ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?

author-image
Ganesh
Updated On
ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?
Advertisment
  • ಇವತ್ತು ಆರ್​ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ
  • ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30ಕ್ಕೆ ಮ್ಯಾಚ್
  • ಪಿಚ್ ರಿಪೋರ್ಟ್ ಹೇಗಿದೆ?​ ವೆದರ್ ರಿಪೋರ್ಟ್ ಏನ್ ಹೇಳ್ತಿದೆ? ​

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಇಂದಿನ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಆಗುತ್ತಾ..?

ಹವಾಮಾನ ಇಲಾಖೆ ಪ್ರಕಾರ, ಇವತ್ತು ಬೆಂಗಳೂರಲ್ಲಿ ಮಳೆ ಸಾಧ್ಯತೆ ಇಲ್ಲ. ಟೆಂಪ್ರೆಚರ್​ 34 ಡಿಗ್ರಿ ಸೆಲ್ಸಿಯಸ್​ ಇದೆ. ಪಂದ್ಯ ಶುರುವಾಗುವ ಹೊತ್ತಿಗೆ ತಾಪಮಾನ 20 ಡಿಗ್ರಿ ಸೆಲ್ಸಿಯಸ್​​ಗೆ ಬಂದು ತಲುಪಲಿದೆ. ಅಭಿಮಾನಿಗಳು ಯಾವುದೇ ಆತಂಕವಿಲ್ಲದೇ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.

ಪಿಚ್ ರಿಪೋರ್ಟ್​..!

2025ರ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ.. ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಆರ್​ಸಿಬಿ ಮೂರನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧ ಗೆದ್ದುಕೊಂಡಿರುವ ಆರ್​ಸಿಬಿ ಮತ್ತೊಂದು ಗೆಲುವಿಗಾಗಿ ಹೋಮ್ ಗ್ರೌಂಡ್​ನ ಅಡ್ವಾಂಟೇಜ್ ಪಡೆದುಕೊಳ್ಳಬೇಕಿದೆ.

ಇದನ್ನೂ ಓದಿ: ದತ್ತು ಪುತ್ರ vs ಮನೆ ಮಗ.. ಚಿನ್ನಸ್ವಾಮಿಯಲ್ಲಿ ಇವತ್ತು ಆರ್​ಸಿಬಿ ಸ್ಪೆಷಲ್ ಪ್ಲಾನ್..!

publive-image

ಚಿಕ್ಕ ಬೌಂಡರಿಗಳಿರೋ ಚಿನ್ನಸ್ವಾಮಿ ಸ್ಟೇಡಿಯಂ ಬೌಲರ್​ಗಳ ಪಾಲಿಗೆ ಎಂದಿಗೂ ವಿಲನ್. ಬೆಂಗಳೂರಿನ ಪಿಚ್, ಬ್ಯಾಟ್ಸಮನ್​​ಗಳಿಗೆ ಯೋಗ್ಯವಾಗಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಬಿಗ್​ಸ್ಕೋರ್​ ನಿರೀಕ್ಷೆ ಮಾಡಲಾಗಿದೆ. ಮಿಡಲ್​ ಓವರ್​​ಗಳಲ್ಲಿ ಸ್ಪಿನ್ನರ್ಸ್​ ಮೇಲುಗೈ ಸಾಧಿಸಲಿದ್ದಾರೆ. 2008 ರಿಂದ ಇಲ್ಲಿಯವರೆಗೆ ಒಟ್ಟು 96 ಐಪಿಎಲ್ ಪಂದ್ಯಗಳು ನಡೆದಿದ್ದು, ಚೇಸ್​ ಮಾಡಿದ ತಂಡ ಹೆಚ್ಚುಬಾರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ತಂಡ 41 ಬಾರಿ ಗೆದ್ದರೆ, ಟಾರ್ಗೆಟ್​ ಬೆನ್ನತ್ತಿದ್ದ ತಂಡ 51 ಬಾರಿ ಗೆದ್ದು ಬೀಗಿದೆ. ಚಿನ್ನಸ್ವಾಮಿಯಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ 287/3 ಆಗಿದೆ. 2024ರಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಸನ್ ರೈಸರ್ಸ್​ ಹೈದರಾಬಾದ್ ತಂಡವು 287 ರನ್​ಗಳಿಸಿತ್ತು.

ಇದನ್ನೂ ಓದಿ: ಆರ್​ಸಿಬಿ vs ಮಾಜಿ ಆರ್​ಸಿಬಿ ಆಟಗಾರರು.. ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಇವ್ರದ್ದೇ ದರ್ಬಾರ್​​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment