/newsfirstlive-kannada/media/post_attachments/wp-content/uploads/2025/05/Delhi-Capitals-vs-Mumbai-Indians-1.jpg)
IPL ಸೀಸನ್ 18ರಲ್ಲಿ ಈಗಾಗಲೇ 62 ಪಂದ್ಯಗಳು ಮುಗಿದಿದೆ. ಇನ್ನುಳಿದಿರುವುದು ಕೇವಲ 8 ಪಂದ್ಯಗಳು ಮಾತ್ರ. ಈ 8 ಮ್ಯಾಚ್​ಗಳ ಪೈಕಿ ಇವತ್ತಿನ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ದಂಗಲ್ ಐಪಿಎಲ್ ಪ್ರಿಯ ಎದೆಬಡಿತ ಹೆಚ್ಚಿಸಿದೆ.
ಇವತ್ತಿನ ಪಂದ್ಯ ಡೆಲ್ಲಿ ಹಾಗೂ ಮುಂಬೈ ಎರಡು ತಂಡಗಳಿಗೆ ಡು ಆರ್ ಡೈ ಮ್ಯಾಚ್. ಯಾಕಂದ್ರೆ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಯಾರಿಗೆ ಅದೃಷ್ಟ ಖುಲಾಯಿಸುತ್ತೆ ಅನ್ನೋದು ಡು ಆರ್ ಡೈ ಮ್ಯಾಚ್​ನಲ್ಲಿ ತಿಳಿಯಲಿದೆ.
/newsfirstlive-kannada/media/post_attachments/wp-content/uploads/2025/05/Delhi-Capitals-vs-Mumbai-Indians.jpg)
ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಐಪಿಎಲ್ ಸೀಸನ್ 18ರ 63ನೇ ಪಂದ್ಯ ನಡೆಯುತ್ತಿದೆ. ಬಲಿಷ್ಠ ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗ್ತಿವೆ. ಮುಂಬೈ ಇಂಡಿಯನ್ಸ್ ತವರಿನಲ್ಲಿ ಪಂದ್ಯ ನಡೆಯುತ್ತಿದ್ದರೂ ಮಳೆಯ ಅಲರ್ಟ್ ಫ್ಯಾನ್ಸ್‌ಗೆ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ. ಮಳೆಯಿಂದ ಇವತ್ತಿನ ಪಂದ್ಯ ರದ್ದಾದರೂ ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒನ್ ಲೈಫ್ ಲೈನ್ ಇದೆ.
ಇದನ್ನೂ ಓದಿ: ಡು ಆರ್ ಡೈ ಮ್ಯಾಚ್​; ಸೋತರೇ.. ಡೆಲ್ಲಿ, ಮುಂಬೈ ತಂಡಗಳಲ್ಲಿ One Life Line ಯಾರಿಗಿದೆ?
ಸೀಸನ್ 18ರ ಪಾಯಿಂಟ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 14 ಅಂಕಗಳಿಸಿದೆ. ಡೆಲ್ಲಿ 13 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಉಳಿದಿದೆ. ಹೀಗಾಗಿ ಇವತ್ತಿನ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ಪಾಲಿಗೆ ಡು ಆರ್ ಡೈ ಮ್ಯಾಚ್. ಡೆಲ್ಲಿ ಕ್ಯಾಪಿಟಲ್ಸ್ ಸೋತರೆ ಈ ಬಾರಿಯ ಐಪಿಎಲ್ ಟೂರ್ನಿಯಿಂದಲೇ ಔಟ್ ಆಗುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2025/05/Delhi-Capitals-vs-Mumbai-Indians-2.jpg)
ಡು ಆರ್ ಡೈ ಮ್ಯಾಚ್​ಗಳಲ್ಲಿ ಮುಂಬೈ ಇಂಡಿಯನ್ಸ್​ ನಿಜಕ್ಕೂ ಡೇಂಜರಸ್ ಟೀಮ್. ಐಪಿಎಲ್​ನ ಇತಿಹಾಸವೇ ಮಹತ್ವದ ಪಂದ್ಯಗಳಲ್ಲಿ ಮುಂಬೈ, ಎಷ್ಟು ಅಗ್ರೆಸ್ಸಿವ್ ಬ್ರ್ಯಾಂಡ್​ ಆಫ್ ಕ್ರಿಕೆಟ್ ಆಡುತ್ತೆ ಅನ್ನೋದನ್ನ ಸಾರಿ ಸಾರಿ ಹೇಳುತ್ತೆ. ಇವತ್ತಿನ ಪಂದ್ಯ ಮಳೆಯಿಂದ ರದ್ದಾದರೂ ಮುಂಬೈ ಇಂಡಿಯನ್ಸ್ ಮುಂದೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಮುಂಬೈನಲ್ಲಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಇತ್ತು. ಹವಾಮಾನ ಇಲಾಖೆ ಮುಂದಿನ 4 ದಿನಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಆದರೆ ಸಂಜೆ ವೇಳೆಗೆ ಶೇಕಡಾ 20ರಷ್ಟು ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದ್ರೆ ಪ್ಲೇ ಆಫ್ ಕನಸು ಮುಂಬೈಗಿಂತ ಡೆಲ್ಲಿಗೆ ಕಷ್ಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us