/newsfirstlive-kannada/media/post_attachments/wp-content/uploads/2025/02/DELHI-CM-SELECTION.jpg)
ದೆಹಲಿಯ ನೂತನ ಮುಖ್ಯಮಂತ್ರಿ ಪ್ರಮಾಣ ವಿಚಾರ ಕಾರ್ಯಕ್ರಮ ಬಹುತೇಕ ಫೆಬ್ರವರಿ 18 ರಂದು ನಡೆಯುವ ಸಾಧ್ಯತೆ ಇದೆಯೆಂದು ಬಿಜೆಪಿ ಮೂಲಗಳಿಂದ ಮಾಹಿತಿ ಬಂದಿದೆ. 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ. ಮೂಲಗಳ ರವಿವಾರ ಹೇಳಿದ ಪ್ರಕಾರ ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿ ತನ್ನ ಶಾಸಕರೊಂದಿಗೆ ಸಭೆ ನಡೆಸಲಿದೆ. ಅದಾದ ನಂತರ ಪ್ರಮಾಣ ವಚನ ಸ್ವೀಕಾರದ ದಿನಾಂಕವನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಆದ್ರೆ ಇಂದು ದೆಹಲಿ ನೂತನ ಸಿಎಂ ಆಗಿ ಯಾರು ಪಟ್ಟಾಭಿಷಕಕ್ಕೆ ಸಜ್ಜಾಗಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಲಾಗಿದೆ.
ಈಗಾಗಲೇ ದೆಹಲಿಯಲ್ಲಿ ಉನ್ನತಮಟ್ಟದ ಸಭೆಗಳು ನಡೆಯಲು ಶುರುವಾಗಿದ್ದು ಕಳೆದ ಎರಡು ದಿನಗಳಿಂದ ಚರ್ಚೆಗಳು ಜೋರಾಗಿವೆ. ಸಿಎಂ ಆಯ್ಕೆಯ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆಯು ಜಾರಿಯ್ಲಿದ್ದು ರೇಸ್ನಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಪರ್ವೇಶ್ ವರ್ಮಾ ಸೇರಿ ಆಶೀಶ್ ಸೂದ್, ರೇಖಾ ಗುಪ್ತಾ ಹೀಗೆ ಹಲವರ ಹೆಸರು ಕೇಳಿಬರುತ್ತಿದ್ದು. ಕೊನೆಗೆ ಯಾರು ಆಯ್ಕೆ ಆಗಲಿದ್ದಾರೆ ಅನ್ನೋದು ಬಿಜೆಪಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ನರೇಂದ್ರ ಮೋದಿಯವರ ಯುಎಸ್ ಪ್ರವಾಸದ ಬಳಿಕ ಈ ಬಗ್ಗೆ ನಿರ್ಧಾರ ಮಾಡಲು ಪಕ್ಷ ನಿರ್ಧರಿಸಿತ್ತು. ಈಗಾಗಲೇ ಮೋದಿಯವರು ಯುಎಸ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿದ್ದಾರೆ. ದೆಹಲಿಯ ಸಿಎಂ ಆಯ್ಕೆಯ ಕಸರತ್ತಿಗೆ ಈಗ ಮತ್ತಷ್ಟು ವೇಗ ಸಿಗಲಿದೆ.
ಪರ್ವೇಶ್ ವರ್ಮಾ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದು, ಆಶೀಶ್ ಸೂದ್ ದೆಹಲಿಯ ಬಿಜೆಪಿ ಜನರಲ್ ಸೆಕ್ರೆಟರಿ ಆಗಿದ್ದು ಹಾಗೂ ರೇಖಾ ಗುಪ್ತಾ ಪ್ರಮುಖ ಮಹಿಳಾ ಮುಖವಾಗಿದ್ದು, ವಿಜಯೇಂದ್ರ ಗುಪ್ತಾ ಬಿಜೆಪಿ ಹಳೆಯ ನಾಯಕರಾಗಿದ್ದು ಹೀಗೆ ಹಲವು ಮಾನದಂಡಗಳ ಮೇಲೆ ಮುಂದಿನ ಸಿಎಂ ಇವರೇ ಎಂದು ಊಹೆ ಮಾಡಲಾಗುತ್ತಿದೆ. ಆದ್ರೆ ಕೆಲವು ಮೂಲಗಳ ಪ್ರಕಾರ ದೆಹಲಿ ಸಿಎಂ ಸ್ಥಾನಕ್ಕೆ ಜಾಟ್ ಇಲ್ಲವೇ ದಲಿತ ಸಮುದಾಯದ ನಾಯಕರನ್ನು ತಂದು ಕೂರಿಸುವ ಪ್ಲ್ಯಾನ್ನಲ್ಲಿ ಬಿಜೆಪಿ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:262 ಕೋಟಿ ರೂ. ಲಾಭ.. 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL; ಇದು ಹೇಗಾಯ್ತು?
ಪಕ್ಷದ ನಾಯಕರು ಹೇಳುವ ಪ್ರಕಾರ ಈ ಬಾರಿ ದೆಹಲಿ ಸಿಎಂ ಸ್ಥಾನವನ್ನು ಮತ್ತೆ ಮಹಿಳಾ ನಾಯಕಿ ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಹೊಸ ಮುಖ ಶಿಖಾ ರಾಯ್ ಅವರಿಗೆ ಸಿಎಂ ಪಟ್ಟ ಗಿಟ್ಟೊದು ಪಕ್ಕಾ ಎಂದು ಕೂಡ ಹೇಳಲಾಗುತ್ತಿದೆ. ಆಪ್ನ ಪ್ರಭಾವಿ ನಾಯಕ ಸೌರಭ್ ಭಾರದ್ವಾಜ್ ಅವರನ್ನು ಗ್ರೇಟರ್ ಕೈಲಾಶ್ನಲ್ಲಿ ಶಿಖಾ ಸೋಲಿಸಿದ್ದರು ಹೀಗಾಗಿ ಅವರಿಗೆ ಪಟ್ಟಕಟ್ಟುವ ಚಿಂತನೆಯಲ್ಲಿದೆ ಬಿಜೆಪಿ ಎಂದು ಕೂಡ ಹೇಳಲಾಗುತ್ತಿದೆ.
ಇದನ್ನೂ ಓದಿ:ಜಯಲಲಿತಾ ಸೀರೆ, ಕಿರೀಟ, ಚಿನ್ನಾಭರಣ, ವಜ್ರ ತಮಿಳುನಾಡಿಗೆ ವಾಪಸ್; ಏನೇನಿದೆ? ಮೌಲ್ಯ ಎಷ್ಟು ಕೋಟಿ?
ಒಟ್ಟಾರೆ 15 ಜನರನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು ಇವರಲ್ಲಿ ಒಬ್ಬರನ್ನು ಸಿಎಂ ಹಾಗೂ ಒಬ್ಬರು ಡೆಪ್ಯೂಟಿ ಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕ ಜೆಪಿ ನಡ್ಡಾ ಜೊತೆ ಇತರ ಬಿಜೆಪಿ ನಾಯಕರು ಸೇರಿ ಸಭೆ ನಡೆಸಿ ಅಂತಿಮವಾಗಿ ಸಿಎಂ ಹೆಸರನ್ನು ಇಂದು ಆಯ್ಕೆ ಮಾಡಲಿದ್ದು. ಅಲ್ಲಿಯವರೆಗೂ ಬಿಜೆಪಿ ಸಿಎಂ ಆಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ