Advertisment

ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?

author-image
Ganesh
Updated On
ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?
Advertisment
  • ಕೇಜ್ರಿವಾಲ್ 50 ದಿನಗಳ ಸೆರೆವಾಸಕ್ಕೆ ಮಧ್ಯಂತರ ವಿರಾಮ
  • ಬೆಳಗ್ಗೆ 11 ಗಂಟೆಗೆ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ
  • ಮಧ್ಯಾಹ್ನ ಒಂದು ಗಂಟೆಗೆ ಸುದ್ದಿಗೋಷ್ಟಿ ಕರೆದಿರುವ ಸಿಎಂ

ಲೋಕಸಭಾ ಚುನಾವಣೆ ಹೊತ್ತಲ್ಲೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಅವರ 50 ದಿನಗಳ ಸೆರೆವಾಸಕ್ಕೆ ಮಧ್ಯಂತರ ವಿರಾಮ ಸಿಕ್ಕಿದೆ. ಕೇಜ್ರಿವಾಲ್​​ಗೆ ನ್ಯಾಯಲಯ ಷರತ್ತುಬದ್ದ ಮಧ್ಯಂತರ ಜಾಮೀನು ನೀಡಿದೆ. ಜೈಲಿನಿಂದ ಹೊರ ಬಂದ ಕೇಜ್ರಿವಾಲ್​ಗೆ ಕುಟುಂಬಸ್ಥರು ಆರತಿ ಬೆಳಗವು ಮೂಲಕ ಸ್ವಾಗತಿಸಿದ್ದಾರೆ.

Advertisment

ಮಧ್ಯಂತರ ಜಾಮೀನಿನ ಮೇಲೆ ತಿಹಾರ್‌ ಜೈಲಿನಿಂದ ಹೊರ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ದೇವರ ಆಶೀರ್ವಾದ ನನ್ನ ಜೊತೆಗಿದೆ. ಸರ್ವಾಧಿಕಾರದ ವಿರುದ್ಧ ನಾವು ಹೋರಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇವತ್ತು ಕೇಜ್ರಿವಾಲ್​​ ಅವರು ಬೆಳಗ್ಗೆ 11 ಗಂಟೆಗೆ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment