newsfirstkannada.com

ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೊಸ ಬಾಂಬ್‌; ಏನಂದ್ರು?

Share :

Published February 4, 2024 at 5:07pm

Update February 4, 2024 at 5:09pm

  ದೆಹಲಿ AAP ಶಾಸಕರಿಗೆ ಕೋಟಿ, ಕೋಟಿ ರೂಪಾಯಿ ಆಮಿಷ

  ಬಿಜೆಪಿ ನಾಯಕರು ಎಂತಹ ಸಂಚು ಬೇಕಾದರೂ ಮಾಡುತ್ತಾರೆ

  ಬಿಜೆಪಿ ವಿರುದ್ಧ ಅತಿ ದೊಡ್ಡ ಆರೋಪ ಮಾಡಿದ ಸಿಎಂ ಕೇಜ್ರಿವಾಲ್

ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ಬಿಜೆಪಿ ವಿರುದ್ಧ ಅತಿ ದೊಡ್ಡ ಆರೋಪ ಮಾಡಿದ್ದಾರೆ. ಬಿಜೆಪಿ ಪಕ್ಷ ಸೇರಿಕೊಳ್ಳುವಂತೆ ನನಗೂ ಒತ್ತಡ ಹಾಕಲಾಗಿತ್ತು. ಆದರೆ ನಾನು ಅವರ ಬೆದರಿಕೆಗಳಿಗೆಲ್ಲಾ ಬಗ್ಗಲಿಲ್ಲ ಎಂದಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್ ಅವರು ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. AAP ಶಾಸಕರಿಗೆ ಕೋಟಿ, ಕೋಟಿ ರೂಪಾಯಿ ಆಮಿಷ ನೀಡೋ ಮೂಲಕ ಆಪರೇಷನ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಾದ ಬಳಿಕ ತನಗೂ ಬಿಜೆಪಿ ಪಕ್ಷ ಸೇರಿಕೊಳ್ಳುವ ಒತ್ತಡ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: PHOTO: ಹಣೆಯಲ್ಲಿ ಕುಂಕುಮ.. ಬೈದ್ಯನಾಥ ಶಿವನಿಗೆ ರಾಹುಲ್‌ ಗಾಂಧಿ ರುದ್ರಾಭಿಷೇಕ; ಏನಿದರ ವಿಶೇಷ?

ಮುಂದುವರಿದು ಮಾತನಾಡಿರುವ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ನಾಯಕರು ಎಂತಹ ಸಂಚು ಬೇಕಾದರೂ ಮಾಡುತ್ತಾರೆ. ಬಿಜೆಪಿಗೆ ಸೇರಿಕೊಂಡರೆ ನಮ್ಮ ಪಾಡಿಗೆ ನಾವು ಇರಲು ಅವಕಾಶ ಮಾಡಿಕೊಡುತ್ತಾರೆ. ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಎಂದಿಗೂ ಬಿಜೆಪಿ ಪಕ್ಷವನ್ನು ಸೇರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದಾರೆ. 2024ರ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ಶಾಲೆ ಮತ್ತು ಆಸ್ಪತ್ರೆಗಳಿಗೆ ಮೋದಿ ಸರ್ಕಾರ ಶೇಕಡಾ 4 ರಷ್ಟು ಹಣ ಖರ್ಚು ಮಾಡಿದೆ. ಆದರೆ ದೆಹಲಿ ಸರ್ಕಾರ ಶಾಲೆ, ಆಸ್ಪತ್ರೆಗೆ ಬಜೆಟ್‌ನಲ್ಲಿ ಶೇಕಡಾ 40ರಷ್ಟು ಹಣವನ್ನು ಪ್ರತಿವ್ಷ ಖರ್ಚು ಮಾಡುತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೊಸ ಬಾಂಬ್‌; ಏನಂದ್ರು?

https://newsfirstlive.com/wp-content/uploads/2023/10/KEJRIWAL.jpg

Load More