ಮದುವೆಯಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ‘ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗ; ಹುಡುಗಿಯ ತಂದೆ ಮಾಡಿದ್ದೇನು?

author-image
Gopal Kulkarni
Updated On
ಮದುವೆಯಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ‘ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗ; ಹುಡುಗಿಯ ತಂದೆ ಮಾಡಿದ್ದೇನು?
Advertisment
  • ಮದುವೆ ಮಂಟಪದಲ್ಲಿ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ ವರ
  • ಹುಡುಗನ ಡ್ಯಾನ್ಸ್ ನೋಡಿ ರೊಚ್ಚಿಗೆದ್ದ ವಧುವಿನ ತಂದೆ ಮಾಡಿದ್ದೇನು
  • ಮಗಳು ಕಣ್ಣೀರಿಟ್ಟರು ಕರಗಲಿಲ್ಲ, ಅಳಿಯ ಗೋಗರೆದರೂ ಒಪ್ಪಲಿಲ್ಲ

ಒಂದು ಮದುವೆ ಅಂದ್ರೆ ಅಲ್ಲಿ ಸಂಭ್ರಮ ಕಳೆಗಟ್ಟಿರುತ್ತದೆ. ಅಲ್ಲಿ ಹಾಡು, ಡ್ಯಾನ್ಸು, ಕೀಟಲೆಗಳು, ಗೋಳಾಟಗಳು ಸಂಬಂಧಿಕರ ಮಾತುಗಳು ಎಲ್ಲವೂ ಇರುತ್ತವೆ. ಅದರಲ್ಲೂ ಮದುವೆ ಆಗುವ ಹುಡುಗ ಇಲ್ಲ ಹುಡುಗಿಯಿಂದ ಡ್ಯಾನ್ಸ್ ಮಾಡಿಸಿ ಖುಷಿಪಡೋದು ಕೂಡ ಇರುತ್ತದೆ. ಆದ್ರೆ ಇಲ್ಲಿ ಮಧಮಗ ಡ್ಯಾನ್ಸ್ ಮಾಡಿದ ಎಂಬ ಒಂದೇ ಒಂದು ಕಾರಣಕ್ಕೆ ವಧುವಿನ ತಂದೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಮಗಳನ್ನು ಮನೆಗೆ ಕರೆದುಕೊಂಡು ಹೋದ ಘಟನೆ ನಡೆದಿದೆ.

ದೆಹಲಿಯಲ್ಲೊಂದು ಇಂತಹ ವಿಚಿತ್ರ ಘಟನೆ ನಡೆದಿದ್ದು, ಮದುವೆಗೆ ತಯಾರಾಗಿದ್ದ ವರ ಹಿಂದಿಯ ಮಾಧುರಿ ದೀಕ್ಷಿತ್ ಅವರ ಸೂಪರ್ ಹಿಟ್ ಹಾಡು ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದನ್ನು ಕಂಡ ಹುಡುಗಿಯ ತಂದೆಗೆ ಅದ್ಯಾಕೆ ಕೋಪ ಬಂತೋ ಗೊತ್ತಿಲ್ಲ ಕೂಡಲೇ ಮದುವೆಯನ್ನೇ ರದ್ದುಗೊಳಿಸಿ ಸಂಬಂಧಿಕರ ಜೊತೆ ತಮ್ಮ ಮಗಳನ್ನು ಕರೆದುಕೊಂಡು ವಾಪಸ್ ಹೋಗಿದ್ದಾರೆ.

ಇದನ್ನೂ ಓದಿ:10 ಲಕ್ಷಕ್ಕಾಗಿ ಗಂಡನ ಕಿಡ್ನಿ ಮಾರಿಸಿದ ಕಿಲಾಡಿ ಹೆಂಡತಿ; ಆಮೇಲೆ ಆಕೆ ಮಾಡಿದ್ದೇ ಅನಾಹುತ ಕೆಲಸ

ಅಲ್ಲಿದ್ದವರು ಹೇಳುವ ಪ್ರಕಾರ ಮದುಮಗ ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ಬಂದ. ಅವರ ಸ್ನೇಹಿತರು ಮದುಮಗನಿಗೆ ಡ್ಯಾನ್ಸ್​ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆರಂಭದಲ್ಲಿ ಆತ ನಿರಾಕರಿಸಿದ್ದಾನೆ. ಆದರೆ ಮದುವೆಗೆ ಬಂದಿದ್ದ ಕೆಲವು ಅತಿಥಿಗಳು ಹೋಗು ಡ್ಯಾನ್ಸ್ ಮಾಡಿ ಎಂಜಾಯ್ ಮಾಡು ಎಂದಿದ್ದಾರೆ. ಕೂಡಲೇ ಮದುಮಗ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಹೆಜ್ಜೆ ಹಾಕಲು ಶುರು ಮಾಡಿದ್ದಾನೆ. ಮದುಮಗನ ಈ ವರ್ತನೆಯಿಂದ ಬೇಜಾರಾದ ಮದುಮಗಳ ತಂದೆ ಮದುವೆಯನ್ನೇ ರದ್ದುಗೊಳಿಸಿದ್ದಾರೆ.

ಸಿಟ್ಟಿಗೆದ್ದ ತಂದೆ ಕೂಡಲೇ ಮದುವೆ ಕ್ಯಾನ್ಸಲ್ ಮಾಡಿ. ಹುಡುಗ ಮಾಡಿದ್ದು ನಮ್ಮ ಇಡೀ ಕುಟುಂಬದ ಮೌಲ್ಯವನ್ನೇ ಅವಮಾನಿಸಿದೆ. ನನ್ನ ಮಗಳ ಮದುವೆ ಇಂತವನ ಜೊತೆ ಬೇಡ ಎಂದು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಹುಡುಗ ತನ್ನ ಮಾವನನ್ನು ಒಪ್ಪಿಸಲು ತುಂಬಾ ಪ್ರಯತ್ನಪಟ್ಟಿದ್ದಾನೆ. ಇದು ಕೇವಲ ಮನರಂಜನೆಗೆ ಮಾಡಿದ್ದು ಎಂದು ಹೇಳಿದ್ದಾನೆ. ಮಗಳು ಕೂಡ ಕಣ್ಣೀರಿಟ್ಟು ನಿಮ್ಮ ನಿರ್ಧಾರ ಬದಲಿಸಿ ಎಂದು ತಂದೆಗೆ ಗೋಗರೆದಿದ್ದಾಳೆ ಆದರೂ ಇದ್ಯಾವುದಕ್ಕೂ ಒಪ್ಪದ ಹುಡುಗಿಯ ತಂದೆ ಮದುವೆಯನ್ನು ನಿಲ್ಲಿಸಿ ಮನೆಗೆ ಹೊರಟು ಹೋಗಿದ್ದಾರೆ.

ಇದನ್ನೂ ಓದಿ:ಕನ್ನಡಿ ಹಿಡಿದುಕೊಂಡು ನಿಂತ ಗಂಡ.. ಮೇಕಪ್ ಮಾಡಿಕೊಂಡ ಹೆಂಡತಿ; ಮಹಾಕುಂಭಮೇಳದ ವಿಡಿಯೋ ವೈರಲ್​

ಇನ್ನು ವಧುವಿನ ಸಂಬಂಧಿಕರು ಹೇಳುವ ಪ್ರಕಾರ ಹುಡುಗಿಯ ತಂದೆಗೆ ಈ ಮುಂಚೆಯೇ ಈ ಮದುವೆಯ ಬಗ್ಗೆ ಸಿಟ್ಟು ಇತ್ತಂತೆ. ತುಂಬಾ ದಿನಗಳಿಂದ ಮಗಳಿಗೆ ಹಾಗೂ ಹುಡುಗನಿಗೆ ಸಂಪರ್ಕವೇ ಮಾಡದಂತೆ ಮದುವೆಯಾಗುವವರೆಗೂ ಮಾತನಾಡದಂತೆ ಕಟ್ಟುನಿಟ್ಟಾಗಿ ಆಜ್ಞೆ ಮಾಡಿದ್ದರಂತೆ. ಹುಡುಗ ಡ್ಯಾನ್ಸ್ ಮಾಡಿದ್ದು ಅವರಿಗೆ ಮದುವೆ ನಿಲ್ಲಿಸಲು ಒಂದು ನೆಪವಾಯಿತಷ್ಟೇ ಎನ್ನುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment