newsfirstkannada.com

ಸಲೂನ್​ಗೆ​ ನುಗ್ಗಿ ಇಬ್ಬರು ದುಷ್ಕರ್ಮಿಗಳಿಂದ ಫೈರಿಂಗ್​.. ಗನ್ ಪಾಯಿಂಟ್​​ನಲ್ಲಿಟ್ಟು 2 ಕೊಲೆ ಮಾಡಿ ಎಸ್ಕೇಪ್​

Share :

Published February 10, 2024 at 7:30am

    ವೈಯಕ್ತಿಕ ಕಾರಣದಿಂದ ಕೊಲೆ ಮಾಡಿರುವ ಅನುಮಾನ

    ಗನ್ ಪಾಯಿಂಟ್​ನಲ್ಲಿಟ್ಟು ಫೈರಿಂಗ್ ಮಾಡಿ ಎಸ್ಕೇಪ್

    ಕೊಲೆಯಾದ ಓರ್ವನ ಮೇಲೆ ಎರಡು ಕ್ರಿಮಿನಲ್ ಕೇಸ್​

ನವದೆಹಲಿ: ಸಲೂನ್​ವೊಂದಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಇಬ್ಬರಿಗೆ ಮನಬಂದಂತೆ ಶೂಟ್ ಮಾಡಿ ಹತ್ಯೆಗೈದು ಎಸ್ಕೇಪ್ ಆಗಿರುವ ಘಟನೆ ದೆಹಲಿಯ ನಜಾಫ್‌ಗಢ ನಗರದಲ್ಲಿ ನಡೆದಿದೆ.

ಸಲೂನ್​ನಲ್ಲಿ ಹತ್ಯೆಯಾದವರನ್ನು ಸೋನು ಮತ್ತು ಆಶಿಸ್ ಎಂದು ಗುರುತಿಸಲಾಗಿದೆ. ಕೊಲೆಯಾದ ಇಬ್ಬರು ನಜಾಫ್‌ಗಢದ ನಾಗ್ಲಿ ಸಕ್ರಾವತಿ ಪ್ರದೇಶದಲ್ಲಿ ವಾಸವಾಗಿದ್ದರು. ದುಷ್ಕರ್ಮಿಗಳು ಸೋನು ತಲೆಗೆ ಒಮ್ಮೆ ಫೈರಿಂಗ್ ಮಾಡಿದ್ರೆ, ಆಶಿಸ್​ ತಲೆಗೆ ಮತ್ತು ಎದೆಗೆ 3-4 ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ಒಳ ಹೋದ ಪರಿಚಿತರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಲೂನ್ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಈ ಗುಂಡಿನ ದಾಳಿಗೆ ವೈಯಕ್ತಿಕ ಕಾರಣವೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತಪಟ್ಟಿರುವ ಆಶಿಸ್ ಮೇಲೆ ಈ ಮೊದಲು ಎರಡು ಕ್ರಿಮಿನಲ್ ಕೇಸ್​ ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಗನ್​ಪಾಯಿಂಟ್​ನಲ್ಲಿ ಇಟ್ಟು ಕೊಲೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ಭಯ ಹುಟ್ಟಿಸುವಂತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲೂನ್​ಗೆ​ ನುಗ್ಗಿ ಇಬ್ಬರು ದುಷ್ಕರ್ಮಿಗಳಿಂದ ಫೈರಿಂಗ್​.. ಗನ್ ಪಾಯಿಂಟ್​​ನಲ್ಲಿಟ್ಟು 2 ಕೊಲೆ ಮಾಡಿ ಎಸ್ಕೇಪ್​

https://newsfirstlive.com/wp-content/uploads/2024/02/DELHI_FIRING.jpg

Load More