ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ಸಿಯಿಂದ ರಿಷಬ್ ಪಂತ್ಗೆ ಕೊಕ್
ತಂಡದ ಹೊಸ ರೀಟೈನ್ ಲಿಸ್ಟ್ನಲ್ಲಿ ಅಚ್ಚರಿ ಹೆಸರುಗಳು..!
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಮುನ್ನವೇ ಎಲ್ಲಾ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಕೆ ಮಾಡಿವೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಯಾವಾಗ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಭಾರೀ ತಲೆಕೆಡಿಸಿಕೊಂಡಿತ್ತು. ಅದರಲ್ಲೂ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಎಲ್ಲಾ ತಂಡಗಳು ಕಾರ್ಯತಂತ್ರ ರೂಪಿಸಿದೆ. ಈಗ ಅಳೆದು ತೂಗಿ ತನಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಪಂತ್ಗೆ ಕೊಕ್ ನೀಡಿದೆ.
ಯಾರಿಗೆ ಮಣೆ?
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಕಪ್ ಗೆಲ್ಲಲು ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸ್ಟಾರ್ ನಾಯಕ ರಿಷಬ್ ಪಂತ್ ಅವರನ್ನೇ ಕೈ ಬಿಟ್ಟಿದೆ. ಸ್ಟಾರ್ ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರಿಗೆ ಬರೋಬ್ಬರಿ 16.5 ಕೋಟಿ ನೀಡಿ ಉಳಿಸಿಕೊಂಡಿದೆ. ನಂತರ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ 13.25 ಕೋಟಿ, 3ನೇ ಆಯ್ಕೆಯ ಆಟಗಾರನಾಗಿ ಟ್ರಿಸ್ಟಾನ್ ಸ್ಟಬ್ಸ್ ಅವರಿಗೆ 10 ಕೋಟಿ ಕೊಟ್ಟು ರೀಟೈನ್ ಮಾಡಿಕೊಂಡಿದೆ. ಯುವ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್‌ಗೆ 4 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.
ಪಂತ್ಗೆ ಕೊಕ್
ರಿಷಬ್ ಪಂತ್ ಬದಲಿಗೆ ಅಕ್ಸರ್ ಪಟೇಲ್ ನಾಯಕರಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆಯೇ ಇದರ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದಂತೆಯೇ ರಿಷಬ್ ಪಂತ್ ಇನ್‌ಸ್ಟಾ ಸ್ಟೋರಿ ಭಾರೀ ವೈರಲ್ ಆಗಿತ್ತು. ಕೆಲವೊಮ್ಮೆ ಮೌನವಾಗಿರುವುದು ಉತ್ತಮ. ದೇವರು ಜನರಿಗೆ ತೋರಿಸುತ್ತಾನೆ ಎಂದು ತಮ್ಮ ಇನ್‌ಸ್ಟಾದಲ್ಲಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಇನ್‌ಸ್ಟಾಗ್ರಾಮ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಕೌಂಟ್ ಪೇಜ್ ಅನ್ನು ಪಂತ್ ಅನ್‌ಫಾಲೋ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ