ಡೆಲ್ಲಿ ರೀಟೈನ್​​ ಮಾಡಿಕೊಳ್ಳೋ ಆಟಗಾರರು ಇವರೇ! ತಂಡದಿಂದ ಸ್ಟಾರ್​ ಪ್ಲೇಯರ್ಸ್​ ಔಟ್​

author-image
Ganesh Nachikethu
Updated On
ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ದಿಢೀರ್​​ ಅನ್​ಫಾಲೋ ಮಾಡಿದ ರಿಷಬ್​ ಪಂತ್; ಕಾರಣವೇನು?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ​ ಭರ್ಜರಿ ತಯಾರಿ
  • ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದಲೂ ರೀಟೈನ್​ಗೆ ಭರ್ಜರಿ ಪ್ಲಾನ್​​!
  • ಮಾಜಿ ಕ್ರಿಕೆಟರ್​ನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಒಂದು ಸಲಹೆ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ​​ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಮುನ್ನ ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಯಾರ ಕೈ ಬಿಡಬೇಕು? ಎಂದು ಯೋಚನೆಯಲ್ಲಿ ತೊಡಗಿವೆ.

ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಅಳೆದು ತೂಗಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಅನ್ನೋ ಒಂದು ನಿರ್ಧಾರಕ್ಕೆ ಬಂದಿದೆ. ಇದರ ಮಧ್ಯೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಆಲ್ ರೌಂಡರ್ ಅಕ್ಸರ್ ಪಟೇಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ಉಳಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಡೆಲ್ಲಿ ಮೊದಲ ಆಯ್ಕೆ ಪಂತ್!

ಮುಂದಿನ ಐಪಿಎಲ್​​ ಸೀಸನ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಪಂತ್​ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್​ ಪಂತ್​ ಅವರನ್ನು ಉಳಿಸಿಕೊಳ್ಳಬೇಕು ಎಂದು ಚೋಪ್ರಾ ಹೇಳಿದ್ದಾರೆ. ಪಂತ್ ತಂಡದ ಮೊದಲ ರಿಟೈನ್ ಆಟಗಾರ. ಇವರು ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲೇ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ ಎಂದರು ಚೋಪ್ರಾ.

ಅಕ್ಷರ್​ 2ನೇ ಆಯ್ಕೆಯಾಗಲಿ!

ಇನ್ನು, ಅಕ್ಷರ್ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬೌಲಿಂಗ್​ ಜತೆಗೆ ಬ್ಯಾಟಿಂಗ್​ ಕೂಡ ಚೆನ್ನಾಗಿ ಮಾಡುತ್ತಾರೆ. ಉತ್ತಮ ಫೀಲ್ಡರ್ ಕೂಡ ಹೌದು. ಅಕ್ಷರ್​​ ಪಟೇಲ್​ ಹರಾಜಿಗೆ ಹೋದರೆ ಖರೀದಿ ಮಾಡಲು ಐಪಿಎಲ್​ ತಂಡಗಳು ಕಾಯುತ್ತಿವೆ. ಹಾಗಾಗಿ ನೀವು ಅವರನ್ನು ಉಳಿಸಿಕೊಳ್ಳಬೇಕು ಎಂದು ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಐಪಿಎಲ್​ ಮೆಗಾ ಆಕ್ಷನ್​​; ಈ ಸ್ಟಾರ್​​ ಆಟಗಾರನ ಖರೀದಿಗೆ 25 ಕೋಟಿ ಮೀಸಲಿಟ್ಟ ಆರ್​​ಸಿಬಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment