/newsfirstlive-kannada/media/post_attachments/wp-content/uploads/2025/04/Prasidh_Krishna.jpg)
ಇಂದಿನ ಡಬಲ್ ಹೆಡ್ಡರ್ ಐಪಿಎಲ್​ನ ಮೊದಲ ಪಂದ್ಯದಲ್ಲಿ ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗುಜರಾತ್​ ಟೈಟನ್ಸ್​ಗೆ ಬಿಗ್​ ಟಾರ್ಗೆಟ್ ನೀಡಿದೆ.
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್​ ತಂಡದ ನಾಯಕ ಶುಭ್​ಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಎದುರಾಳಿ ಡೆಲ್ಲಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಅದರಂತೆ ಡೆಲ್ಲಿ ಪರ ಓಪನರ್ ಆಗಿ ಮೈದಾನಕ್ಕೆ ಬಂದ ಅಭಿಷೇಕ್ ಪೊರೆಲ್ ಹಾಗೂ ಕನ್ನಡಿಗ ಕರುಣ್ ನಾಯರ್ ಒಳ್ಳೆಯ ಆರಂಭಿಕ ಬ್ಯಾಟಿಂಗ್ ಪಡೆಯಲಿಲ್ಲ. ಪೊರೆಲ್ 18, ನಾಯರ್ 31 ರನ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು.
ಭರವಸೆಯ ಬ್ಯಾಟರ್ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿತ್ತು. ಆದರೆ 28 ರನ್​ ಗಳಿಸಿ ಆಡುವಾಗ ಪ್ರಸಿದ್ಧ್​ ಕೃಷ್ಣ ಬೌಲಿಂಗ್​ನಲ್ಲಿ ಎಲ್​​ಬಿಗೆ ಬಲಿಯಾದರು. ನಾಯಕ ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 1 ಫೋರ್, 2 ಸಿಕ್ಸರ್​ನಿಂದ 39 ರನ್​ಗೆ ವಿಕೆಟ್​ ಒಪ್ಪಿಸಿದರು. ಸ್ಟಬ್ಸ್​ ಎಂದಿನಂತೆ ತಂಡಕ್ಕೆ 31 ರನ್​ಗಳ ಕಾಣಿಕೆ ನೀಡಿದರು.
/newsfirstlive-kannada/media/post_attachments/wp-content/uploads/2025/04/Prasidh_Krishna_1.jpg)
ಅಶುತೋಷ್​ ಶರ್ಮಾ ಈ ಬಾರಿ ಬ್ಯಾಟಿಂಗ್​​ನಲ್ಲಿ ಆರ್ಭಟಿಸಿದ್ದು ಗುಜರಾತ್​ ಬೌಲರ್​ಗಳಿಗೆ ಬೆಂಡೆತ್ತಿದರು. 19 ಎಸೆತಗಳನ್ನು ಎದುರಿಸಿದ ಅಶುತೋಷ್​ ಶರ್ಮಾ 2 ಬೌಂಡರಿ 3 ಭರ್ಜರಿ ಸಿಕ್ಸರ್​​ಗಳಿಂದ 37 ರನ್​ಗಳಿಸಿ ಪೆವಿಲಿಯನ್​ಗೆ ನಡೆದರು. ಡೆಲ್ಲಿ 200 ರನ್​ ತಲುಪಲು ಇವರೇ ಕಾರಣ ಎನ್ನಬಹುದು.
ಈ ಎಲ್ಲರ ಉತ್ತಮವಾದ ಬ್ಯಾಟಿಂಗ್​ನಿಂದ ಡೆಲ್ಲಿ ಕ್ಯಾಪಿಟಲ್ಸ್​ 8 ವಿಕೆಟ್​ಗೆ 204 ರನ್​​ಗಳ ಬೃಹತ್​ ಟಾರ್ಗೆಟ್​ ಅನ್ನು ಗುಜರಾತ್​ ತಂಡಕ್ಕೆ ನೀಡಿದೆ. ಗುಜರಾತ್​ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಯುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು 4 ಓವರ್​ಗಳನ್ನು ಮಾಡಿ 41 ರನ್​ ನೀಡಿ ಜೊತೆಗೆ ಪ್ರಮುಖ 4 ವಿಕೆಟ್​ ಪಡೆದು ಸಂಭ್ರಮಿಸಿದರು. ಉಳಿದಂತೆ ನಾಲ್ವರು ಬೌಲರ್​ಗಳು ತಲಾ ಒಂದೊಂದು ವಿಕೆಟ್​ ಕಬಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us