/newsfirstlive-kannada/media/post_attachments/wp-content/uploads/2025/03/Ashutosh-Sharma.jpg)
ವಿಶಾಖಪಟ್ಟಣಂನಲ್ಲಿ ನಡೆದ ಐಪಿಎಲ್ 2025ರ 4ನೇ ಪಂದ್ಯದ ಅಂತಿಮ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಲ್ಎಸ್ಜಿ ವಿರುದ್ಧ ರೋಚಕ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂತ್ ಪಡೆ, 8 ವಿಕೆಟ್ ಕಳೆದುಕೊಂಡು 209 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ, ಡೆಲ್ಲಿ ಕ್ಯಾಪಿಟಲ್ಸ್.. ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೇ ತಂಡದ ಸ್ಕೋರ್ ಕೇವಲ 65 ರನ್ ಇರುವಾಗ 5 ವಿಕೆಟ್ ಕಳೆದುಕೊಂಡು ಸೋಲಿಗೆ ಸಿಲುಕಿತ್ತು.
ಇದನ್ನೂ ಓದಿ: Babygirl: ಮೊದಲ ಮಗುವಿಗೆ ಜನ್ಮ ಕೊಟ್ಟ ಕ್ರಿಕೆಟಿಗ KL ರಾಹುಲ್, ನಟಿ ಅಥಿಯಾ ದಂಪತಿ
ನಂತರ ಬಂದ ಸ್ಟಬ್ಸ್, ವಿಪ್ರಜ ನಿಗಮ್ ಹಾಗೂ ಅಶುತೋಷ್ ಶರ್ಮಾ ಎಲ್ಎಸ್ಜಿ ಬೌಲರ್ ವಿರುದ್ಧ ಸಿಡಿದು ನಿಂತತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್, ಮೂರು ಬಾಲ್ ಬಾಕಿ ಇರುವಾಗಲೇ 211 ರನ್ಗಳಿಸುವ ಮೂಲಕ ಗೆಲುವು ದಾಖಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಶುತೋಷ್ ಶರ್ಮಾ ಬರೋಬ್ಬರಿ 66 ರನ್ಗಳಿಸಿ ತಂಡದ ಗೆಲುವಿಗೆ ನಿರ್ಣಾಯ ಪಾತ್ರವಹಿಸಿದ್ದರು. ಕೇವಲ 31 ಬಾಲ್ನಲ್ಲಿ ಐದು ಸಿಕ್ಸರ್, ಐದು ಬೌಂಡರಿ ಬಾರಿಸಿದರು.
ಇದನ್ನೂ ಓದಿ: 6, 6, 6, 6, 6, 6, 6! ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್.. ಹೇಗಿತ್ತು ಸಿಡಿಲಬ್ಬರದ ಅರ್ಧ ಶತಕ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್