newsfirstkannada.com

ಕನ್ನಡಿಗ ರಾಹುಲ್​​​ ತಂಡಕ್ಕೆ ಹೀನಾಯ ಸೋಲು; ರಿಷಬ್​​ ಪಂತ್​ ಪಡೆಗೆ ಭರ್ಜರಿ ಗೆಲುವು

Share :

Published April 12, 2024 at 11:22pm

    ಲಕ್ನೋ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯ

    ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್

    ಲಕ್ನೋ ನೀಡಿದ ಸಾಧಾರಣ ಮೊತ್ತದ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಟೀಮ್​​

ಇಂದು ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ತಂಡವು ಗೆದ್ದು ಬೀಗಿದೆ.

ಲಕ್ನೋ ನೀಡಿದ ಸಾಧಾರಣ ಮೊತ್ತದ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ 18.1 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 170 ರನ್​ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಡೆಲ್ಲಿ ಪರ ಓಪನರ್​ ಆಗಿ ಬಂದ ಪೃಥ್ವಿ ಶಾ ಕೇವಲ 22 ಬಾಲ್​ನಲ್ಲಿ 6 ಫೋರ್​ ಸಮೇತ 32 ರನ್​ ಸಿಡಿಸಿದ್ರು. ಜೇಕ್ಸ್​ ತಾನು ಡೆಬ್ಯೂಟ್​ ಮಾಡಿದ ಪಂದ್ಯದಲ್ಲೇ 35 ಬಾಲ್​ನಲ್ಲಿ 5 ಸಿಕ್ಸರ್​, 2 ಫೋರ್​ನೊಂದಿಗೆ 55 ರನ್​ ಚಚ್ಚಿದ್ರು.

ಕ್ಯಾಪ್ಟನ್​ ರಿಷಬ್​​​​ ಪಂತ್​​ 24 ಬಾಲ್​ನಲ್ಲಿ 2 ಸಿಕ್ಸರ್​, 4 ಫೋರ್​ನೊಂದಿಗೆ 41 ರನ್​ ಸಿಡಿಸಿದ್ರು. ಸ್ಟಬ್ಸ್​​ 15, ಶೈ ಹೋಪ್​ 11 ರನ್​ ಗಳಿಸಿ ತಂಡವನ್ನು ಗೆಲ್ಲಿಸಿದ್ರು.

ಲಕ್ನೋ ತಂಡದ ಪರ ಡಿಕಾಕ್​​ 19 ಮತ್ತು ಕ್ಯಾಪ್ಟನ್​ ಕೆ.ಎಲ್​ ರಾಹುಲ್​ 22 ಬಾಲ್​ನಲ್ಲಿ 1 ಸಿಕ್ಸರ್​, 5 ಫೋರ್​ ಸಮೇತ 39 ರನ್​ ಗಳಿಸಿದ್ರು. ಬಳಿಕ ಆಯೂಷ್​​ ಬದೋನಿ 35 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​​ ಸಮೇತ 55 ರನ್​ ಗಳಿಸಿದ್ರು. ಇವರ ಸಹಾಯದಿಂದ ಲಕ್ನೋ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 167 ರನ್​​ ಪೇರಿಸಿತ್ತು.

ಇದನ್ನೂ ಓದಿ: ಭಾರತ ಆಟಗಾರರ ನಿದ್ದೆಗೆಡಿಸಿದ RCB ಫಿನಿಶರ್​​; T20 ವಿಶ್ವಕಪ್​ ಆಡ್ತಾರಾ ದಿನೇಶ್​ ಕಾರ್ತಿಕ್​..​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕನ್ನಡಿಗ ರಾಹುಲ್​​​ ತಂಡಕ್ಕೆ ಹೀನಾಯ ಸೋಲು; ರಿಷಬ್​​ ಪಂತ್​ ಪಡೆಗೆ ಭರ್ಜರಿ ಗೆಲುವು

https://newsfirstlive.com/wp-content/uploads/2024/04/KL-Rahul_RCB.jpg

Load More