/newsfirstlive-kannada/media/post_attachments/wp-content/uploads/2025/03/SRH_DC.jpg)
ಸನ್ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಗೆಲುವು ಸಾಧಿಸಿದೆ. ಹೈದ್ರಾಬಾದ್ ಜೊತೆ ಡೆಲ್ಲಿ 7 ವಿಕೆಟ್ಗಳಿಂದ ಜಯಶಾಲಿಯಾಗಿದೆ. ಓಪನರ್ ಫಾಫ್ ಡುಪ್ಲೆಸಿಸ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಡೆಲ್ಲಿ ಟೀಮ್ ಸತತ 2ನೇ ಗೆಲುವನ್ನು ಪಡೆದುಕೊಂಡಿದೆ.
ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಹೈದ್ರಾಬಾದ್ ಕ್ಯಾಪ್ಟನ್ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದೊಡ್ಡ ಮೊತ್ತದ ರನ್ಗಳಿಕೆಯ ಯೋಜನೆಯಲ್ಲಿದ್ದ ಅವರು ಸಾಧಾರಣ ಮೊತ್ತಕ್ಕೆ ಆಲೌಟ್ ಆದರು. ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ದಾಳಿಗೆ ಇಶನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಟ್ರಾವಿಸ್ ಹೆಡ್ ಬೇಗ ಪೆವಿಲಿಯನ್ ಸೇರಿದರು. ಪ್ರಮುಖ ವಿಕೆಟ್ ಕಳೆದುಕೊಂಡರು ಅನಿಕೇತ್ ವರ್ಮಾ ಬಲಿಷ್ಠ ಬ್ಯಾಟಿಂಗ್ ಮಾಡಿ ಕೇವಲ 34 ಎಸೆತದಲ್ಲಿ 4 ಫೋರ್, 3 ಬಿಗ್ ಸಿಕ್ಸರ್ ಸಮೇತ ಅರ್ಧಶತಕ ಸಿಡಿಸಿದರು.
ಇದನ್ನೂ ಓದಿ:ಎದುರಾಳಿ ಪ್ಲಾನ್ ಉಲ್ಟಾ ಮಾಡೋ ನಂಬಿಕೆಯ ಆಟಗಾರ.. RCB ಆಪದ್ಬಾಂಧವ ಯಾರು?
ಇದೇ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅನಿಕೇತ್ ವರ್ಮಾ, 41 ಎಸೆತಗಳಲ್ಲಿ 5 ಫೋರ್, 6 ಸಿಕ್ಸರ್ನಿಂದ ಒಟ್ಟು 74 ರನ್ಗಳಿಸಿ ಆಡುವಾಗ ಕುಲ್ದೀಪ್ ಯಾದವ್ ಬ್ರೇಕ್ ಹಾಕಿದರು. ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸಿನ್ 2 ಫೋರ್, 2 ಸಿಕ್ಸರ್ನಿಂದ 19 ಬಾಲ್ನಲ್ಲಿ 32 ರನ್ಗಳನ್ನು ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದರು. ಹೈದ್ರಾಬಾದ್ ಬ್ಯಾಟಿಂಗ್ ಬಲದ ಮೇಲೆ ಆಕ್ರಮಣ ಮಾಡಿದ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ನೆರವಾದರು. ಇದರಿಂದ ಹೈದ್ರಾಬಾದ್ 18.4 ಓವರ್ಗಳಲ್ಲಿ ಕೇವಲ 163 ರನ್ಗಳ ಟಾರ್ಗೆಟ್ ನೀಡಿತ್ತು.
ಈ ಸುಲಭ ಟಾರ್ಗೆಟ್ ಹಿಂದೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬೇಗನೇ ವಿಜಯಮಾಲೆ ಧರಿಸಿಕೊಂಡಿತು. ಡೆಲ್ಲಿ ಪರವಾಗಿ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಫಾಫ್ ಡುಪ್ಲೆಸಿಸ್ ಅರ್ಧ ಶಕತ ಹಾಗೂ ಮೆಕ್‌ಗುರ್ಕ್ 38 ರನ್ಗಳಿಂದ ಉತ್ತಮ ಆರಂಭ ಒದಗಿಸಿದರು. ಈ ಜೋಡಿಯನ್ನು ಜೀಶನ್ ಅನ್ಸಾರಿ ಮುರಿದರು. ನಂತರ ಬ್ಯಾಟಿಂಗ್ಗೆ ಆಗಮಿಸಿದ ಪೊರೆಲ್, ತಂಡ ವಿಜಯ ಸಾಧಿಸುವವರೆಗೂ ಕ್ರೀಸ್ನಲ್ಲೇ ಇದ್ದರು. ಕನ್ನಡಿಗ ಕೆ.ಎಲ್ ರಾಹುಲ್ ಅವರು ಕೇವಲ 5 ಎಸೆತದಲ್ಲಿ 2 ಫೋರ್, 1 ಸಿಕ್ಸರ್ ನೆರವಿನಿಂದ 15 ರನ್ ಬಾರಿಸಿದರು. ಇವರ ನಂತರ ಬಂದ ಸ್ಟಬ್ಸ್ 21 ರನ್ಗಳಿಂದ ತಂಡವನ್ನು ದಡ ಸೇರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 16 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಜಯಶಾಲಿ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ