/newsfirstlive-kannada/media/post_attachments/wp-content/uploads/2025/02/RAHUL_MODI.jpg)
ದೆಹಲಿ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಇವತ್ತೇ ಪ್ರಕಟವಾಗಲಿದೆ. ದೆಹಲಿ ಮತದಾರರು ಆಮ್ ಆದ್ಮಿ ಪಕ್ಷವನ್ನು ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆಯಲ್ಲಿ ಕೂರಿಸುತ್ತಾರಾ ಅಥವಾ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳುತ್ತಾ? ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ದಿಲ್ಲಿ ಗೆದ್ದವನು ದೇಶದ ದಿಲ್​ ಗೆದ್ದಂತೆ. ಆಮ್​​ ಆದ್ಮಿ, ಬಿಜೆಪಿ ನಡುವೆ ಟಗ್​ ಆಫ್ ವಾರ್​ ಏರ್ಪಟ್ಟಿದ್ದು, ಕಾಂಗ್ರೆಸ್​​ ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೋರಾಟಕ್ಕಿಳಿದಿದೆ. ದೆಹಲಿ ವಿಧಾನಸಭಾ ದಂಗಲ್‌ನ ಕ್ಲೈಮ್ಯಾಕ್ಸ್​​ ಹಂತಕ್ಕೆ ಬಂದು ನಿಂತಿದೆ. ಇಂದ್ರಪ್ರಸ್ಥದ ಗದ್ದುಗೆ ಯಾರಿಗೆ ಅನ್ನೋ ಜನಾದೇಶ ಇಂದೇ ಪ್ರಕಟ ಆಗಲಿದೆ. ಮತಗಟ್ಟೆ ಸಮೀಕ್ಷೆಗಳು ಕೇಜ್ರಿ ಕಟ್ಟಿದ್ದ ವಾಲ್​​​​ ನೆಲಸಮವಾಗಲಿದ್ದು, ಹೂವು ಅರಳುವ ಸಮಯ ಅಂತ ಭವಿಷ್ಯ ನುಡಿದಿವೆ.
/newsfirstlive-kannada/media/post_attachments/wp-content/uploads/2024/09/ARAVIND-KEJRIWLL.jpg)
ಬೆಳಗ್ಗೆ 8 ಗಂಟೆಯಿಂದಲೇ ಕೌಂಟಿಂಗ್ ಆರಂಭ​​!
ಡೆಲ್ಲಿ ದಂಗಲ್.. ದೇಶದ ರಾಜಧಾನಿ ಈಗ ಹೊಸ ಚರಿತ್ರೆ ಬರೆಯಲು ಹೊರಟಿದೆ. ಬುಧವಾರ ಮತದಾರ ಬರೆದ ಹಣೆಬರಹ ಇವತ್ತೇ ಪ್ರಕಟವಾಗಲಿದೆ. ದೆಹಲಿ ದರ್ಬಾರ್​​​ನ ಚಿತ್ರಣ, ಇವಿಎಂ ಮತ ಯಂತ್ರದಲ್ಲಿ ಭದ್ರವಾಗಿದ್ದು, ಕೆಲವೇ ಗಂಟೆಗಳಲ್ಲಿ ಜನತಾ ತೀರ್ಪು ಹೊರ ಬೀಳಲಿದೆ.
ದಿಲ್ಲಿ ದಿಲ್​ವಾಲ ಯಾರು?
- ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಆರಂಭ
- 11 ಜಿಲ್ಲೆಗಳ 19 ಕೇಂದ್ರಗಳಲ್ಲಿ ಮತಗಳ ಎಣಿಕೆ
- ಡೆಲ್ಲಿಯ 70 ಕ್ಷೇತ್ರಗಳಲ್ಲಿ 699 ಅಭ್ಯರ್ಥಿಗಳ ಸ್ಪರ್ಧೆ
- 19 ಎಣಿಕಾ ಕೇಂದ್ರದಲ್ಲಿ 5,000 ಸಿಬ್ಬಂದಿ ಕಾರ್ಯ
- ಕ್ಷೇತ್ರದಲ್ಲಿ 5 ವಿವಿಪ್ಯಾಟ್ ತಾಳೆ ಹಾಕುವ ನಿರೀಕ್ಷೆ
- 10 ಸಾವಿರ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ
- ಕೇಂದ್ರದ ಎರಡು ಪ್ಯಾರಾ ಮಿಲಿಟರಿ ನಿಯೋಜನೆ
ಎಎಪಿ ಸಂಚಾಲಕ ಅರವಿಂದ್​ ಕೇಜ್ರಿವಾಲ್​, ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಒಬ್ಬರು ಮಾಜಿ ಸಿಎಂ ಕಣದಲ್ಲಿದ್ರೆ, ಎದುರಾಳಿಯಾಗಿ ಇಬ್ಬರು ಮಾಜಿ ಸಿಎಂ ಪುತ್ರರು ಅಖಾಡದಲ್ಲಿದ್ದಾರೆ. ಕಲ್ಕಾಜಿ ಕ್ಷೇತ್ರದಿಂದ ದೆಹಲಿಯ ಹಾಲಿ ಸಿಎಂ ಅತಿಶಿ ಕಣದಲ್ಲಿದ್ದಾರೆ. ಜಂಗ್​ಪುರ ಕ್ಷೇತ್ರದಿಂದ ಮಾಜಿ ಡಿಸಿಎಂ ಸಿಸೋಡಿಯಾ ಜಂಗ್​​​ನಲ್ಲಿದ್ದಾರೆ.
ಇದನ್ನೂ ಓದಿ: ಕಮಲದ ಬೀಜಗಳು ಜಾಗತಿಕ ಸೂಪರ್ ಫುಡ್ ಆಗಿ ಬೆಳೆದಿದ್ದು ಹೇಗೆ?
/newsfirstlive-kannada/media/post_attachments/wp-content/uploads/2024/06/Rahul-Gandhi-Modi.jpg)
ಡೆಲ್ಲಿಯಲ್ಲಿ ಆಪ್ ಪ್ರಾಬಲ್ಯ.. ಏನಾಗಲಿದೆ ಕೇಜ್ರಿ ಆಟ?
ದೆಹಲಿ ರಾಜಕೀಯ ಭೂಪಟದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರ ಹಾಕಿರುವ ಆಮ್ ಆದ್ಮಿ ಪಾರ್ಟಿ 2015ರಿಂದಲೂ ಪ್ರಾಬಲ್ಯ ಸಾಧಿಸಿದೆ. 2015ರಲ್ಲಿ ಆಪ್ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೇ ಪಕ್ಷ 2020ರ ಚುನಾವಣೆಯಲ್ಲೂ ಆಮ್​ಆದ್ಮಿಯ ಆಶೀರ್ವಾದ ಪಡೆದ ಎಎಪಿ, 62 ಕ್ಷೇತ್ರಗಳನ್ನ ಗೆದ್ದು ಇತಿಹಾಸ ಬರೆದಿತ್ತು. ಒಂದ್ವೇಳೆ ಈ ಬಾರಿ ಬಿಜೆಪಿ ಚುನಾವಣೆ ಗೆದ್ದಿದ್ದೇ ಆದಲ್ಲಿ 26 ವರ್ಷಗಳ ನಂತರ ದೆಹಲಿಯಲ್ಲಿ ಕಮಲ ಅರಳಲಿದೆ.
ಈ ಹಿಂದೆ, ಅಂದರೆ ಆಪ್​ ಅಧಿಕಾರಕ್ಕೂ ಬರುವ ಮೊದಲು ದೆಹಲಿಯನ್ನು ಸುಮಾರು 15 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಈ ಚುನಾವಣೆ ಮೂಲಕ ಕಮ್‌ಬ್ಯಾಕ್​ಗೆ ಹವಣಿಸ್ತಿದೆ. ಆದ್ರೆ, ಕಳೆದ 2 ಚುನಾವಣೆಗಳನ್ನೂ ಪಕ್ಷ ಕನಿಷ್ಠ 1 ಸ್ಥಾನವನ್ನೂ ಪಡೆಯಲು ವಿಫಲವಾಗಿದೆ. ಮೋದಿ ಯುಗದಲ್ಲಿ ಡೆಲ್ಲಿ ಆಳಿದ ಕೀರ್ತಿ ಕೇಜ್ರಿವಾಲ್​​​ದ್ದು. ನಮೋ ಅಲೆಯಲ್ಲೂ ಗೆದ್ದು ಬೀಗಿದ್ದ ಕೇಜ್ರಿವಾಲ್​​​ಗೆ ಈ ಬಾರಿ ಆಮ್​​ಆದ್ಮಿ ಕೈಹಿಡಿತಾನ ಕಾದುನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us