newsfirstkannada.com

ಮದುವೆಗಾಗಿ ಮತಾಂತರ.. ಹೈಕೋರ್ಟ್​ನಿಂದ ಮಹತ್ವದ ಗೈಡ್​ಲೈನ್ಸ್​..!

Share :

Published January 20, 2024 at 7:29am

    ಮದ್ವೆಗಾಗಿ ಧರ್ಮ ಬದಲಾಯಿಸೋರಿಗೆ ಅಫಿಡವಿಟ್ ಕಡ್ಡಾಯ

    ಪ್ರಮಾಣ ಪತ್ರದಲ್ಲಿ ಏನೆಲ್ಲ ಇರಬೇಕು ಎಂದು ತಿಳಿಸಿರುವ ಕೋರ್ಟ್

    ಮತಾಂತರಕ್ಕೆ ಕಾನೂನು ರಚಿಸಲು ಕೋರ್ಟ್​ನಿಂದ ಸಾಧ್ಯವಿಲ್ಲ-ಜಡ್ಜ್

ಮದುವೆಯಾಗಲು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಮದುವೆಗೋಸ್ಕರ ಮತಾಂತರ ಆಗಲು ಹೆಣ್ಣು ಅಥವಾ ಗಂಡು ನಿರ್ಧರಿಸಿದ್ದರೆ, ಕಾನೂನಾತ್ಮಕವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಿದೆ.

ಮತಾಂತರಗೊಂಡು ಮದುವೆ ಆಗಲು ನಿರ್ಧರಿಸಿರೋರಿಗೆ ಗೈಡ್​​ಲೈನ್ಸ್ ಸೂಚಿಸಿರುವ ಹೈಕೋರ್ಟ್​, ಧರ್ಮ ಬದಲಾಯಿಸೋರು ಅದನ್ನು ಪಾಲಿಸಬೇಕು ಎಂದು ಹೇಳಿದೆ. ಇದೇ ವೇಳೆ ಕೇವಲ ಮದುವೆ ಉದ್ದೇಶಕ್ಕಾಗಿ ಹಾಗೂ ಕಾನೂನಿಂದ ತಪ್ಪಿಸಿಕೊಳ್ಳಲು ಕೆಲವರು ಮತಾಂತರಗೊಳ್ತಿರುವ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಧಾರ್ಮಿಕ ಮತಾಂತರಕ್ಕೆ ಕೋರ್ಟ್ ಸೂಚಿಸಿರುವ ಗೈಡ್​​ಲೈನ್ಸ್​ನಲ್ಲಿ, ವ್ಯಕ್ತಿ ತಾನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕನ್ವರ್ಟ್ ಆಗಲು ಇರುವ ಒಪ್ಪಿಗೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲು ತಿಳಿಸಿದೆ. ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸೋದು ಕಡ್ಡಾಯ ಎಂದು ಕೋರ್ಟ್ ಹೇಳಿದೆ.

ಕೋರ್ಟ್ ಹೇಳಿರೋದೇನು..?

ಧರ್ಮ ಬದಲಾಯಿಸುವ ಜೋಡಿ ತಮ್ಮ ಉದ್ದೇಶವನ್ನು ಸರಿಯಾಗಿ ಸ್ಪಷ್ಟಪಡಿಸಬೇಕು. ತಮ್ಮ ನಿರ್ಧಾರದ ನಂತರ ಆಗುವ ಪರಿಣಾಮಗಳ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ತಿಳಿಸಬೇಕು. ಮತಾಂತರಗೊಳ್ಳುತ್ತಿರುವ ವ್ಯಕ್ತಿ ಸಲ್ಲಿಸಿರುವ ಪ್ರಮಾಣ ಪತ್ರ ಅವರಿಗೆ ಅರ್ಥ ಆಗಿದೆಯೇ ಎಂದು ಅಧಿಕಾರಿಗಳು ಖಚಿತ ಮಾಡಿಕೊಳ್ಳಬೇಕು. ಅದೇ ಕಾರಣಕ್ಕೆ ಅದು ವ್ಯಕ್ತಿಯ ಸ್ಥಳೀಯ ಭಾಷೆಯಲ್ಲಿ ಇರಬೇಕು.

ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನಡೆಯುವ ಮದುವೆಗಳನ್ನು ಹೊರತುಪಡಿಸಿ, ಮತಾಂತರಗೊಂಡ ನಂತರ ಅಂತರ್ ಧರ್ಮೀಯ ವಿವಾಹದ ಸಂದರ್ಭದಲ್ಲಿ ಜೋಡಿಯ ವಯಸ್ಸು, ವೈವಾಹಿಕ ಇತಿಹಾಸ, ವೈವಾಹಿಕ ಸ್ಥಿತಿ, ಪುರಾವೆಗಳ ಬಗ್ಗೆಯೂ ಅಫಿಡವಿಡ್​ನಲ್ಲಿ ಮಾಹಿತಿ ಇರಬೇಕು. ಅದನ್ನು ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಸ್ವ-ಇಚ್ಛೆಯಿಂದ ಧರ್ಮ ಬದಲಾಯಿಸಿಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಅಧಿಕಾರಿಗಳು ಮದುವೆ ಪ್ರಮಾಣ ಪತ್ರ ನೀಡಬೇಕು. ಅದು ಸ್ಥಳೀಯ ಭಾಷೆಯಲ್ಲಿ ಇರಬೇಕು ಎಂದು ಒತ್ತಿ ಹೇಳಿದೆ.

ಈ ಮಾರ್ಗ ಸೂಚಿಯು ಈಗಾಗಲೇ ಒಂದು ಧರ್ಮಕ್ಕೆ ಮತಾಂತರಗೊಂಡು, ಬಳಿಕ ಮತ್ತೆ ತನ್ನ ಮೂಲ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಯಾಕಂದರೆ ತನ್ನ ಮೂಲ ಧರ್ಮದ ಬಗ್ಗೆ ಆ ವ್ಯಕ್ತಿ ಚೆನ್ನಾಗಿ ತಿಳಿದುಕೊಂಡಿರುತ್ತಾನೆ ಅನ್ನೋದು ಕೋರ್ಟ್​ನ ಅಭಿಪ್ರಾಯ. ಇನ್ನು ಮತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ರಚಿಸಲು ಕೋರ್ಟ್​​ನಿಂದ ಸಾಧ್ಯವಿಲ್ಲ. ಮತಾಂತರಕ್ಕೆ ಯಾವುದೇ ವಿಧಾನವನ್ನೂ ಸೂಚಿಸುತ್ತಿಲ್ಲ. ಆದರೆ ಸಂಸತ್ತು ಜಾರಿಗೊಳಿಸಿದ ಲೋಪದೋಷ ಇದ್ದಾಗ ಕೋರ್ಟ್​ಗಳ ಮೆಟ್ಟಿಲೇರಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಗಾಗಿ ಮತಾಂತರ.. ಹೈಕೋರ್ಟ್​ನಿಂದ ಮಹತ್ವದ ಗೈಡ್​ಲೈನ್ಸ್​..!

https://newsfirstlive.com/wp-content/uploads/2023/08/Marriage.jpg

Load More