newsfirstkannada.com

ಹೆಂಡತಿಗೆ ಬುದ್ಧಿ ಕಲಿಸಬೇಕು ಎಂದು 29 ವರ್ಷದ ಮಗನಿಗೆ 15 ಬಾರಿ ಚಾಕು ಚುಚ್ಚಿ ಕೊಂದ ಪಾಪಿ ಅಪ್ಪ

Share :

Published March 9, 2024 at 12:00pm

  ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಯಲು

  ಕೆಲವೇ ಗಂಟೆಗಳಲ್ಲಿ ಮಗನಿಗೆ ಮದುವೆ ಆಗುತ್ತಿತ್ತು, ಆದರೆ

  75 ಸಾವಿರ ಹಣ ನೀಡಿ ಮಗನ ಕತೆ ಮುಗಿಸಲು ಮಾಡಿದ್ದ ಪ್ಲಾನ್

ತನ್ನನ್ನು ದೂರ ಮಾಡಿದ ಹೆಂಡತಿಗೆ ಬುದ್ಧಿ ಕಲಿಸಬೇಕು ಎಂದು 29 ವರ್ಷದ ಮಗನನ್ನೇ ಕೊಲೆ ಮಾಡಿದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಲು ಈತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಯೋಜನೆ ರೂಪಿಸಿಕೊಂಡಿದ್ದ ಅನ್ನೋದು ತನಿಖೆಯಿಂದ ಬಯಲಾಗಿದೆ.

54 ವರ್ಷದ ರಂಗ್ ಲಾಲ್ ಕೊಲೆ ಮಾಡಿದ ಆರೋಪಿ. ಫೆಬ್ರವರಿ 6-7ರ ಮಧ್ಯರಾತ್ರಿ ಕೊಲೆ ಮಾಡಿದ್ದಾನೆ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಜೈಪುರದಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿಯು ಜಿಮ್ ಟ್ರೈನರ್ ಆಗಿದ್ದ 29 ವರ್ಷದ ಮಗನನ್ನೇ ಮಾಡದ್ದ. ಗೌರವ್ ಸಿಂಗಲ್ ಕೊಲೆಯಾದ ಜಿಮ್ ಟ್ರೈನರ್.

ಸ್ವಂತ ಮಗನಿಗೆ ದಕ್ಷಿಣ ದೆಹಲಿಯಲ್ಲಿರುವ ನಿವಾಸದಲ್ಲಿ ಬರೋಬ್ಬರಿ 15 ಬಾರಿ ಚಾಕು ಇರಿದಿದ್ದಾನೆ. ಎದೆ, ಮುಖ ಮತ್ತು ಹೊಟ್ಟೆಯ ಭಾಗಕ್ಕೆ ಚಾಕು ಚುಚ್ಚಿದ್ದ. ನಂತರ ಬೇರೆಯವರ ಸಹಾಯ ಪಡೆದ ರಾಕ್ಷಸ, ಗಾಯಗೊಂಡಿದ್ದ ಮಗನನ್ನು ಬೀದಿಯಲ್ಲಿ ಎಸೆದು ಬಂದಿದ್ದರು. ಇನ್ನೊಂದು ವಿಚಾರ ಏನೆಂದರೆ ಕೊಲೆಯಾದ ಮಗನಿಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಕೂಡ ನಡೆಯಲಿತ್ತು ಎನ್ನಲಾಗಿದೆ.

75 ಸಾವಿರ ಕೊಟ್ಟು ಮೂವರ ಸಹಾಯ ಪಡೆದಿದ್ದ

ಫೆಬ್ರವರಿ 7ರ ರಾತ್ರಿ 12.30 ಗಂಟೆಗೆ ಪೊಲೀಸರಿಗೆ ಜಿಮ್ ಟ್ರೈನರ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಕ್ತಸಿಕ್ತವಾಗಿ ಬಿದ್ದದ್ದನ್ನು ಗಮನಿಸಿ ಪೊಲೀಸರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಮೊದಲು ಸಿಸಿಟಿವಿ ಫೂಟೇಜ್​​ಗಳನ್ನು ಗಮನಿಸಿದ್ದಾರೆ. ಒಂದಷ್ಟು ಮಾಹಿತಿಗಳನ್ನು ತಿಳಿದುಕೊಂಡ ನಂತರ ಆರೋಪಿಯ ಫೋನ್ ನಂಬರ್​ಗೆ ಟ್ರೈ ಮಾಡಿದ್ದಾರೆ. ಆದರೆ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ದಕ್ಷಿಣ ದೆಹಲಿಯ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ಪತ್ನಿ ಮತ್ತು ಮಗನ ಜೊತೆ ಈತನ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಗೊತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ಕೊಲೆ ಮಾಡಲು ತುಂಬಾ ಬುದ್ಧಿವಂತಿಕೆ ವಹಿಸಿದ್ದ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಮೂವರ ಸಹಾಯ ಪಡೆದುಕೊಂಡಿದ್ದ. ಅವರಿಗೆ 75 ಸಾವಿರ ರೂಪಾಯಿ ಹಣವನ್ನು ನೀಡಿದ್ದ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿಗೆ ಬುದ್ಧಿ ಕಲಿಸಬೇಕು ಎಂದು 29 ವರ್ಷದ ಮಗನಿಗೆ 15 ಬಾರಿ ಚಾಕು ಚುಚ್ಚಿ ಕೊಂದ ಪಾಪಿ ಅಪ್ಪ

https://newsfirstlive.com/wp-content/uploads/2024/03/DLHI.jpg

Load More