/newsfirstlive-kannada/media/post_attachments/wp-content/uploads/2025/02/AAP_BJP_Congress.jpg)
ದೆಹಲಿ: ಇಂದು ದೆಹಲಿ ವಿಧಾನಸಭಾ ದಂಗಲ್‌ಗೆ ಮತದಾನ ಮುಗಿದಿದೆ. ಆಮ್​ ಆದ್ಮಿ ಪಾರ್ಟಿ, ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ತ್ರಿಕೋನ ಫೈಟ್ ಇದ್ದು, ಗದ್ದುಗೆ ಯಾರಿಗೆ ಅನ್ನೋ ಭವಿಷ್ಯ ಈಗ ಹೊರಬಿದ್ದಿದೆ. ಮೂರನೇ ಬಾರಿಗೆ ದೆಹಲಿಯಲ್ಲಿ ಗೆದ್ದು ಗದ್ದುಗೆ ಏರೋ ಕನಸು ಅರವಿಂದ್ ಕೇಜ್ರಿವಾಲ್ ಅವರದ್ದು. ಆದ್ರೆ, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಡೆಲ್ಲಿ ಪಟ್ಟ ಎಂಬ ಭವಿಷ್ಯ ನುಡಿದಿವೆ.
ಅಧಿಕಾರದಲ್ಲಿರೋ ಆಪ್‌ಗೆ ಪ್ರತಿಷ್ಠೆಯ ಕದನ ಇದು. ಕಾಂಗ್ರೆಸ್‌ಗೆ ಈ ಹಿಂದೆ ಪಟ್ಟಗಿಟ್ಟಿಸಿದಂತೆ ಮತ್ತೆ ಪುಟಿದೇಳುವ ತವಕ. ಬಿಜೆಪಿಗೆ ರಾಷ್ಟ್ರರಾಜಧಾನಿಯನ್ನ ಕಬ್ಜ ಮಾಡುವ ಕಾತರ. ಆದ್ರೆ, ಯಾರಿಗೆ ಹಸ್ತಿನಾಪುರದ ಪಟ್ಟ ಅನ್ನೋದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಬಿಜೆಪಿ ತೆಕ್ಕೆಗೆ ‘ಇಂದ್ರಪ್ರಸ್ಥ’ ಅಂತ ಸಮೀಕ್ಷೆ ಭವಿಷ್ಯ!
ಇವಿಎಂ ಮತಪೆಟ್ಟಿಗೆಯಲ್ಲಿ ಮತದಾರ ಬರೆದಿರೋ ಭವಿಷ್ಯ ಅಡಕವಾಗಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ 699 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಾರಿಗೆ ಗೆಲುವು? ಯಾರಿಗೆ ಸೋಲು ಅನ್ನೋದನ್ನ ಇವತ್ತು ಮತದಾರ ನಿರ್ಧರಿಸಿದ್ದಾರೆ. ಇದ್ರ ಮಧ್ಯೆ ಚುನಾವಣೋತ್ತರ ಸಮೀಕ್ಷೆಗಳು ಕೇಸರಿ ತೆಕ್ಕೆಗೆ ದೆಹಲಿ ಗದ್ದುಗೆ ಗ್ಯಾರಂಟಿ ಎಂಬ ಭವಿಷ್ಯವಾಣಿಯನ್ನ ನುಡಿದಿವೆ.
/newsfirstlive-kannada/media/post_attachments/wp-content/uploads/2025/02/Delhi-Exit-Poll.jpg)
ಮ್ಯಾಟ್ರಿಜ್ ಸಂಸ್ಥೆ
ಮ್ಯಾಟ್ರಿಜ್ ಸಂಸ್ಥೆ ನಡೆಸಿರೋ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಧಿಕಾರದಲ್ಲಿರೋ ಆಮ್ ಆದ್ಮಿ ಪಾರ್ಟಿ 32 ರಿಂದ 37 ಸ್ಥಾನಗಳನ್ನ ಗೆಲ್ಲಬಹುದು ಎಂಬ ಭವಿಷ್ಯ ನುಡಿದಿದೆ. BJP 35 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಅಂತ ಈ ಸರ್ವೆ ಹೇಳಿದೆ. ಇನ್ನೂ ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಅಂತ ಮ್ಯಾಟ್ರಿಜ್ ಹೇಳಿದೆ. ಇನ್ನೂ ಇತರೆ ಯಾವುದೇ ಸ್ಥಾನದಲ್ಲಿ ಗೆಲ್ಲೋದಿಲ್ಲ ಅಂತ ಸರ್ವೆ ಹೇಳಿದೆ.
ಪೀಪಲ್ಸ್ ಪಲ್ಸ್
ಇನ್ನು, ಪೀಪಲ್ಸ್ ಪಲ್ಸ್ ಸರ್ವೆ ಪ್ರಕಾರ AAP 10 ರಿಂದ 19 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆಯಂತೆ. BJP 51 ರಿಂದ 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಜಯ ಸಾಧಿಸುತ್ತಂತೆ. ಇನ್ನೂ ಕಾಂಗ್ರೆಸ್ ಯಾವುದೇ ಕ್ಷೇತ್ರಗಳಲ್ಲಿ ಜಯ ಗಳಿಸಲ್ಲ. ಪಕ್ಷೇತರ ಅಭ್ಯರ್ಥಿ ಗೆಲ್ಲಲ್ಲ ಅಂತ ಈ ಸರ್ವೆ ಹೇಳಿದೆ.
ಚಾಣಕ್ಯ
ಚಾಣಕ್ಯ ಸ್ಟ್ಯಾಟ್ ಸಮೀಕ್ಷೆ ಪ್ರಕಾರ, ಆಪ್ 25 ರಿಂದ 28 ಕ್ಷೇತ್ರಗಳನ್ನ ಮಾತ್ರ ಗೆಲ್ಲಲಿದೆ ಅಂತ ತಿಳಿಸಿದೆ. ಇನ್ನೂ ಬಿಜೆಪಿ 39 ರಿಂದ 40 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಲಿದೆ ಅಂತ ಹೇಳಿದೆ. ಇನ್ನೂ ಕಾಂಗ್ರೆಸ್ ಕೇವಲ 2 ರಿಂದ 3 ಕ್ಷೇತ್ರ, ಇತರೆ ಯಾವುದೇ ಸ್ಥಾನ ಗೆಲ್ಲೋದಿಲ್ಲ ಅಂತ ಹೇಳಿದೆ.
ಪಿ-ಮಾರ್ಕ್
ಪಿ-ಮಾರ್ಕ್ ಸರ್ವೆಯ ಪ್ರಕಾರ, AAP 21 ರಿಂದ 31 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆಯಂತೆ. ಇನ್ನೂ ಈ ಸಮೀಕ್ಷೆ ಕೂಡಾ ಬಿಜೆಪಿಗೆ ಅಧಿಕಾರ ಕೊಟ್ಟಿದ್ದು, 39 ರಿಂದ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದಯಂತೆ. ಇನ್ನೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲ್ಲಬಹುದು ಅಂತ ಹೇಳಿದೆ. ಇತರೆ ಯಾವುದೇ ಅಭ್ಯರ್ಥಿ ಗೆಲ್ಲಲ್ಲ ಅಂತ ಸಮೀಕ್ಷೆ ಹೇಳಿದೆ.
ದೈನಿಕ್ ಭಾಸ್ಕರ್
ಎಲ್ಲಾ ಸಮೀಕ್ಷೆಗಳು ಬಿಜೆಪಿಗೆ ಅಧಿಕಾರ ಅಂತ ಹೇಳ್ತಿದ್ರೆ ದೈನಿಕ್ ಭಾಸ್ಕರ್ ಮಾತ್ರ AAPಗೆ ಅಧಿಕಾರ ಅಂತ ಹೇಳ್ತಿದೆ. ಎಎಪಿ 43 ರಿಂದ 47 ಸ್ಥಾನಗಳಲ್ಲಿ ಗೆಲ್ಲಲಿದೆಯಂತೆ. ಬಿಜೆಪಿ 23 ರಿಂದ 27 ಸ್ಥಾನ ಮಾತ್ರ ಗೆಲ್ಲಲಿದೆಯಂತೆ. ಕಾಂಗ್ರೆಸ್ ಯಾವುದೇ ಸ್ಥಾನವಿಲ್ಲ. ಪಕ್ಷೇತರ ಯಾವುದೇ ಅಭ್ಯರ್ಥಿ ಗೆಲ್ಲಲ್ಲ ಅಂತ ದೈನಿಕ್ ಭಾಸ್ಕರ್ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಬೇಕು ಎಂಬ ಕೇಜ್ರಿವಾಲ್ ಕನಸು ನುಚ್ಚು ನೂರಾಗಿದೆ ಅಂತ ಸರ್ವೆಗಳು ಹೇಳ್ತಿವೆ. 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುತ್ತೆ ಅಂತ ಸಮೀಕ್ಷೆಗಳು ಷರಾ ಬರೆದಿವೆ. ಆದ್ರೆ, ಮತದಾರ ಪ್ರಭುಗಳು ಬರೆದಿರೋ ಅಭ್ಯರ್ಥಿಗಳು, ಪಕ್ಷಗಳ ಅಸಲಿ ಹಣೆಬರಹ ಫೆಬ್ರವರಿ 8ರಂದು ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us