Advertisment

IPL 2025: ಪಂತ್​ಗೆ ಬಿಗ್​ ಶಾಕ್​ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್​​.. ಕನ್ನಡಿಗನಿಗೆ ಭರ್ಜರಿ ಗುಡ್​ನ್ಯೂಸ್​!

author-image
Ganesh Nachikethu
Updated On
ತಪ್ಪು ಮಾಡಿದ ರಿಷಬ್ ಪಂತ್; IPL ಪಂದ್ಯದಿಂದಲೇ ಬ್ಯಾನ್ ಆಗುವ ಆತಂಕ..!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ
  • ಸ್ಟಾರ್​ ಆಟಗಾರನನ್ನು ಕೈ ಬಿಡಲು ಡೆಲ್ಲಿ ಕ್ಯಾಪಿಟಲ್ಸ್​​ ತಂಡ ನಿರ್ಧಾರ
  • ರಿಷಭ್​ ಪಂತ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ನಾಯಕತ್ವದಿಂದ ಕೊಕ್​ ಸಾಧ್ಯತೆ!

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​​ ಲೀಗ್​​ 2025ರ ಮೆಗಾ ಆಕ್ಷನ್​​ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಐಪಿಎಲ್​​ ತಂಡಗಳು ತೀರ್ಮಾನಿಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ತನ್ನ ರೀಟೈನ್​ ಲಿಸ್ಟ್​​ ಫೈನಲ್​ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್‌ ಪಂತ್‌ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.

Advertisment

ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಪಂತ್​ಗೆ ಕೊಕ್​​ ಯಾಕೆ?

ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲೇ ತಂಡ ತೊರೆದಿದ್ದರು. ಇದರ ಬೆನ್ನಲ್ಲೇ ರಿಷಭ್‌ ಪಂತ್‌ ಕೂಡ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ತೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಷಭ್‌ ಪಂತ್‌ 2024ರ ಐಪಿಎಲ್​​​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್​ ಅವರನ್ನು ತಂಡದಿಂದ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

publive-image

ಕ್ಯಾಪ್ಟನ್ಸಿ ರೇಸ್​ನಲ್ಲಿ ಇಬ್ಬರ ಹೆಸರು..!

ಈ ಬಾರಿ ಐಪಿಎಲ್‌ ಮೆಗಾ ಹರಾಜು ರೋಚಕವಾಗಿ ಇರಲಿದೆ. ಬಹುತೇಕ ತಂಡಗಳು ಹೊಸ ನಾಯಕನಿಗಾಗಿ ಹುಡುಕಾಟದಲ್ಲಿ ತೊಡಗಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಪಂತ್​ ಜಾಗಕ್ಕೆ ಇಬ್ಬರು ಅನುಭವಿಗಳ ಹೆಸರು ಕೇಳಿ ಬಂದಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಅಥವಾ ಭಾರತ ಟಿ20 ಕ್ರಿಕೆಟ್​ ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಅವರು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಬಹುದು.

ಇದನ್ನೂ ಓದಿ:IPL 2025: ಆರ್​​ಸಿಬಿಯಿಂದ ಈ ಸ್ಟಾರ್​ ಆಟಗಾರನನ್ನು ರಿಲೀಸ್​ ಮಾಡಲು ಕಾರಣಗಳೇನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment