/newsfirstlive-kannada/media/post_attachments/wp-content/uploads/2025/04/KL-RAHUL-1.jpg)
ತೀವ್ರ ರೋಚಕತೆಗೆ ತಿರುಗಿದ್ದ 2025 ರ ಐಪಿಎಲ್​ನ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನ ಸೂಪರ್ ಓವರ್‌ನಲ್ಲಿ ಮಣಿಸಿ ಅಮೋಘ ಗೆಲುವು ದಾಖಲಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 188 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ಕೂಡ ಅಷ್ಟೇ ಮೊತ್ತವನ್ನು ಪೇರಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ನತ್ತ ಸಾಗಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 11 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಇನ್ನು 2 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.
ಗೆಲ್ಲಿಸಿಕೊಟ್ಟ ಕೆ.ಎಲ್.ರಾಹುಲ್..!
ಡೆಲ್ಲಿ ಗೆಲ್ಲಿಸುವಲ್ಲಿ ಕನ್ನಡಿಗ ಕೆ.ಎಲ್.ರಾಹುಲ್​ ಪ್ರಮುಖ ಪಾತ್ರ ನಿರ್ವಹಿಸದರು. ಪಂದ್ಯದ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪರಿಸ್ಥಿತಿಯನ್ನು ಅರಿತ ರಾಹುಲ್, ಚೇತರಿಕೆಯ ಇನ್ನಿಂಗ್ಸ್​ ಕಟ್ಟಿದರು. 2 ಸಿಕ್ಸರ್, ಎರಡು ಬೌಂಡರಿಯೊಂದಿಗೆ 38 ರನ್​ಗಳ ಕಾಣಿಕೆ ನೀಡಿದರು. ಇದರ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 188 ರನ್​ಗಳಿಸುವಲ್ಲಿ ಯಶಸ್ವಿ ಆಯಿತು. ಅಲ್ಲದೇ, ಫೀಲ್ಡಿಂಗ್ ವೇಳೆ ಅಕ್ಸರ್ ಪಟೇಲ್ ಜೊತೆ ಸೇರಿ ಎದುರಾಳಿ ಧ್ರುವ್ ಜುರೇಲ್​​ರನ್ನು ರನ್​ಔಟ್ ಮಾಡುವಲ್ಲಿ ಯಶಸ್ವಿಯಾದರು. ಪರಿಣಾಮ ಪಂದ್ಯ ಸೂಪರ್​ ಓವರ್​ನತ್ತ ತಿರುಗಲು ಸಹಾಯ ಆಯಿತು. ಈ ಅವಧಿಯಲ್ಲಿ ಮಿಚಲ್ ಸ್ಟಾರ್ಕ್​ ಡೆಲ್ಲಿ ಪರ ಅದ್ಭುತವಾಗಿ ಬೌಲಿಂಗ್ ಮಾಡಿದರು.
/newsfirstlive-kannada/media/post_attachments/wp-content/uploads/2025/04/KL_RAHUL-1.jpg)
ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 11 ರನ್​ಗಳಿಸಿತ್ತು. 12 ರನ್​ಗಳ ಗುರಿ ಬೆನ್ನು ಹತ್ತಲು ಡೆಲ್ಲಿ ಕ್ಯಾಪಿಟಲ್ಸ್​ ಕಡೆಯಿಂದ ಕೆ.ಎಲ್.ರಾಹುಲ್ ಹಾಗೂ ಸ್ಟಬ್ಸ್ ಕ್ರೀಸ್​ಗೆ ಬಂದರು. ಮೊದಲ ಬಾಲ್ ಎದುರಿಸಿದ ರಾಹುಲ್, ಎರಡು ರನ್​ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಬಾಲ್​ನಲ್ಲಿ ಸಂದೀಪ್ ಶರ್ಮಾಗೆ ಬೌಂಡರಿ ಬಾರಿಸಿದರು. ಮೂರನೇ ಬಾಲ್​ ಸಿಂಗಲ್ ತೆಗೆದುಕೊಂಡರು. ಆ ಮೂಲಕ ಮೂರು ಬಾಲ್​ನಲ್ಲಿ 7 ರನ್​ಗಳಿಸಿದರು. ಕೊನೆಯ ಮೂರು ಬಾಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 6 ರನ್​ಗಳ ಅಗತ್ಯ ಇತ್ತು. ನಾಲ್ಕನೇ ಬಾಲ್​ನಲ್ಲಿ ಸ್ಟಬ್ಸ್​ ಸಿಕ್ಸರ್​ ಬಾರಿಸುವ ಮೂಲಕ ಪಂದ್ಯ ಫಿನಿಶ್ ಮಾಡಿದರು. ಸೂಪರ್ ಓವರ್​ನಲ್ಲಿ ರಿಯಾನ್ ಪರಾಗ್​ರನ್ನು ರನ್​​ಔಟ್ ಮಾಡುವಲ್ಲಿ ಕೆ.ಎಲ್.ರಾಹುಲ್ ಯಶಸ್ವಿಯಾದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us