Advertisment

ಸೆಲೆಬ್ರಿಟಿಗಳ ಚೆಫ್ ಕುನಾಲ್ ಕಪೂರ್‌ ದಾಂಪತ್ಯಕ್ಕೆ ಬ್ರೇಕ್‌.. ಡಿವೋರ್ಸ್‌ ಸಿಗಲು ಕಾರಣವೇನು?

author-image
Veena Gangani
Updated On
ಸೆಲೆಬ್ರಿಟಿಗಳ ಚೆಫ್ ಕುನಾಲ್ ಕಪೂರ್‌ ದಾಂಪತ್ಯಕ್ಕೆ ಬ್ರೇಕ್‌.. ಡಿವೋರ್ಸ್‌ ಸಿಗಲು ಕಾರಣವೇನು?
Advertisment
  • ಪ್ರಸಿದ್ಧ ಸೆಲೆಬ್ರಿಟಿ ಚೆಫ್ ಕುನಾಲ್ ಕಪೂರ್‌ ಹಾಗೂ ಪತ್ನಿ ಮಧ್ಯೆ ಆಗಿದ್ದೇನು?
  • 2008ರ ಏಪ್ರಿಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಚೆಫ್ ಕುನಾಲ್ ಕಪೂರ್‌
  • ಸಾರ್ವಜನಿಕ ಗಮನ ಸೆಳೆಯಲು ಕುನಾಲ್ ಕಪೂರ್‌ ಪತ್ನಿ ಹೀಗೆ ಏಕೆ ಮಾಡ್ತಾ ಇದ್ರು?

ಬಾಲಿವುಡ್‌ ಸೆಲೆಬ್ರಿಟಿಗಳ ಚೆಫ್ ಕುನಾಲ್ ಕಪೂರ್‌ಗೆ ಕೊನೆಗೂ ಬಿಗ್​ ರಿಲೀಫ್ ಸಿಕ್ಕಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗೆ ಸಿಲುಕಿದ್ದ ಖ್ಯಾತ ಚೆಫ್ ಆಗಿದ್ದ ಕುನಾಲ್ ಕಪೂರ್‌ ಅವರಿಗೆ ದೆಹಲಿ ಹೈಕೋರ್ಟ್‌ ಡಿವೋರ್ಸ್‌ ಮಂಜೂರು ಮಾಡಿದೆ. ಕುನಾಲ್ ಕಪೂರ್‌ ಅವರ ಡಿವೋರ್ಸ್‌ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Advertisment

ಇದನ್ನೂ ಓದಿ: ಅರ್ಧ ಕೋಟಿ ಐಷಾರಾಮಿ ಕಾರು ಖರೀದಿಸಿದ ಕಾಟೇರ ನಿರ್ದೇಶಕ ತರುಣ್ ಸುಧೀರ್​; ವಿಡಿಯೋ ನೋಡಿ!

ವಿಚ್ಛೇದನ ಪಡೆದಿರುವ ಕುನಾಲ್ ಕಪೂರ್‌ 2008ರ ಏಪ್ರಿಲ್‌ನಲ್ಲಿ ವಿವಾಹ ಆಗಿದ್ದರು. 2012ರಲ್ಲಿ ಕುನಾಲ್ ದಂಪತಿಗೆ ಒಂದು ಮಗ ಕೂಡ ಜನಿಸಿತ್ತು. ಇದಾದ ಬಳಿಕ ಕುನಾಲ್ ಕಪೂರ್‌ ಪತ್ನಿಯೂ ಅವರ ತಂದೆ ಹಾಗೂ ತಾಯಿಯನ್ನು ಗೌರವದಿಂದ ಕಾಣುತ್ತಿರಲಿಲ್ಲವಂತೆ. ಸದಾ ಅವಮಾನಿಸುತ್ತಿದ್ದರು ಜೊತೆಗೆ ಗೇಲಿ ಮಾಡುತ್ತಿದ್ದರಂತೆ. ಇದಲ್ಲದೇ ಪತ್ನಿ ಆಗಾಗ ಪೊಲೀಸರಿಗೆ ಕರೆ ಮಾಡುತ್ತಿದ್ದರು. ಜೊತೆಗೆ ಸಾರ್ವಜನಿಕ ಗಮನ ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ವದಂತಿಗಳನ್ನು ಹರಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಕುನಾಲ್ ಕಪೂರ್‌ ಆರೋಪಿಸಿದ್ದಾರೆ.

publive-image

ಈ ಕೇಸ್​ನಲ್ಲಿ ಪತ್ನಿ ಗಂಡನಿಗೆ ಗೌರವ ಸಹಾನುಭೂತಿಯಾಗಿ ಇಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ತನ್ನ ಬಾಳ ಸಂಗಾತಿಯು ಬಗ್ಗೆ ಇಂತಹ ಸ್ವಭಾವವನ್ನು ಹೊಂದಿದ್ದರೆ ಅದು ಮದುವೆಗೆ ಒಂದು ದೊಡ್ಡ ಕಳಂಕ ತರುತ್ತದೆ. ಹೀಗಿದ್ದರು ಅವರು ಒಟ್ಟಿಗೆ ಸಂಕಟವನ್ನು ಸಹಿಸಿಕೊಂಡು ಬದುಕಲು ಅಸಾಧ್ಯ. ಇದನ್ನು ಏಕೆ ಒತ್ತಾಯಿಸಬೇಕು ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ಹೇಳಿದೆ. ಹೀಗಾಗಿ ಖ್ಯಾತ ಚೆಫ್ ಕುನಾಲ್ ಕಪೂರ್ ಅವರ ಪತ್ನಿಯಿಂದ ದೆಹಲಿ ಹೈಕೋರ್ಟ್ ವಿಚ್ಛೇದನವನ್ನು ನೀಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment