newsfirstkannada.com

×

ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?

Share :

Published May 11, 2024 at 8:44am

    ಕೇಜ್ರಿವಾಲ್ 50 ದಿನಗಳ ಸೆರೆವಾಸಕ್ಕೆ ಮಧ್ಯಂತರ ವಿರಾಮ

    ಬೆಳಗ್ಗೆ 11 ಗಂಟೆಗೆ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ

    ಮಧ್ಯಾಹ್ನ ಒಂದು ಗಂಟೆಗೆ ಸುದ್ದಿಗೋಷ್ಟಿ ಕರೆದಿರುವ ಸಿಎಂ

ಲೋಕಸಭಾ ಚುನಾವಣೆ ಹೊತ್ತಲ್ಲೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಅವರ 50 ದಿನಗಳ ಸೆರೆವಾಸಕ್ಕೆ ಮಧ್ಯಂತರ ವಿರಾಮ ಸಿಕ್ಕಿದೆ. ಕೇಜ್ರಿವಾಲ್​​ಗೆ ನ್ಯಾಯಲಯ ಷರತ್ತುಬದ್ದ ಮಧ್ಯಂತರ ಜಾಮೀನು ನೀಡಿದೆ. ಜೈಲಿನಿಂದ ಹೊರ ಬಂದ ಕೇಜ್ರಿವಾಲ್​ಗೆ ಕುಟುಂಬಸ್ಥರು ಆರತಿ ಬೆಳಗವು ಮೂಲಕ ಸ್ವಾಗತಿಸಿದ್ದಾರೆ.

ಮಧ್ಯಂತರ ಜಾಮೀನಿನ ಮೇಲೆ ತಿಹಾರ್‌ ಜೈಲಿನಿಂದ ಹೊರ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ದೇವರ ಆಶೀರ್ವಾದ ನನ್ನ ಜೊತೆಗಿದೆ. ಸರ್ವಾಧಿಕಾರದ ವಿರುದ್ಧ ನಾವು ಹೋರಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇವತ್ತು ಕೇಜ್ರಿವಾಲ್​​ ಅವರು ಬೆಳಗ್ಗೆ 11 ಗಂಟೆಗೆ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?

https://newsfirstlive.com/wp-content/uploads/2024/05/KEJRIWALL.jpg

Load More