/newsfirstlive-kannada/media/post_attachments/wp-content/uploads/2025/07/Olympic_winners_AI.jpg)
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಸಿಎಂ ರೇಖಾ ಗುಪ್ತಾ ಅವರ ನೇತೃತ್ವದ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಖೇಲ್ ಪ್ರೋತ್ಸಾಹನ್ ಯೋಜನೆ ಅಡಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮೊತ್ತವನ್ನು ಹೆಚ್ಚಳ ಮಾಡಿದೆ. ಜೊತೆಗೆ ಸರ್ಕಾರಿ ಉದ್ಯೋಗ ಕೂಡ ನೀಡುವುದಾಗಿ ಹೇಳಿದೆ.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೇ ಅವರಿಗೆ 7 ಕೋಟಿ ರೂಪಾಯಿ ನಗದು ಬಹುಮಾನ ಜೊತೆಗೆ ಗ್ರೂಪ್- ಎ ವಿಭಾಗದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುವುದು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರೇ 5 ಕೋಟಿ ರೂಪಾಯಿ ಗ್ರೂಪ್- ಎ ವಿಭಾಗದಲ್ಲಿ ಸರ್ಕಾರಿ ಕೆಲಸ ನೀಡಲಾಗುತ್ತದೆ. ಕಂಚಿನ ಪದಕಕ್ಕೆ ಕೊರೊಳೊಡ್ಡುವ ವಿಜೇತರಿಗೆ 3 ಕೋಟಿ ರೂಪಾಯಿ ಹಾಗೂ ಗ್ರೂಪ್- ಬಿ ವಿಭಾಗದಲ್ಲಿ ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ದೆಹಲಿ ಸಚಿವ ಸಂಪುಟದ ಬಳಿಕ ಮಾತನಾಡಿದ ಸಚಿವ ಆಶಿಶ್ ಸೂದ್ ಅವರು, ಸಿಎಂ ರೇಖಾ ಗುಪ್ತಾ ಅವರ ನೇತೃತ್ವದ ಸಚಿವ ಸಂಪುಟ ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇವಲ ಒಲಿಂಪಿಕ್ ವಿಜೇತರಲ್ಲ, ಇದರ ಜೊತೆಗೆ ಮುಖ್ಯಮಂತ್ರಿ ಖೇಲ್ ಪ್ರೋತ್ಸಾಹನ್ ಯೋಜನೆ ಅಡಿ, ಪ್ಯಾರಾ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಏಷ್ಯನ್ ಪ್ಯಾರಾ ಒಲಿಂಪಿಕ್ಸ್, ಕಾಮನ್ವೆಲ್ತ್ ಮತ್ತು ರಾಷ್ಟ್ರೀಯ ಗೇಮ್ಸ್ನಲ್ಲಿ ವಿಜೇತರಾದವರ ಬಹುಮಾನ ಮೊತ್ತ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ ತಾಯಿ
ರಾಷ್ಟ್ರರಾಜಧಾನಿಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನ, ಬೆಳ್ಳಿ, ಕಂಚು ಗೆದ್ದವರಿಗೆ ಅನುಕ್ರಮವಾಗಿ 7 ಕೋಟಿ ರೂ, 5 ಕೋಟಿ ರೂ ಹಾಗೂ 3 ಕೋಟಿ ರೂಪಾಯಿಗಳನ್ನು ಇನ್ಮುಂದೆ ನೀಡಲಾಗುತ್ತದೆ.
ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನ, ಬೆಳ್ಳಿ, ಕಂಚು ವಿಜೇತರಿಗೆ ನಗದು ಬಹುಮಾನ ಮೊತ್ತ ಅನುಕ್ರಮವಾಗಿ 3 ಕೋಟಿ ರೂ. 2 ಕೋಟಿ ರೂ ಹಾಗೂ 1 ಕೋಟಿ ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ. ಕಾಮನ್ವೆಲ್ತ್ ಗೇಮ್ನಲ್ಲಿ 2 ಕೋಟಿ ರೂ. 1.5 ಕೋಟಿ ರೂಪಾಯಿ ಹಾಗೂ 1 ಕೋಟಿ ರೂಪಾಯಿ ನೀಡಲಾಗುತ್ತದೆ. ರಾಷ್ಟ್ರೀಯ ಗೇಮ್ಸ್ನಲ್ಲಿ ಪ್ರತಿ ಪದಕ ವಿಜೇತರಿಗೆ 11 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ