newsfirstkannada.com

ಕೇಂದ್ರದ ವಿರುದ್ಧ ತೀವ್ರಗೊಂಡ ಅನ್ನದಾತರ ಆಕ್ರೋಶ; ಹೋರಾಟದಲ್ಲಿ ಹಿರಿಯ ರೈತ ಮುಖಂಡ ಸಾವು

Share :

Published February 16, 2024 at 10:39pm

    ರೈತರ ಜೊತೆ ಮಾತುಕತೆಗೆ ಕೇಂದ್ರ ಸರ್ಕಾರದ ಪ್ರಯತ್ನ

    ಶಂಭು ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ

    ರೈತರ ‘ಗ್ರಾಮೀಣ ಭಾರತ್‌’ ಬಂದ್‌ಗೆ ನೀರಸ ಪ್ರತಿಕ್ರಿಯೆ

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಕಿಚ್ಚು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನ್ನದಾತರು ಮಾಡ್ತಿರೋ ದೆಹಲಿ ಚಲೋ ಮತ್ತೊಂದು ಹಂತಕ್ಕೆ ತಲುಪಿದೆ. ಆದ್ರೆ, ಇವತ್ತು ರೈತರು ಕರೆಕೊಟ್ಟಿದ್ದ ಹೋರಾಟಕ್ಕೆ ಬೆಂಬಲ ಸಿಗದಾಗಿದೆ. ಅಲ್ಲದೇ ಕಿಸಾನ್ ಕ್ರಾಂತಿ ಮಾಡುತ್ತಲೇ ಅನ್ನದಾತನೊಬ್ಬ ಅಸುನೀಗಿದ್ದಾನೆ.

ದೆಹಲಿಯಲ್ಲಿ ಜಮಾಯಿಸಿರೋ ರೈತರ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರರಾಜಧಾನಿಗೆ ದಿಗ್ಬಂಧನ ವಿಧಿಸಿರೋ ರೈತರು ಇವತ್ತು ತಮ್ಮ ಹೋರಾಟವನ್ನ ಮತ್ತೊಂದು ಹಂತಕ್ಕೆ ತಲುಪಿಸಲು ಸಜ್ಜಾಗಿದ್ದರು. ಈ ನಿಟ್ಟಿನಲ್ಲಿ ಇವತ್ತು ಗ್ರಾಮೀಣ ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಛಾ ಸೇರಿದಂತೆ ಹಲವು ರೈತ ಸಂಘಟನೆಗಳು ಕರೆ ನೀಡಿದ್ದವು. ಆದ್ರೆ, ಗ್ರಾಮೀಣ ಭಾರತ್‌ ಬಂದ್‌ಗೆ ಪಂಜಾಬ್, ಹರಿಯಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನುಳಿದಂತೆ ಬಹುತೇಕ ರಾಜ್ಯಗಳಲ್ಲಿ ಗ್ರಾಮೀಣ ಭಾರತ್ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ವಹಿವಾಟು, ಸಾರಿಗೆ ಸಂಚಾರಕ್ಕೆ ಭಾರತ್ ಬಂದ್‌ನ ಬಿಸಿ ತಟ್ಟದಾಗಿದೆ. ರೈತರು ಕರೆಕೊಟ್ಟಿದ್ದ ಭಾರತ್ ಬಂದ್ ಬಹುತೇಕ ವಿಫಲವಾಗಿದೆ.

ಗ್ರಾಮೀಣ ಭಾರತ್ ಬಂದ್‌ಗೆ ಕರೆನೀಡಿದ್ದ ರೈತರು ಪಂಜಾಬ್-ಹರಿಯಾಣ ಶಂಭು ಗಡಿಯಲ್ಲಿ ಇವತ್ತು ಹೋರಾಟ ತೀವ್ರಗೊಳಿಸಿದ್ರು.. ಈ ವೇಳೆ ರೈತರನ್ನ ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿವೆ.. ಸುಮಾರು 15 ನಿಮಿಷಗಳ ಕಾಲ ಟಿಯರ್ ಗ್ಯಾಸ್‌ನ ನಿರಂತರವಾಗಿ ಪ್ರಯೋಗಿಸಿ ರೈತರನ್ನ ಚದುರಿಸಲಾಗಿದೆ. ಇದೇ ವೇಳೆ ಸುಮಾರು 50ಕ್ಕು ಹೆಚ್ಚು ಹೋರಾಟ ನಿರತ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿ.. ಹಿರಿಯ ರೈತ ಮುಖಂಡ ನಿಧನ

ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದ ಮಧ್ಯೆ ರೈತರ ಮುಖದಲ್ಲಿ ದುಃಖದ ಕಾರ್ಮೋಡ ಕವಿದಿತ್ತು. ರೈತರ ಹೋರಾಟದಲ್ಲಿ ಭಾಗಿಯಾಗಿದ್ದ ಹಿರಿಯ ರೈತ ಮುಖಂಡ ಜ್ಞಾನ್ ಸಿಂಗ್ ಹೋರಾಟ ಮಾಡುತ್ತಲೇ ನಿಧರಾಗಿದ್ದಾರೆ. ನಿನ್ನೆ ಶಂಭು ಗಡಿಯಲ್ಲಿ ರೈತರ ಜೊತೆ ಚಳವಳಿಯಲ್ಲಿ ಜ್ಞಾನ್ ಸಿಂಗ್‌ಗೆ ಭಾಗಿಯಾಗಿದ್ರು. ಈ ವೇಳೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಜ್ಞಾನ್ ಸಿಂಗ್ ಮೃತಪಟ್ಟಿದ್ದಾರೆ. ಕಿಸಾನ್ ಚಳವಳಿಯ ಮೊದಲೆರಡು ದಿನಗಳಲ್ಲಿ ಪೊಲೀಸರೊಂದಿಗಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ರೈತರು, ಪೊಲೀಸರು ಗಾಯಗೊಂಡಿದ್ದಾರೆ ಅಂತ ಅಂಬಾಲಾ ಪೊಲೀಸ್ ಎಎಸ್‌ಪಿ ತಿಳಿಸಿದ್ದಾರೆ.

ಇದರಲ್ಲಿ 18 ಹರಿಯಾಣ ಪೊಲೀಸರು ಮತ್ತು 7 ಅರೆಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೇಂದ್ರದ ವಿರುದ್ಧ ಕೆರಳಿರೋ ರೈತರ ಜೊತೆ ಮಾತುಕತೆಗೆ ಮೋದಿ ಸರ್ಕಾರದ ಪ್ರಯತ್ನ ಮುಂದುವರಿದಿದೆ. ಆದ್ರೆ, ರೈತರು ಮಾತ್ರ ಯಾವುದಕ್ಕೂ ಜಗ್ಗದೇ.. ಬಗ್ಗದೇ ರಾಷ್ಟ್ರರಾಜಧಾನಿಯೊಳಗೆ ಮುನ್ನುಗ್ಗಲು ಸಜ್ಜಾಗಿದ್ದಾರೆ. ಒಟ್ಟಾರೆ, ದೆಹಲಿಯಲ್ಲಿ ಎದ್ದಿರೋ ಅನ್ನದಾತರ ಹೋರಾಟದ ಕಿಚ್ಚು ಯಾವಾಗ ತಣ್ಣಗಾಗುತ್ತೋ ಅವರಿಗೆ ಗೊತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದ ವಿರುದ್ಧ ತೀವ್ರಗೊಂಡ ಅನ್ನದಾತರ ಆಕ್ರೋಶ; ಹೋರಾಟದಲ್ಲಿ ಹಿರಿಯ ರೈತ ಮುಖಂಡ ಸಾವು

https://newsfirstlive.com/wp-content/uploads/2024/02/protest-13.jpg

Load More