/newsfirstlive-kannada/media/post_attachments/wp-content/uploads/2025/01/DELHI-ELECTION.jpg)
ಬಹುನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕವನ್ನು ಘೋಷಿಸಿದ್ದು. ಫೆಬ್ರವರಿ 5 ರಂದು 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದ್ದು. ಫೆಬ್ರವರಿ 8 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಕಳೆದ ಬಾರಿ ನಡೆದ ಅಂದ್ರೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸುಮಾರು 62 ಕ್ಷೇತ್ರಗಳನ್ನು ಗೆದ್ದು ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಬಿಜೆಪಿ ಉಳಿದ 8 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದರೆ. ಕಾಂಗ್ರೆಸ್ ಖಾತೆ ತೆಗೆಯುವಲ್ಲಿಯೂ ಕೂಡ ವಿಫಲವಾಗಿತ್ತು.
ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಕೇಸ್; ಆಸ್ಪತ್ರೆಗೆ ಅಲ್ಲು ಅರ್ಜುನ್ ಭೇಟಿ​.. ಬಾಲಕನ ತಂದೆ ಹೇಳಿದ್ದು ಏನು?
ಈ ಬಾರಿ ಲಿಕ್ಕರ್ ಹಗರಣ ಸೇರಿ ಹಲವು ಆರೋಪಗಳು ಆಮ್​ ಆದ್ಮಿ ಪಕ್ಷದ ಮೇಲೆ ಬಂದಿವೆ. ಸಿಎಂ, ಡಿಸಿಎಂ ಮದ್ಯನೀತಿ ಹಗರಣದಲ್ಲಿ ಜೈಲು ಕೂಡ ಸೇರಿ ಆಚೆ ಬಂದ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಅದರ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಜ್ಜಾಗಿವೆ. ಆದರೆ ಆಮ್ ಆದ್ಮಿ ಪಕ್ಷ ಸತತ ಒಂದು ದಶಕದಿಂದ ದೆಹಲಿಯಲ್ಲಿ ದರ್ಬಾರ್ ನಡೆಸುತ್ತಿದೆ. ಕಳೆದ ಬಾರಿಯೂ ಕೂಡ ಆಡಳಿತ ವಿರೋಧಿ ಅಲೆ ಇದೆ ಎಂಬ ಸುದ್ದಿಯೂ ಜೋರಾಗಿ ಹರಡಿತ್ತು. ಇದರಾಚೆಯೂ ಕೂಡ ಆಮ್​ ಆದ್ಮಿ ಪಕ್ಷ ದೊಡ್ಡ ಮಟ್ಟದ ಗೆಲುವಿನೊಂದಿಗೆ ಸರ್ಕಾರ ರಚನೆ ಮಾಡಿತ್ತು. ಈ ಬಾರಿಯ ಹಗರಣಗಳ ಆರೋಪಗಳು ಆಮ್​ ಆದ್ಮಿಗೆ ಮಗ್ಗಲು ಮುಳ್ಳಾಗಿ ಕಾಡಲಿದೆಯಾ ಅಥವಾ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ಭರ್ಜರಿ ಬಹುಮತ ಪಡೆಯಲಿದೆಯಾ ಅನ್ನೋದು ಫೆಬ್ರವರಿ 8 ರಂದು ತಿಳಿದು ಬರಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us