗಿ ತನ್ನ ನೆಲದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ಗೆ 163 ರನ್​ಗಳ ಸಾಧಾರಣ ಟಾರ್ಗೆಟ್​ ಅನ್ನು ಆರ್​ಸಿಬಿಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment